ಢವಳಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬೀಜ ವಿತರಣೆ. FID ಮತ್ತು ಆಧಾರ ಕಾರ್ಡ್ ಕಡ್ಡಾಯ.

Jun 1, 2026 - 15:14
 0  12

ಢವಳಗಿ:- ಗ್ರಾಮದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರದಂದು ಮುಂಗಾರು ಹಂಗಾಮಿನ ಬೀಜಗಳಾದ ತೋಗರಿ, ಹೆಸರು, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು. ವಿತರಣೆ ಮಾಡಿ ಮಾತನಾಡಿದ ಕೃಷಿ ಅಧಿಕಾರಿ ಗೋವಿಂದರೇಡ್ಡಿ ಮೆದಕಿನಾಳ ಅವರು ನಮ್ಮಲ್ಲಿ ಬೀಜಗಳು ಸ್ಟಾಕ್ ಇವೆ. ರೈತರು ಕೃಷಿ ಇಲಾಖೆಗೆ ಬರುವಾಗ FID ನಂಬರ್ ಮತ್ತು ಆಧಾರ ಕಾರ್ಡ್ ನ್ನು ಕಡ್ಡಾಯವಾಗಿ ತೆಗೆದುಕೊಂಡು ಬರಬೇಕು. ಹಾಗೂ ಮನೆಯಲ್ಲಿರುವ ತೋಗರಿ ಬೀಜಕ್ಕೆ ಬಿತ್ತುವ ಮುನ್ನ ಬೀಜೋಪಚಾರ ಮಾಡಿ ಬಿತ್ತನೆ ಮಾಡಬೇಕು ಎಂದು ಹೇಳಿದರು. ಇದೆ ವೇಳೆಯಲ್ಲಿ ಸಿಬ್ಬಂದಿಗಳಾದ ಸಂಗಮೇಶ ಸಜ್ಜನ, ಸಂಗಮೇಶ ಚೌದ್ರಿ, ಶರಣು ಪಾಟೀಲ, ನಾಗರಾಜ ಹಳಬರ, ಸಂಗನಗೌಡ ರಬಿನಳ್ಳಿ, ಭಾರತಿ ಮೀಸಿ, ವಿಜಯಲಕ್ಷ್ಮಿ ಬಿರಾದಾರ ಹಾಗೂ ರೈತರಾದ  ಸಿದ್ದಪ್ಪ ಕಲ್ಲಪ್ಪಗೊಳ್, 
ಶಿವಪ್ಪ ಗುಂಡಲಗೇರಿ, ಬಸಮ್ಮ ವಾಲಿಕಾರ, ನಿಂಗಮ್ಮ ಬೀರಗೊಂಡ, ಭೀಮನಗೌಡ ಹ ಮೇಟಿ, ಶಾಂತಗೌಡ್  ಬಿರಾದಾರ, ಸೇರಿದಂತೆ ಇನ್ನಿತರರು ಇದ್ದರು.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott