ತಪ್ಪಿನರಿವು
ಸದ್ದು ಮಾಡದೆ ಕದ್ದ
ಹಣವನು ಜೇಬಿಗಿರಿಸಿದ
ಕಿಟ್ಟಿಯನ್ನು ನೋಡಿ
ಬಿಟ್ಟನು ರಾಮನು
ಇದನು ಕಂಡ ಕಿಟ್ಟಿಯು
ಕಣ್ಣು ಮಿಟುಕಿಸಿ ಪಾಲು
ಕೊಡುವೆ ಎಂದನು
ಹೊರಗೆ ಕಿಟ್ಟಿಯು
ರಾಮುವನ್ನು
ಕರೆದುಕೊಂಡು ಬೇಲಿ
ಮರೆಗೆ ಹೋದನು
ಕುಳಿತುಕೊಂಡು ಹಂಚಿ
ಕೊಂಡರು ಹಣವನು
ಇದನು ನೋಡುತ್ತಾ
ಬೇಲಿ ಮೇಲೆ ಕುಳಿತುಕೊಂಡ
ಹಾವು ಕುಟುಕಿತು ಕಿಟ್ಟಿಯಾ
ಇದನು ಕಂಡು ಕಿರುಚಿ
ಓಡಿದ ರಾಮನು
ಎಡವಿ ಬಿದ್ದನು
ಕಾಲು ಕೈಗಳು ಪರಚಿ
ಕಿಟ್ಟಿ ರಾಮನ ಎತ್ತಿಕೊಂಡು
ವೈದ್ಯರಲ್ಲಿ ತಂದರು
ಕಳ್ಳತನವು ಮಾಡಬಾರದು
ಕೆಟ್ಟದೆಂದು ಅರಿತರು
ಉದಂತ ಶಿವಕುಮಾರ್
ಕವಿ. ಬೆಂಗಳೂರು-56
ಮೊ:9739758558