ಮಾರೇಹಳ್ಳಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ

Jun 1, 2026 - 01:42
 0  26
ಮಾರೇಹಳ್ಳಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಬ್ರಹ್ಮರಥೋತ್ಸವ

ಮಳವಳ್ಳಿ ಇತಿಹಾಸ ಪ್ರಸಿದ್ಧ ಹಾಗೂ ಐತಿಹಾಸಿಕ ಸ್ಥಳವಾದ ಮಾರೆಹಳ್ಳಿ ಶ್ರೀ ಲಕ್ಷ್ಮೀನರಸಿಂಹ ಬ್ರಹ್ಮ ರಥೋತ್ಸವವು ಜೂನ್ 3 2026 ರಂದು ಶುಂಠಿ ಗ್ರೀಷ್ಠ ಋತು ಅಧಿಕ ಜೇಷ್ಠ ಮಾಸ ಕೃಷ್ಣ ಪಕ್ಷದ ತೃತೀಯ, ಮಧ್ಯಾಹ್ನ 1.59 ಗಂಟೆಯಿಂದ 2.20 ಗಂಟೆಯೊಳಗೆ ಸಲ್ಲುವ ಶುಭಕನ್ಯಾ ಲಗ್ನದಲ್ಲಿ ವೈಖಾನಸಾಗಮ ರೀತ್ಯಾ ಯಥಾವಿಧಿಯಾಗಿ

ನಡೆಯಲಿದ್ದು 

ಈಗಾಗಲೇ ಧಾರ್ಮಿಕ ಪೂಜಾ ಪುರಸ್ಕಾರಗಳು ಜರುಗುತ್ತಿವೆ .

ದೇವರಿಗೆ ಬಗ್ಗೆ ಬಗ್ಗೆಯ

ಹೂವು ಹಣ್ಣುಗಳಿಂದ ಅಲಂಕಾರ ಮಾಡಿ ಧಾರ್ಮಿಕ ವಿಧಿ ವಿಧಾನಗಳಿಂದ ಹಲವಾರು ಅಭಿಷೇಕಗಳನ್ನು ನೆರವೇರಿಸಲಾಗುತ್ತಿದೆ. ಬ್ರಹ್ಮ ರಥೋತ್ಸವದ ಮರುದಿನ ದೇವರ ಮೂರ್ತಿಯ ಜೊತೆ ತೆಪ್ಪೋತ್ಸವ ನಡೆಸಲಾಗುತ್ತದೆ.

 ಹೊರ ರಾಜ್ಯಗಳಾದ ತಮಿಳು ನಾಡು ಹಾಗೂ ಆಂಧ್ರಪ್ರದೇಶದಿಂದಲೂ ಹಾಗೂ ರಾಜ್ಯದ ವಿವಿಧ ಭಾಗಗಳಿಂದಲೂ ಭಕ್ತರ ದಂಡೆ ಈ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ದೇವಾಲಯವು ಬಹಳ ಪುರಾತನ ಕಾಲದ ದೇವಾಲಯ ವಾಗಿದೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಾಲಯವಾಗಿದೆ.

ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಯು ಲಕ್ಷ್ಮಿಯ ಜೊತೆ ಇರುವುದು ವಿಶೇಷವಾಗಿದೆ ಭಕ್ತರಿಗೆ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವ ಹಾಗೂ

ಸದಾಕಾಲ ಅನುಗ್ರಹ ಕಲ್ಪಿಸುವ ದೇವರಾಗಿದ್ದಾರೆ. 

ಈ ದೇವಾಲಯದ ಸುತ್ತಮುತ್ತ ಹೊಲಗದ್ದೆಗಳಿದ್ದು 

ಹಾಗೂ ದೇವಾಲಯದ ಆವರಣಗಳಲ್ಲಿ ಬೃಹತ್ಕಾರದ ಮರಗಳು ಇದ್ದು ತಣ್ಣನೆಯ ಗಾಳಿ ಬೀಸಿ ಭಕ್ತರಿಗೆ ಏನೋ ಒಂದು ತರಹದ ನೆಮ್ಮದಿ ಸಿಗುವ ತಾಣವಾಗಿದೆ ಸದಾ ಜೀವನದಲ್ಲಿ ಕಲಹಗಳಿಂದ ಬೇಸತ್ತಿರುವ ಜನರಿಗೆ ಇದು ನೆಮ್ಮದಿಯ ತಾಣವಾಗಿದೆ.

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದ ಮುಂಭಾಗ ಶಿವನ ದೇವಾಲಯವಿದೆ ಕಲ್ಲಿನಿಂದ ನಿರ್ಮಿಸಿದ ಎರಡು ಮಂಟಪಗಳಿವೆ 50 ಕ್ಕಿಂತ ಹೆಚ್ಚು ಅಡಿಗಳ ಉದ್ದದ ಗರುಡ 

ಕಂಬವಿದೆ ದೇವಾಲಯದ ಒಳ ಪ್ರವೇಶ ಮಾಡುವ ಸಂದರ್ಭದಲ್ಲಿ ಬೃಹತ್ಕಾರವಾದ ಹೆಬ್ಬಾಗಿಲು ಇದೆ 

ಪ್ರವೇಶ ನಡೆಸಿದ ನಂತರ ಎಡ ಭಾಗದಲ್ಲಿ

 ವೀರಾಂಜನೇಯ ದೇವಾಲಯವಿದೆ ಅನಂತರ ಮುಂದೆ ಮತ್ತೊಂದು ಬಾಗಿಲು ಪ್ರವೇಶ ಮಾಡಿದ ನಂತರ ಗರುಡ ಕಂಬ ಗರುಡ ದೇವರ ಮೂರ್ತಿ ನಮಗೆ ಸಿಗುತ್ತದೆ ಮತ್ತೊಂದು ಪ್ರವೇಶದ ಬಾಗಿಲಿನಲ್ಲಿ ದೊಡ್ಡ ಮೂರ್ತಿಗಳ ಕಲ್ಲಿನ ವಿಗ್ರಹಗಳು ಸಿಗುತ್ತವೆ ಮತ್ತೊಂದು ಬಾಗಿಲು ಪ್ರವೇಶಿಸಿದ ನಂತರ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯು ಶ್ರೀ ಲಕ್ಷ್ಮಿಯ ಜೊತೆ ನೆಲೆಸಿರುವ ಮೂರ್ತಿಯ ದರ್ಶನ ನಮಗೆ ದೊರಕುತ್ತದೆ. 

ದೇವಸ್ಥಾನದ ಎಡಭಾಗದಲ್ಲಿ ಗಣೇಶ ಮೂರ್ತಿ ಇದೆ ದೇವಾಲಯದ ಹಿಂಭಾಗ ಭೂದೇವಿಯ ಗರ್ಭಗುಡಿಯಿದೆ ಮುಂದೆ ಸಾಗಿದರೆ ನೀಲಾ ದೇವಿ ಗರ್ಭಗುಡಿಯಿದೆ ದೇವಾಲಯದ ಒಳಭಾಗ ಕಲ್ಲಿನ ಕಂಬಗಳಿಂದ ನಿರ್ಮಾಣ ಮಾಡಿದ ದೇವಾಲಯವಾಗಿದೆ.

ಬೆಂಗಳೂರಿನಿಂದ ಬರುವ ಭಕ್ತರಿಗೆ 110 ಕಿ.ಮೀ ಮೈಸೂರಿನಿಂದ 55 ಕಿ.ಮೀ ಮಾತ್ರ ಆಗುತ್ತದೆ.

ಮಳವಳ್ಳಿ ಪಟ್ಟಣಕ್ಕೆ ಬಂದು ಮಾರೇಹಳ್ಳಿ ಸ್ವಲ್ಪ ಮುಂದೆ ಸಾಗಿದರೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದೇವಾಲಯಕ್ಕೆ ಹೋಗುವ ಪ್ರವೇಶ ದ್ವಾರ ಸಿಗುತ್ತದೆ , ಅಲ್ಲಿಂದ ಮುಂದೆ ಸಾಗಿದರೆ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ದಿವ್ಯ ದರ್ಶನ ನಮಗೆ ಆಗುತ್ತದೆ.

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott