ಕೃಷಿ ಉತ್ಪನ್ನಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಮರಚಿಕೆ-ಮೂಲಭೂತ ಸೌಕರ್ಯಗಳಿಂದ ವಂಚಿತ

Jun 5, 2026 - 11:50
 0  13
ಕೃಷಿ ಉತ್ಪನ್ನಮಾರುಕಟ್ಟೆ ಆವರಣದಲ್ಲಿ ಸ್ವಚ್ಛತೆ ಮರಚಿಕೆ-ಮೂಲಭೂತ ಸೌಕರ್ಯಗಳಿಂದ ವಂಚಿತ

       ಭಾಗ್ಯನಗರ: ತಾಲ್ಲೂಕು ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಸ್ಥಳೀಯ ಎಪಿಎಂಸಿ ಆಡಳಿತ ಮಂಡಳಿ ಸಮರ್ಪಕವಾಗಿ ಸ್ವಚ್ಛತಾ ಕಾರ್ಯ ಮರೆತಿರುವುದರಿಂದ ಇಡೀ ಮಾರುಕಟ್ಟೆ ಪ್ರಾಂಗಣ ಅನೈರ್ಮಲ್ಯಕ್ಕೆ ತುತ್ತಾಗಿ ಮಾರುಕಟ್ಟೆ ವ್ಯಾಪಾರಸ್ಥರ ಮತ್ತು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲೆಂದರಲ್ಲಿಕಸ, ತರಕಾರಿ ತ್ಯಾಜ್ಯದ ಜತೆಗೆ ಮಳೆ ಬಂದರೆ ಇಡೀ ಪ್ರಾಂಗಣವೇ ಕೆಸರುಗದ್ದೆಯಾಗಲಿದ್ದು, ಇದೆಲ್ಲವನ್ನೂ ನೋಡಿದರೆ ವಾಕರಿಕೆ ಉಂಟಾಗಲಿದ್ದು, ನಿತ್ಯವೂ ಈ ನರಕಯಾತನೆಯಲ್ಲಿಕಾಲ ದೂಡುವ ಇಲ್ಲಿನ ರೈತರು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಮಾರುಕಟ್ಟೆ ಪ್ರಾಂಗಣದಲ್ಲಿ ಕೊಳೆತ ತರಕಾರಿ, ತರಕಾರಿಗಳ ತ್ಯಾಜ್ಯ, ಕಸ-ಕಡ್ಡಿಗಳು. ತರಕಾರಿ, ಟೊಮೆಟೊಗಳು ಎಲ್ಲೆಂದರಲ್ಲಿ ರಾಶಿರಾಶಿ. ದುರ್ವಾಸನೆ, ಕೆಟ್ಟು ನಿಂತ ಶುದ್ಧ ಕುಡಿಯುವ ನೀರಿನ ಘಟಕ, ರೈತರಿಗೆ, ಕೃಷಿ ಕೂಲಿಕಾರ್ಮಿಕರಿಗೆ ಕುಡಿಯುವ ನೀರು ಇಲ್ಲ. ಹೀಗೆ ಹತ್ತು ಹಲವಾರು ಸಮಸ್ಯೆಗಳು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪ್ರತಿನಿತ್ಯ ಕಾಣಿಸುತ್ತಿದೆ.

ಪ್ರತಿದಿನ ಕೂಲಿಕಾರ್ಮಿಕರು, ಮಂಡಿ ಮಾಲೀಕರು ಹಾನಿಯಾದ ಹಾಗೂ ಕೊಳೆತ ಟೊಮೆಟೊ, ಹಾಗೂ ತರಕಾರಿಗಳನ್ನು ಕಸದ ಬುಟ್ಟಿಗೆ ಹಾಕದೇ, ರಸ್ತೆಯಲ್ಲಿ ಎಲ್ಲೆಂದರಲ್ಲಿ ಬೀಸಾಡುತ್ತಿದ್ದಾರೆ. ಪ್ರಾಂಗಣದಲ್ಲಿ ಸ್ವಚ್ಛತೆಗೆ ಲಕ್ಷಾಂತರ ಹಣ ನೀಡಲಾಗುತ್ತಿದೆ. ಆದರೆ ಸ್ವಚ್ಛತೆ ಮರೀಚಿಕೆ ಆಗಿದೆ. ಇದರಿಂದ ರಸ್ತೆಯೆಲ್ಲಾ ಕೊಳೆತ, ಹಾನಿಯಾದ ಟೊಮೆಟೊಗಳ ರಾಶಿಗಟ್ಟಲೇ ಇದೆ. ಕೊಳೆತ ತರಕಾರಿ, ತ್ಯಾಜ್ಯದಿಂದ ದುರ್ನಾತ ಬೀರುತ್ತಿದೆ. ಜನರು ಮೂಗುಮುಚ್ಚಿಕೊಂಡು ಸಂಚರಿಸಬೇಕಾಗಿದೆ.

ಕೊಳೆತ ಹಾಗೂ ತ್ಯಾಜ್ಯ ತರಕಾರಿಗಳ ಮೇಲೆ ಸಂಚರಿಸುವ ಪರಿಸ್ಥಿತಿ ನಿರ್ಮಾಣ ಆಗಿದೆ. ಆದರೆ ಸಮಿತಿಯ ಅಧಿಕಾರಿಗಳು ಮಾತ್ರ ತಮಗೇನೂ ಗೊತ್ತಿಲ್ಲ’ ಎಂಬಂತೆ ವರ್ತಿಸುತ್ತಿದ್ದಾರೆ ಕೂಡಲೇ ಜಿಲ್ಲಾಧಿಕಾರಿಗಳು ಮಾರ್ಕೆಟ್ ದುಸ್ಥಿತಿ ಬಗ್ಗೆ  ಕೂಡಲೇ ಗಮನ ಹರಿಸಬೇಕು ಎಂಬುದು ರೈತರ ಆರೋಪವಾಗಿದೆ.

ಈ ಸಂಧರ್ಭದಲ್ಲಿ ರಮೇಶ್, ಸುಭಾನ್, ವೇಣು. ಮಾಕಿ ರೆಡ್ಡಿ, ಮದ್ದಿ ರೆಡ್ಡಿ ಟಿ ಆರ್ ಎಂ ರಮೇಶ್, ಶ್ರೀನಿವಾಸ್, ಮಂಜುನಾಥ್, ಭಾಷಾ, ಹರೀಶ್, ಅಜಾದ್, ಸತೀಶ್, ನಾರಾಯಣ,ಸೇರಿದಂತೆ ಅನೇಕ ರೈತರು ಮತ್ತು ವರ್ತಕರು ಇದ್ದರು... ವರದಿ ಸುಬ್ಬು ಭಾಗ್ಯನಗರ

What's Your Reaction?

like

dislike

love

funny

angry

sad

wow

suddikirana ಸುದ್ದಿ ಕಿರಣ ಟಿವಿ ಬಾಳಿನ ಬೆಳಕು ಕರ್ನಾಟಕದ ಮಾಹಿತಿ ಮನರಂಜನಾ ಚಾನೆಲ್ ಆಗಿದೆ. ಇದು ಮನರಂಜನೆಯ ಜೊತೆಗೆ ಇತ್ತೀಚಿನ ಸುದ್ದಿ ಮತ್ತು ಮಾಹಿತಿಯನ್ನು ವೀಕ್ಷಕರಿಗೆ ತೋರುತ್ತಿದೆ. ಮತ್ತು ಸಮಾಜವು ತೆಗೆದುಕೊಳ್ಳುವ ದಿಕ್ಕು ಮಾಹಿತಿಯಿಂದ ಪ್ರಭಾವಿತವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಸುದ್ದಿ ಕಿರಣ ಟಿವಿ ಹಲವು ವಿಷಯಗಳಲ್ಲಿ ಪ್ರವರ್ತಕವಾಗಿದೆ. ಇದು ತನಿಖಾ ಪತ್ರಿಕೋದ್ಯಮ. ಮತ್ತು ತಾಂತ್ರಿಕ ಕೈಗಾರಿಕೆಗಳ ವೃತ್ತಿಪರರಿಂದ ಪ್ರಚಾರ ಮಾಡಲ್ಪಟ್ಟ ಚಾನೆಲ್ ಆಗಿದೆ. ಸುದ್ದಿ ಕಿರಣ ಟಿವಿ ಇತ್ತೀಚಿನ ತಂತ್ರಜ್ಞಾನಗಳೊಂದಿಗೆ ಗುಣಮಟ್ಟದ ಸಂಪನ್ಮೂಲಗಳನ್ನು ಸಂಯೋಜಿಸಲು ಪ್ರಯತ್ನಿಸುತ್ತದೆ. Chief Editor B.S.Mallikarjuna Reddy # 560, 3ನೇ ಮಹಡಿ, 1ನೇ ಮುಖ್ಯ ರಸ್ತೆ, ಯಶವಂತಪುರ ಬೆಂಗಳೂರು-560022 Email: suddikiranatv@gmail.com Email:suddikiranaa@gmail.com www.suddikirana.com ಸುದ್ದಿ ಮತ್ತು ಜಾಹೀರಾತಿಗಳಿಗಾಗಿ ಸಂಪರ್ಕಿಸಿ ಕಛೇರಿ:08041505268 , 9686665456 #suddikiranatv #suddikiranaott