ಕೃಷ್ಣರಾಜಪೇಟೆಯಲ 2010ನೇ ಸಾಲಿನ ವಿದ್ಯಾರ್ಥಿಗಳ ಭಾವುಕ ‘ಗುರುವಂದನಾ ಮತ್ತು ಸ್ನೇಹಸಮ್ಮಿಲನ

 ಕೃಷ್ಣರಾಜಪೇಟೆಯಲ 2010ನೇ ಸಾಲಿನ ವಿದ್ಯಾರ್ಥಿಗಳ ಭಾವುಕ ‘ಗುರುವಂದನಾ ಮತ್ತು ಸ್ನೇಹಸಮ್ಮಿಲನ

      ತಾಲೋಕಿನ ಬಳ್ಳೇಕೆರೆ ಸರ್ಕಾರಿ ಪ್ರೌಢಶಾಲೆಯ 2010ನೇ ಸಾಲಿನ ಹಳೆ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಗುರುವಂದನಾ ಮತ್ತು ಸ್ನೇಹಸಮ್ಮಿಲನ ಕಾರ್ಯಕ್ರಮವು ಅಚ್ಚುಕಟ್ಟಾಗಿ ಮತ್ತು ಭಾವುಕವಾಗಿ ನೆರವೇರಿತು.

ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕರಾದ ನರಸಿಂಹಚಾರ್ಯ ರವರು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು 16 ವರ್ಷಗಳ ನಂತರವೂ ತಮ್ಮ ಗುರುಗಳನ್ನು ನೆನೆಸಿಕೊಂಡು ಈ ಮಟ್ಟದ ಸಮಾರಂಭವನ್ನು ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ ಶಿಕ್ಷಕನಿಗೆ ತನ್ನ ವಿದ್ಯಾರ್ಥಿಗಳು ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳುವುದೇ ಅತಿದೊಡ್ಡ ಬಹುಮಾನ. ಇಂದು ನೀವೆಲ್ಲರೂ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ಕಂಡು ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕರಾದ ಬಿ.ಆರ್. ವೆಂಕಟೇಶ್ ಅವರು ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಕಲಿತ ಪಾಠಗಳಿಗಿಂತ, ಬದುಕಿನ ಪಾಠವನ್ನು ನೀವೆಲ್ಲರೂ ಅಳವಡಿಸಿಕೊಂಡಿದ್ದೀರಿ. ಶಾಲೆಗೆ ಮರಳಿ ಬಂದು ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿರುವುದು ಒಂದು ಸುಂದರ ದೃಶ್ಯ. ನಿಮ್ಮ ಈ ಒಗ್ಗಟ್ಟು ಮತ್ತು ಪರಸ್ಪರ ಪ್ರೀತಿ ಸದಾ ಹೀಗೆಯೇ ಮುಂದುವರಿಯಲಿ, ಎಂದು ಹಾರೈಸಿದರು.

ಗೌರವಾರ್ಪಣೆ ಮತ್ತು ಭಾವಪೂರ್ಣ ಶ್ರದ್ಧಾಂಜಲಿ:
ಕಾರ್ಯಕ್ರಮದ ಅತ್ಯಂತ ಭಾವುಕ ಕ್ಷಣವೆಂದರೆ, 2010ನೇ ಸಾಲಿನ ಹಳೆ ವಿದ್ಯಾರ್ಥಿಗಳು ತಮ್ಮೆಲ್ಲಾ ಶಿಕ್ಷಕರನ್ನು ವೇದಿಕೆಗೆ ಹೂವಿನ ಸುರಿಮಳೆಯೊಂದಿಗೆ ಗೌರವಪೂರ್ವಕವಾಗಿ ಆಹ್ವಾನಿಸಲಾಯಿತು,

ಇದೇ ಸಂದರ್ಭದಲ್ಲಿ, ಅಕಾಲಿಕವಾಗಿ ಮರಣ ಹೊಂದಿದ ತಮ್ಮ ಸಹಪಾಠಿಗಳಾದ ಸಿದ್ದರಾಜ್ (ಕಮನಹಳ್ಳಿ), ಭರತ್ (ಚೌಡನಹಳ್ಳಿ), ಉಮೇಶ್ (ನಾರ್ಗೋನಹಳ್ಳಿ), ರೂಪ (ಅರೇಬೂವನಹಳ್ಳಿ), ಸಂತೋಷ್ (ಚೌಡನಹಳ್ಳಿ) ಹಾಗೂ ಶಾಲೆಯ ಸಹಾಯಕ ಸಿಬ್ಬಂದಿ ಮುರುಗಯ್ಯ ಅವರ ನೆನಪಿನಲ್ಲಿ ಮೌನಾಚರಣೆ ಸಲ್ಲಿಸಿ, ಭಕ್ತಿಪೂರ್ವಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮದುವೆಯ ಮನೆಯ ಸಂಭ್ರಮ:ಶಾಲಾ ಆವರಣವು ಬಾಳೆ ಕಂದುಗಳು ಮತ್ತು ಹಸಿರು ತೋರಣಗಳಿಂದ ಸಿಂಗಾರ ಮತ್ತು ಬಣ್ಣದ ಬಣ್ಣದ ರಂಗೋಲಿ ಇಂದ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಹಳೆ ವಿದ್ಯಾರ್ಥಿಗಳೆಲ್ಲರೂ ಅತ್ಯುತ್ತಮ ಉಡುಗೆ-ತೊಡುಗೆಗಳಲ್ಲಿ ಕಂಗೊಳಿಸುತ್ತಿದ್ದು, ಶಾಲೆಗೆ ಒಂದು ಹೊಸ ಕಳೆ ಬಂದಿತ್ತು. ನೆರೆದಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಮದುವೆಯ ಮನೆಯ ಊಟದ ರೀತಿಯಲ್ಲಿಯೇ ವಿಶೇಷ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.

ಕಾರ್ಯಕ್ರಮದ ಅಂತ್ಯದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಕುಣಿದು ಕುಪ್ಪಳಿಸುವ ಮೂಲಕ ಹಳೆಯ ದಿನಗಳನ್ನು ಮತ್ತೆ ಜೀವಂತವಾಗಿಸಿದರು. ಈ ಸ್ನೇಹಸಮ್ಮಿಲನವು ಎಲ್ಲರಿಗೂ ಮರೆಯಲಾರದ ಅನುಭವವನ್ನು ನೀಡಿತು.

ಇದೇ ಸಂದರ್ಭದಲ್ಲಿ 2010ನೇ ಸಾಲಿನ ಶಿಕ್ಷಕರಾದ ಶ್ರೀನಿವಾಸ್ ರವರು. ಪುಟ್ಟರಾಜು ರವರು. ಲತಾ ರವರು. ನೇತ್ರಾವತಿ ರವರು. ರೇಖಾ ರವರು. ಸುನಿಲ್ ರವರು. ಚನ್ನವೀರಗೌಡ ರವರು. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಕಾಮನಹಳ್ಳಿ ರವಿ ರವರು. 2025-2026ನೇ ಸಾಲಿನ ಎಲ್ಲಾ ಶಿಕ್ಷಕ ವೃಂದದವರು ವಿದ್ಯಾರ್ಥಿಗಳು ಮತ್ತು ಪೋಷಕರು ಹಾಗೂ ಅಕ್ಕಪಕ್ಕದ ಗ್ರಾಮಸ್ಥರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು,