ದೆವ್ವ ಬಿಡಿಸುತ್ತೇನೆ ಎಂದು ನಂಬಿಸಿ ಜನರ ಸುಲಿಗೆ ಅಘೋರಿ ಚಂದ್ರನಾಥ್ ಅರೆಸ್ಟ್
ಬೇತಮಂಗಲ: ಮಾಟ, ಮಂತ್ರ , ದೆವ್ವ, ಬೇತಾಳ ಹೆಸರಲ್ಲಿ ಅಮಾಯಕರಿಗೆ ವಂಚನೆ ಮಾಡುತ್ತ, ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದ ಕಳ್ಳ ಸ್ವಾಮೀಜಿ ಚಂದ್ರನಾಥ್ ಅಘೋರಿ (ಉರುಫ್ ಚಂದ್ರ) ಬಂಧಿಸಿದ ಕೆಜಿಎಫ್ ಪೊಲೀಸರು, ಇವನ ಬೇತಾಳ ಶಕ್ತಿ ಪೀಠಕ್ಕೆ ಪೊಲೀಸರು ಬೀಗ ಜಡಿದಿರುವ ಘಟನೆ ಮಂಗಳವಾರ ನಡೆದಿದೆ. ಇದು ಭಯಂಕರ ಕ್ರಿಮಿನಲ್ ಸ್ವಾಮೀಜಿಯ ಒಂದು ಬೇತಾಳ ದ ಕಥೆ: ನಿಮ್ಮ ಮನೆಯಲ್ಲಿ ಯಾರಿಗಾದರೂ ದೆವ್ವ ಹಿಡಿದಿದೆಯಾ, ಹತ್ತು ಸಾವಿರ ಕೊಟ್ರ ಬಿಡಿಸ್ತೀವಿ,ಹುಡುಗಿಯರು ನಿಮ್ಮನ್ನ ಲವ್ ಮಾಡಬೇಕಾ 5 ಸಾವಿರಕ್ಕೆ ಹುಡುಗಿ ನಿಮ್ಮ ಮನೆ ಸುತ್ತ ತಿರುಗುಗಿಸ್ತೀವಿ, ಮಕ್ಕಳು ಆಗಿಲ್ಲವ ಮೂರು ಸಾವಿರ ಖರ್ಚು ಮಾಡಿ ಹತ್ತು ಬೀಗಗಳನ್ನು ಇಲ್ಲಿ ತಾಗುಲಾಕಿ ನಿಮಗೆ ಮಕ್ಕಳು ಗ್ಯಾರಂಟಿ, ಯಾವಾಗಲೂ ಗಂಡ ಹೆಂಡ್ತಿ ಗಲಾಟೆ ಆಗ್ತಾ ಇದೆಯಾ, ನಿಮ್ಮನ್ನ ಒಂದು ಮಾಡ್ತೀನಿ, ನಿಮ್ಮ ಮನೆಯಲ್ಲಿ ಗಂಡಸುರು ಎಣ್ಣೆ ಹಾಕಿಕೊಂಡು ಗಲಾಟೆ ಮಾಡ್ತಾರ, ಎಣ್ಣೆ ಹಾಕೊದನ್ನ ಬಿಡಿಸ್ತೀವಿ, ನಿಮಗೆ ಯಾವುದೇ ಖಾಯಿಲೆ ಇದ್ದರೂ ಡಾಕ್ಟರ್ ಹತ್ರ ಹೋಗ್ಬೇಡಿ ನಾವೇ ವಾಸಿ ಮಾಡ್ತೀವಿ ಎಂದೆಲ್ಲ ಹೇಳಿಕೊಂಡು ಅಮಾಯಕರನ್ನು ಯಾಮಾರಿಸಿ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡಿಕೊಂಡು ಐಶಾರಮಿ ಜೀವನ ನಡೆಸುತ್ತಿದ್ದ ಕಳ್ಳ ಸ್ವಾಮೀಜಿಯನ್ನು ಕೆಜಿಎಫ್ ಪೊಲೀಸರು ಅವನು ಮತ್ತು ಅವನ ಪಟಾಲಂ ಟೀಮನ್ನು ಸೆರೆಹಿಡಿಯುವ ಜೊತೆಗೆ ಸ್ವಯಂ ಘೋಷಿತ ಬೇತಾಳ ಶಕ್ತಿ ಪೀಟಕ್ಕೂ ಬೀಗ ಜಡಿದಿದ್ದಾರೆ.
ಕೆಜಿಎಫ್ ತಾಲೂಕು ಕ್ಯಾಸಂಬಳ್ಳಿ ಹೋಬಳಿ ಐವಾರಹಳ್ಳಿ ಗ್ರಾಮದ ಚಂದ್ರಪ್ಪ ಎಂಬಾತ ತನ್ನದೇ ಜಮೀನಿನಲ್ಲಿ 108 ಅಡಿ ಎತ್ತರದ ಬೇತಾಳ ಪ್ರತಿಮೆಯನ್ನು ಪ್ರತಿಷ್ಟಾಪಿಸಿ ಅದನ್ನು ಭಯಂಕರವಾಗಿ ಕಾಣುವಂತೆ ಮಾಡಿ ಜನರನ್ನು ಭಯದ ವಾತಾವರಣಕ್ಕೆ ತಳ್ಳಿ ಅಮಾಯಕರ ಬಳಿ ಸುಲಿಗೆ ಮಾಡುತ್ತಿದ್ದ,
ಬೇತಾಳ ಶಕ್ತಿ ಪೀಠ ಹೆಸರಲ್ಲಿ ಅನೇಕ ಶಕ್ತಿ ದೇವತೆಗಳ ವಿಗ್ರಹಗಳನ್ನು ಇಟ್ಟು ಅವುಗಳ ಪೂಜೆಯ ಹೆಸರಲ್ಲಿ ವಂಚನೆ ಮಾಡುತ್ತಿದ್ದ , ದೆವ್ವ ಭೂತ ,ಪಿಶಾಚಿ ಎಂದು ಹೇಳಿ ಮಹಿಳೆಯರ ಮೇಲೆ ದೋರ್ಜನ್ಯ ಮಾಡುವ ಮೂಲಕ ಶೋಷಣೆ ಮಾಡಲಾಗುತ್ತಿತ್ತು.ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಿದ್ದ ಇವನ ಕಳ್ಳಾಟ ಕ್ಕೆ ಕೊನೆಗೂ ಪೊಲೀಸರು ಬ್ರೇಕ್ ಹಾಕುವ ಮೂಲಕ ಅಮಾಯಕರ ಮೇಲೆ ನಡೆಯುತ್ತಿದ್ದ ಮಾನಸಿಕ ಹಿಂಸೆ ಕಿರುಕುಳ ಹಾಗೂ ಕಳೆದು ಕೊಳ್ಳುತ್ತಿದ್ದ ಹಣವನ್ನು ಉಳಿಸಿದ್ದಾರೆ, ಮೌಡ್ಯಾಚಾರ ನಿಷೇದ ಮದ್ಯೆಯೂ ಸ್ವಯಂ ಘೋಷಿತ ಅಘೋರಿ ಚಂದ್ರನಾಥ್ ಮತ್ತು ಅವನು ಸಾಕುತ್ತಿದ್ದ ಹತ್ತಾರು ಮಂದಿ ಶಿಷ್ಯ ಸ್ವಾಮೀಜಿಗಳನ್ನು ಸಹ ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ
ಈ ವೇಳೆ ಕೆಜಿಎಫ್ ಜಿಲ್ಲಾ ವರಿಷ್ಟಾಧಿಕಾರಿ ಶಿವಾಂಶು ರಜಪೂತ್ ಮಾತನಾಡಿ, ದೇವಸ್ಥಾನದಲ್ಲಿ ನಡೆಯುತ್ತಿದ್ದ ಚಟುವಟಿಕೆಗಳ ಕುರಿತು ಸಾರ್ವಜನಿಕರ ಹಲವು ದೂರುಗಳು ಮೇರೆಗೆ ಸ್ಥಳಕ್ಕೆ ಭೇಟಿ ನೀಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅಘೋರಿ ಚಂದ್ರನಾಥ್ ಹಾಗೂ ಅವರ ಕೆಲವು ಅನುಚರರನ್ನು ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನು ಪ್ರಕಾರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಾರ್ವಜನಿಕರೇ ಇನ್ನಾದರೂ ನೀವು ಎಚ್ಚರ ಗೊಳ್ಳಬೇಕು ಇಂಥಾ ಕಳ್ಳ ಸ್ವಾಮೀಜಿಗಳು ಹೇಳುವುದನ್ನು,ಮಾಡುವುದನ್ನು ನಂಬಬೇಡಿ ದೇವರನ್ನು ನಂಭಿ ಮೂಢ ನಂಬಿಕೆಗಳಿಗೆ ಬಲಿಯಾಗಬೇಡಿ ಅದರಲ್ಲೂ ನಿಮ್ಮ ಜೀವನದ ಜೊತೆ ಚೆಲ್ಲಾಟ ಆಡುವ ಇಂತಹಾ ಕಳ್ಳ ಸ್ವಾಮೀಜಿಗಳನ್ನು ನಂಬಿದರೆ ನಿಮ್ಮ ಮತ್ತು ನಿಮ್ಮ ಕುಟುಂಬಗಳಲ್ಲಿ ನೆಮ್ಮದಿಯೇ ಇಲ್ಲದಂತಾಗುತ್ತದೆ. ಎಚ್ಚರ,ಎಚ್ಚರ,ಎಚ್ಚರ
ಚಿತ್ರ 01: ಕೆಜಿಎಫ್ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಜಪೂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರ 02: ಬೇತಾಳ ಹೆಸರಿನಲ್ಲಿ ಅಮಾಯಕರಿಗೆ ವಂಚನೆ ಮಾಡುತಿದ್ದ ಸ್ವಾಮೀಜಿ ಅಘೋರಿ ಚಂದ್ರನಾಥ್ ಮತ್ತು ತನ್ನ ಅನುಚರರನ್ನು ಬಂಧಿಸಿರುವುದು