ಪ್ರಕಾಶನಗರ ರಾಯರ ಮಠದಲ್ಲಿ ಟಿಟಿಡಿ ಕಾರ್ಯಕ್ರಮ
ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಹಾಗೂ ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ಪ್ರಕಾಶನಗರ ಇವುಗಳ ಸಂಯುಕ್ತಾಶ್ರಯದಲ್ಲಿ ಜೂನ್ 2 ರಿಂದ 5ರ ವರೆಗೆ ನಾಲ್ಕು ದಿನಗಳ ಕಾಲ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು
ಹಮ್ಮಿಕೊಂಡಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜೂನ್ 2, ಮಂಗಳವಾರ : ಸಂಜೆ 6-00ಕ್ಕೆ-ರಾಜಾಜಿನಗರದ ಅಂಭ್ರಣಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7-00ಕ್ಕೆ-ಶ್ರೀ ರಾಮವಿಠಲಾಚಾರ್ಯರಿಂದ ಧಾರ್ಮಿಕ ಪ್ರವಚನ. ಜೂನ್ 3, ಬುಧವಾರ : ಸಂಜೆ 6-00ಕ್ಕೆ-ಗಿರಿನಗರದ ಶೃತಿ ಸಂಗೀತ ಶಾಲೆಯ ಸದಸ್ಯರಿಂದ ಭಜನೆ, 7-00ಕ್ಕೆ-ಶ್ರೀ ರಾಮವಿಠಲಾಚಾರ್ಯರಿಂದ ಧಾರ್ಮಿಕ ಪ್ರವಚನ. ಜೂನ್ 4, ಗುರುವಾರ : ಸಂಜೆ 6-30ಕ್ಕೆ-"ಹರಿನಾಮ ಸಂಕೀರ್ತನೆ'. ಗಾಯನ : ಕು|| ಅಭಿಜ್ಞ ಪಿ. ಕಶ್ಯಪ್, ಪಿಟೀಲು : ಶ್ರೀ ಎಸ್. ಶಶಿಧರ್, ಮೃದಂಗ : ಶ್ರೀ ಶ್ರೀಧರ್ ರಾವ್. 5, ಶುಕ್ರವಾರ : ಸಂಜೆ 6-00ಕ್ಕೆ-ರಾಜಾಜಿನಗರದ ರುಕ್ಮಿಣಿ ಮಹಿಳಾ ಸಂಘದ ಸದಸ್ಯರಿಂದ ಭಜನೆ, 7-00ಕ್ಕೆ ಶ್ರೀ ರಾಮವಿಠಲಾಚಾರ್ಯರಿಂದ ಧಾರ್ಮಿಕ ಪ್ರವಚನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ತಿಳಿಸಿದ್ದಾರೆ. ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ, ಪ್ರಕಾಶನಗರ, ಬೆಂಗಳೂರು-560021
What's Your Reaction?