ಪ್ಲಾಸ್ಟಿಕ್ ಮುಕ್ತ ಕರ್ನಾಟಕ ನನ್ನ ಗುರಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ. ದೇವೇಗೌಡ

ಪ್ಲಾಸ್ಟಿಕ್ ಮುಕ್ತ ಕರ್ನಾಟಕ ನನ್ನ ಗುರಿ  ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ. ದೇವೇಗೌಡ
ಸುದ್ದಿ ಕಿರಣ ನ್ಯೂಸ್ ಡಿಸ್ಕ್

ಬೆಂಗಳೂರು: ದಾಸರಹಳ್ಳಿ ಪ್ಲಾಸ್ಟಿಕ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಪ್ಲಾಸ್ಟಿಕ್

ತ್ಯಾಜ್ಯಗಳು ನೈಸರ್ಗಿಕ ಪರಿಸರ ವನ್ನು ಹಾಳುಮಾಡುತ್ತದೆ. ಅರೋಗ್ಯಕ್ಕೂ ಮಾರಕವಾದ ಪ್ಲಾಸ್ಟಿಕ್ ನ ಗಂಭೀರತೆ ಅರಿತು ಸರ್ಕಾರ ರಾಜ್ಯದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಸ್ವಾಭಿಮಾನಿ ರೈತ ಪರ್ವ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ.ದೇವೇಗೌಡ ಸರ್ಕಾರಕ್ಕೆ ಒತ್ತಾಯಿಸಿದರು.

ಸ್ವಾಭಿಮಾನಿ ರೈತ ಪರ್ವ ಸಂಘಟನೆಯ ಕೇಂದ್ರ ಕಛೇರಿಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ.ದೇವೇಗೌಡ ಅವರು ಸುದ್ದಿಗೋಷ್ಠಿ ನಡೆಸಿ ಸಂಬಂಧಪಟ್ಟ ಅಧಿಕಾರಗಳ ವಿರುದ್ಧ ಕಿಡಿಕಾರಿದರು.

ಪ್ಲಾಸ್ಟಿಕ್ ನ್ನು ಸರ್ಕಾರ ಬ್ಯಾನ್ ಮಾಡಿದರು ಕೂಡ ಕೆಲವು ಕಡೆ ಹೆಗ್ಗಿಲ್ಲದೆ ರಾಜ ರೋಷವಾಗಿ ನಡೆಯುತ್ತಿದೆ.

ಮಾಲಿನ್ಯದ ಗಂಭೀರತೆಯನ್ನು ಸರ್ಕಾರಗಳು ಆರಿತು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಬೇಕು. ಜನಸಾಮಾನ್ಯರು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಸುಂದರ ಮತ್ತು ಆರೋಗ್ಯಕರ ಪರಿಸರವನ್ನು ನಿರ್ಮಿಸಲು ಕೈಜೋಡಿಸುವುದು ಬಹಳ ಅತ್ಯಗತ್ಯವಾಗಿದೆ ಹಾಗೂ ರೈತ ಈ ದೇಶದ ಬೆನ್ನೆಲುಬು ನಿಷೇದಿತ ಕಾರ್ಖಾನೆಗಳಿಂದ ಪಾಸ್ಟಿಕ್ ನಿಂದ ರೈತರಿಗೆ ಪ್ರತಿನಿತ್ಯ ತೊಂದರೆಯಾಗುತ್ತಿದ್ದು ಅಡಿಕೆ ಬಾಳೆ ಮುತುಗದ ಮರ,ತಾವರೆ ಎಲೆ ಮುಂತಾದ ಬೆಳೆಗಳು ನಾಶವಾಗುತ್ತಿದ್ದು ರೈತರು ವ್ಯವಸಾಯ ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದು ಇದನ್ನು ತಡೆಗಟ್ಟಲು ಸ್ವಾಭಿಮಾನಿ ರೈತ ಪರ್ವ ಸಂಘಟನೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ರಾಜ್ಯಾಧ್ಯಕ್ಷ ಸಿ. ದೇವೇಗೌಡ ಹೇಳಿದರು.

“ನಿಷೇಧಿತ ಕಾರ್ಖಾನೆಗಳಲ್ಲಿ ಕಲರ್ ಕೋಟಿಂಗ್ ಬಣ್ಣದ ಕಲುಷಿತ ನೀರನ್ನು ರಾಜಗಾಲುವೆಗಳಿಗೆ ಬಿಡುತ್ತಿದ್ದು ಕಣ್ಣಾರೆ ಕಂಡು ಸಂಭಂದಪಟ್ಟ ಇಲಾಖೆಗಳಿಗೆ ದೂರು ನೀಡಿ ಕಾರ್ಖಾನೆಗಳನ್ನು ಮುಚ್ಚಿಸಿರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ರಾಜ್ಯ ಉಪಾಧ್ಯಕ್ಷರುಗಳಾದ ರಮೇಶ್ ಸಿಸಿ ಚಂದ್ರಶೇಖರ್ ಕ ಆರ್ ಹಾಗೂ ರಾಜ್ಯ ಕಾರ್ಯಾಧ್ಯಕ್ಷರಾದ ಕೃಷ್ಣಮೂರ್ತಿ ರಾಜ್ಯ ಸಂಘಟನಾ ಕಾರ್ಯದರ್ಶಿ ರಂಗರಾಜು ಹಾಗೂ ರಾಜ್ಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.