ಮಂಡ್ಯ ತಾಲೂಕು ಹೊಳಲು ಗ್ರಾಮದಲ್ಲಿ ವಿಜೃಂಭಣೆಯಿಂದ ನೆರವೇರಿದ ಕೆಂಪೇಗೌಡರ 517ನೇ ಜಯಂತಿ
ಮಂಡ್ಯ ತಾಲೂಕಿನ ಹೊಳಲು ಗ್ರಾಮದ ನಾಡಪ್ರಭು ಕೆಂಪೇಗೌಡರ 517ನೇ ಜಯಂತಿಯನ್ನು ಗ್ರಾಮದ ಕೆಂಪೇಗೌಡರ ಅಭಿಮಾನಿ ಬಳಗ ಹಾಗೂ ಹೊಳಲು ಗ್ರಾಮಸ್ಥರಿಂದ ಇಂದು ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದ ಆವರಣದಲ್ಲಿ ಅವರ ಹುಟ್ಟುಹಬ್ಬ ಆಚರಿಸಲಾಯಿತು.
ಮೊದಲು ಶ್ರೀ ದೊಡ್ಡಮ್ಮತಾಯಿ ದೇವರಿಗೆ ಪೂಜೆ ಸಲ್ಲಿಸಿ ನಂತರ ಕೆಂಪೇಗೌಡರ ಭಾವಚಿತ್ರಕ್ಕೆ ಮಾಜಿ ಶಾಸಕರಾದ ಎಚ್.ಬಿ.ರಾಮು ರವರು ಪುಷ್ಪಾರ್ಚನೆ ಮಾಡುವ ಮುಖಾಂತರ ಹುಟ್ಟುಹಬ್ಬವನ್ನ ಆಚರಿಸಲಾಯಿತು
ನಂತರ ಮಾತನಾಡುತ್ತಾ ಈ ನಾಡಿನ ಜನತೆಗೆ ಆಶ್ರಯದಾತ ಹಾಗೂ ಈ ನಾಡು ಕಟ್ಟಿದಂತಹ ಅಭಿವೃದ್ಧಿ ಹರಿಕಾರ ಈ ದಿನ ಅವರ ಹುಟ್ಟು ಹಬ್ಬವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಅವರು ಮೂಲತಹ ಮಾಗಡಿಯಿಂದ ಬೆಂಗಳೂರಿಗೆ ಬಂದು ಬೆಂಗಳೂರಿನಲ್ಲಿ ನೂರಾರು ಕೆರೆಕಟ್ಟೆಗಳನ್ನು ನಿರ್ಮಿಸಿ ರೈತರಿಗೆ ಹಾಗೂ ಬಡವರಿಗೆ ನೆರವಾಗಿದ್ದರು
ಹಾಗೂ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಯುವಕರು ಮುಂದುವರೆಯಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ರಾಜ್ಯ ಒಕ್ಕಲಿಗರ ಸಂಘದ ಮಾಜಿ ಉಪಾಧ್ಯಕ್ಷರಾದ
ಎಚ್.ಎಲ್. ಶಿವಣ್ಣನವರು ಮಾತನಾಡುತ್ತಾ ಅವರ ತಾತ ಮೂಲತಹ ತಮಿಳಿನ ಮೂಲದವರಾಗಿದ್ದರು ಕಾರಣಾಂತರಗಳಿಂದ ಬೆಂಗಳೂರಿಗೆ ಬಂದು ಒಳ್ಳೆಯ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಈಗಿನ ಬೆಂಗಳೂರಿನಲ್ಲಿ ಸುಮಾರು 64 ಪೇಟೆಗಳನ್ನ ಸೃಷ್ಟಿ ಮಾಡಿದ್ದಾರೆ
ಹಾಗೂ ಬರಿ ಒಕ್ಕಲಿಗರಿಗೆ ಎಲ್ಲಾ ಪ್ರತಿಯೊಂದು ಸಮುದಾಯದವರಿಗೂ ಒಳ್ಳೆಯ ಕೆಲಸಗಳನ್ನು ದೂರ ದೃಷ್ಟಿಯ ಅಭಿವೃದ್ಧಿಯ ಕೆಲಸಗಳನ್ನು ಮಾಡಿ ಹೋಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆ.ಎಸ್.ಎಫ್.ಸಿ ಮಾಜಿ ವ್ಯವಸ್ಥಾಪಕರಾದ ವಿಜಯಕುಮಾರ್ ಕೆಂಪೇಗೌಡರ ಜೀವನ ಚರಿತ್ರೆ ಬಗ್ಗೆ ಸವಿಸ್ತಾರವಾಗಿ ಹೇಳಿದರು
ಹಾಗೂ ಶ್ರೀ ಕೆಂಪೇಗೌಡರ ಅಭಿಮಾನಿ ಬಳಗದ ಅಧ್ಯಕ್ಷರಾದ ತಮ್ಮಣ್ಣ ಮಾತನಾಡುತ್ತಾ ಈ ದಿನ ಅವರ ಹುಟ್ಟುಹಬ್ಬವನ ಸರಳವಾಗಿ ಆಚರಿಸಿದ್ದೇವೆ ಮುಂದಿನ ವರ್ಷದಿಂದ ಬಡ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನದ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುತ್ತೇವೆ ಅದರಿಂದ ಗ್ರಾಮಸ್ಥರು ಸ್ಥಳೀಯ ಸಂಘ ಸಂಸ್ಥೆಯವರು ಸಹಕರಿಸಬೇಕೆಂದು
ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹೆಚ್.ಸಿ. ಹರಿಪ್ರಸಾದ್,
ನಾಡಪ್ರಭು ಕೆಂಪೇಗೌಡರ ಅಭಿಮಾನಿ ಬಳಗದ ಉಪಾಧ್ಯಕ್ಷ ರಾಮಕೃಷ್ಣ, ನಟರಾಜ, ಕೆ.ಪಿ.ಕುಮಾರ್, ಕೆ.ಇ.ಬಿ.ನಟರಾಜ್ ಹಾಗೂ ಸ್ಥಳೀಯ ಸಂಘ ಸಂಸ್ಥೆಯ ಪದಾಧಿಕಾರಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.
ಜಯಂತಿಯ ಪ್ರಯುಕ್ತ ಎಲ್ಲರಿಗೂ ಸಿಹಿ ವಿತರಿಸಲಾಯಿತು .