ಸರಗಳ್ಳತನ ಪ್ರಕರಣದಲ್ಲಿ ೯ ಗಂಟೆಯೊಳಗೆ ಆರೋಪಿಗಳ ಬಂಧನ.
ಕೆಜಿಎಫ್. ಜೂ. ೧೪: ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸಂಭವಿಸಿದ್ದ ಸರಗಳ್ಳತನ ಪ್ರಕರದಲ್ಲಿ ಇಬ್ಬರು ಆರೋಪಿಯನ್ನು ಬಂಧಿಸಿ, ಅವರಿಂದ ರೂ.೬,೭೬,೦೦೦/- ಬೆಲೆ ಬಾಳುವ ೫೨ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜೂ.೧೨ ರಂದು ಆಂಡ್ರಸನ್‌ಪೇಟೆ ಪೊಲೀಸ್ ಠಾಣಾ ಸರಹದ್ದು ಮೋಹನ್ ಸೇಠ್ ಮನೆಯ ಮುಂಭಾಗದ ರಸ್ತೆಯ ತಿರುವಿನಲ್ಲಿ ಆಂಡ್ರಸನ್‌ಪೇಟೆ ನಿವಾಸಿಯಾದ ಶರವಣ ಕುಮಾರ್ ರವರು ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬೆದರಿಸಿ ಹೊಡೆದು ಶರವಣ ಕುಮಾರ್ ರವರ ಬಳಿಯಿದ್ದ ೫೨ ಗ್ರಾಂ ನಷ್ಟು ಬಂಗಾರದ ಸರವನ್ನು ಕಿತ್ತುಕೊಂಡು ಹೋಗಿದ್ದು ಈ ಬಗ್ಗೆ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಮೊ.ಸಂ:೬೩/೨೦೨೬ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣದಲ್ಲಿ ಆರೋಪಿ ಮತ್ತು ಮಾಲನ್ನು ಪತ್ತೆಮಾಡುವ ಸಲುವಾಗಿ ರಾಬರ್ಟಸನ್‌ಪೇಟೆ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ರವರನ್ನು ಒಳಗೊಂಡಂತೆ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ವಿಶೇಷ ಅಪರಾಧ ಪತ್ತೆ ದಳದ ಪೊಲೀಸರು ಪ್ರಕರಣ ದಾಖಲಾದ ೯ ಗಂಟೆಯೊಳಗೆ ಆಂಡ್ರಸನ್‌ಪೇಟೆ ಲೂರ್ದನಗರ ವಾಸಿಗಳಾದ ಆರೋಪಿ-೧ ಸ್ಟೀಪನ್ ರಾಜ್ ಬಿನ್ ಪನ್ನಿರ್ ಸೇಲ್ವಂ, ೨೧ ವರ್ಷ, ಆರೋಪಿ-೨ ರೆಕ್ಸೂನ್ ಬಿನ್ ಡಿಸೆಲ್ವಾ, ೨೦ ವರ್ಷ ಎಂಬುವವರನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ರೂ.೬,೭೬,೦೦೦/- ಬೆಲೆ ಬಾಳುವ ೫೨ ಗ್ರಾಂ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಿಸಿದ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಡಿ.ವೈ.ಎಸ್.ಪಿ ಲಕ್ಷ್ಮಯ್ಯ. ವಿ ರವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ರಾಬರ್ಟಸನ್‌ಪೇಟೆ ವೃತ್ತ ನಿರೀಕ್ಷಕರಾದ ಅನಿಲ್ ಕುಮಾರ್ ಎಂ.ಎಸ್, ಆಂಡ್ರಸನ್‌ಪೇಟೆ ಪೊಲೀಸ್ ಠಾಣೆ ಪಿ.ಎಸ್.ಐ ಗಳಾದ ಹೊನ್ನೇಗೌಡ, ಚಂದ್ರಶೇಖರ್.ಎಂ. ಮನ್ಮಥ (ಪ್ರೋ) ಹಾಗೂ ಸಿಬ್ಬಂದಿಗಳಾದ ವೇಣುಗೋಪಾಲ್, ಸುರೇಶ್ ಕುಮಾರ್, ರಾಜೇಂದ್ರ, ರವಿಕುಮಾರ್, ಮದುಕುಮಾರ್, ಗಜೇಂದ್ರ ಎಸ್, ರಘು, ಮುರಳಿ, ಸತ್ಯಪ್ರಕಾಶ್, ಮಂಜುನಾಥ್ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ರವರು ಪ್ರಶಂಶಿಸಿದ್ದಾರೆ.
ಚಿತ್ರ ಶೀರ್ಷಿಕೆ:೧೪ಕೆಜಿಎಫ್‌೦೨: ವಶÀಪಡಿಸಿಕೊಂಡ ಮಾಲಿನ ಜೋತೆಗೆ ಪಿ.ಎಸ್.ಐ ಆಂಡ್ರಸನ್‌ಪೇಟೆ ಮತ್ತು ತಂಡದವರು.
What's Your Reaction?