Wednesday, July 6, 2022
Home ಅಧ್ಯಾತ್ಮ ಪಣಿಯಾಡಿಯಲ್ಲಿ ವಿಜ್ರಂಭಿಸಿದ ಶ್ರೀನಿವಾಸ ಕಲ್ಯಾಣೋತ್ಸವ

ಪಣಿಯಾಡಿಯಲ್ಲಿ ವಿಜ್ರಂಭಿಸಿದ ಶ್ರೀನಿವಾಸ ಕಲ್ಯಾಣೋತ್ಸವ

ಸುದ್ದಿಕಿರಣ ವರದಿ
ಗುರುವಾರ, ಮೇ 5

ಪಣಿಯಾಡಿಯಲ್ಲಿ ವಿಜ್ರಂಭಿಸಿದ ಶ್ರೀನಿವಾಸ ಕಲ್ಯಾಣೋತ್ಸವ
ಉಡುಪಿ: ಇಲ್ಲಿನ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ದೇವಳದ ಆಡಳಿತ ಮೊಕ್ತೇಸರರೂ ಆಗಿರುವ ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಬುಧವಾರ ಸಂಭ್ರಮದಿಂದ ನೆರವೇರಿತು.

ಲೋಕಕಲ್ಯಾಣಾರ್ಥವಾಗಿ ಆಯೋಜಿಸಲಾದ ಭಕ್ತಿ ಶ್ರದ್ಧೆಯ ಶ್ರೀನಿವಾಸ ಕಲ್ಯಾಣ ಮಹೋತ್ಸವ ಬೆಂಗಳೂರು ಡಾ. ವಾದಿರಾಜ ನೇತೃತ್ವದ ಶ್ರೀನಿವಾಸ ಉತ್ಸವ ಬಳಗದವರಿಂದ ಸುಮಾರು ಎರಡೂವರೆ ಗಂಟೆ ಕಾಲ ವಿಧ್ಯಕ್ತವಾಗಿ ನಡೆಯಿತು.

ದಿಬ್ಬಣದ ಮೂಲಕ ವೇದಿಕೆಗೆ ಆಗಮಿಸಿದ ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರ ಕಲ್ಯಾಣೋತ್ಸವದಲ್ಲಿ ದೇವಾದಿದೇವತೆಗಳು ಪಾಲ್ಗೊಂಡ ಸನ್ನಿವೇಶ ಭಾವುಕ ಭಕ್ತರ ಕಣ್ಮನಗಳಿಗೆ ಮುದನೀಡಿತು.

ಖ್ಯಾತ ಗಾಯಕರಾದ ರಾಯಚೂರು ಶೇಷಗಿರಿದಾಸ್ ಮತ್ತು ತಿರುಪತಿಯ ಹರಿಚಂದನ ಅವರ ಕಂಠಸಿರಿಯಿಂದ ಮೊಳಗಿದ `ಬಾರೋ ಮನೆಗೆ ಗೋವಿಂದ… ಗೀತೆಯ ಹಿನ್ನೆಲೆಯಲ್ಲಿ ಚಾಲನೆಗೊಂಡ ಕಲ್ಯಾಣೋತ್ಸವದಲ್ಲಿ ಭಕ್ತರ ಹರೇ ಶ್ರೀನಿವಾಸ ಘೋಷ ಮುಗಿಲು ಮುಟ್ಟಿತ್ತು. ಭಾವುಕ ಭಕ್ತರು ತಿರುಪತಿಯ ಶ್ರೀ ವೇಂಕಟರಮಣಸ್ವಾಮಿಯನ್ನು ಕಣ್ತುಂಬಿಕೊಂಡ ಭಕ್ತಿಭಾವದಲ್ಲಿ ಮಿಂದೆದ್ದರು.

ಪುತ್ತಿಗೆ ಮಠದ ನಾಗರಾಜ ಆಚಾರ್ಯ, ಪ್ರಸನ್ನಾಚಾರ್ಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಗೋಪಾಲಾಚಾರ್ಯ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!