Friday, January 28, 2022
Home ಸಮಾಚಾರ ಜಿಲ್ಲಾ ಸುದ್ದಿ ಕನ್ನಡ ರಾಜ್ಯೋತ್ಸವ ಕವಿಗೋಷ್ಟಿ

ಕನ್ನಡ ರಾಜ್ಯೋತ್ಸವ ಕವಿಗೋಷ್ಟಿ

ಕನ್ನಡ ರಾಜ್ಯೋತ್ಸವ ಕವಿಗೋಷ್ಟಿ

ಉಡುಪಿ, ನ. 25 (ಸುದ್ದಿಕಿರಣ ವರದಿ): ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು, ಜಿಲ್ಲಾ ಮತ್ತು ತಾಲೂಕು ಘಟಕ ಉಡುಪಿ ಆಶ್ರಯದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಹಯೋಗದೊಂದಿಗೆ ಕನ್ನಡ ರಾಜೋತ್ಸವ ಕವಿಗೋಷ್ಟಿ ಕಾರ್ಯಕ್ರಮ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ ಸಾಹಿತಿ ಶೋಭಾ ಹರಿಪ್ರಸಾದ್ ಸೌದಿ ಅರೇಬಿಯಾ ಅವರನ್ನು ಸನ್ಮಾನಿಸಲಾಯಿತು.

ಮಲಬಾರ್ ಸಂಸ್ಥೆಯ ಹಫೀಝ್ ರೆಹಮಾನ್ ಅಡ್ಯಾರು, ಜೆಸಿಐ ವಲಯ ತರಬೇತುದಾರ ಡಾ| ಶಿವಪ್ರಸಾದ ಕೆ., ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಉಡುಪಿ ಉಸ್ತುವಾರಿ ರಾಮಕೃಷ್ಣ ಶೀರೂರು ಮೂಡುಬಿದಿರೆ, ವಿಮರ್ಶಕ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಕವಿಗಳಾದ ಜನಾರ್ದನ ಅಡಿಗ, ಅನಿತಾ ಹೊಳ್ಳ, ಉಮೇಶ ಆಚಾರ್ಯ, ನಾಗರತ್ನ, ನಾಗರಾಜ, ಸುಮಿತ್ರಾ ಐತಾಳ್, ಸುಮನ ಹೇರಳೆ, ಪುಷ್ಪ ಪ್ರಸಾದ, ಸರಸ್ವತಿ, ಮಂಜುನಾಥ, ಶಾಂಭವಿ ಕಾ.ಶ್ರೀ., ಪ್ರಸನ್ನಾ ಪಿ.ಭಟ್, ವಿಜಯಲಕ್ಷ್ಮಿ, ಭಾವನ ಕೆರೆಮಠ, ಮಲ್ಲಿಕಾ ಎಚ್. ಶೆಟ್ಟಿ, ದೀಪಿಕಾ, ಸೋನಾಲಿ ಎಸ್., ನಾಗೇಶ್, ಚಂದ್ರು, ಸೌದಾಮಿನಿ ರಾವ್, ಶರತ್ ಶೆಟ್ಟಿ, ಪ್ರಜ್ಞಾ ದೇವಾಡಿಗ ಇದ್ದರು.

ಅಮೃತಾ ಸಂದೀಪ್ ಸ್ವಾಗತಿಸಿದರು. ವಾಸಂತಿ ಅಂಬಲಪಾಡಿ ಪ್ರಸ್ತಾವನೆಗೈದರು. ಸುಮಾ ಕಿರಣ್ ನಿರೂಪಿಸಿದರು. ಅನಿತಾ ಸಿಕ್ವೇರ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!