Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ

ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ

ಸುದ್ದಿಕಿರಣ ವರದಿ
ಶನಿವಾರ, ಜೂನ್ 18

ವಿದ್ಯೋದಯ ಪದವಿ ಪೂರ್ವ ಕಾಲೇಜು ಸಾಧನೆ
ಉಡುಪಿ: ಇಲ್ಲಿನ ವಿದ್ಯೋದಯ ಪದವಿಪೂರ್ವ ಕಾಲೇಜು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ವಿಜ್ಞಾನ ವಿಭಾಗದಲ್ಲಿ ಶೇ. 100 ಫಲಿತಾಂಶ ದಾಖಲಿಸಿದೆ.

ಈ ಬಾರಿ ವಿಜ್ಞಾನ ವಿಭಾಗದಲ್ಲಿ 322 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 214 ಮಂದಿ ವಿಶಿಷ್ಟ ಶ್ರೇಣಿ, 106 ಮಂದಿ ಪ್ರಥಮ ಶ್ರೇಣಿ ಮತ್ತು ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

11 ಮಂದಿ ಟಾಪರ್
ವಿಜ್ಞಾನ ವಿಭಾಗದ ವಿದ್ಯಾರ್ಥಿ ಓಂಕಾರ್ ಪ್ರಭು ರಾಜ್ಯ ಮಟ್ಟದಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಹಿಂದಿಯಲ್ಲಿ 100, ಇಂಗ್ಲಿಷ್ 98, ಭೌತಶಾಸ್ತ್ರ 100, ರಸಾಯನ ಶಾಸ್ತ್ರ 98, ಗಣಿತ 100 ಮತ್ತು ಗಣಕವಿಜ್ಞಾನದಲ್ಲಿ 100 ಅಂಕ ಗಳಿಸುವ ಮೂಲಕ ಒಟ್ಟು 596 ಅಂಕ ಪಡೆದಿದ್ದಾರೆ.

ನಿಯತಾ 594 ಅಂಕದೊಂದಿಗೆ 5ನೇ ಸ್ಥಾನ, ಲಕ್ಷ್ಮೀ ಪಿ. 592 ಅಂಕದೊಂದಿಗೆ 7ನೇ ಸ್ಥಾನ, ಪ್ರಣ್ಯಮ್ಯ ಆಚಾರ್ಯ, ಕೆ. ಎಸ್. ನಿಹಾರಿಕಾ, ನವ್ಯಾ ಮತ್ತು ದಿನೇಶ್ ಶೆಟ್ಟಿ ತಲಾ 591 ಅಂಕದೊಂದಿಗೆ 8ನೇ ಸ್ಥಾನ, ಪಾವನ್ ಎ. ಶೆಟ್ಟಿ, ಈಶಾ ಕುಂದರ್, ಅಮರನಾಥ ಭಟ್ ಬಿ. ಮತ್ತು ಚಿನ್ಮಯ ಅಡಿಗ ತಲಾ 590 ಅಂಕದೊಂದಿಗೆ 9ನೇ ಸ್ಥಾನ ಮತ್ತು ಜಾಗೃತಿ ಚಂದ್ರಶೇಖರ್ 589 ಅಂಕ ಪಡೆದು 10ನೇ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗ
ವಾಣಿಜ್ಯ ವಿಭಾಗದಲ್ಲಿ 98.87 ಶೇ. ಫಲಿತಾಂಶ ದಾಖಲಾಗಿದ್ದು, ಈ ವರ್ಷ 177 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 88 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 80 ಮಂದಿ ಪ್ರಥಮ ಶ್ರೇಣಿ ಮತ್ತು 7 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ಮೇಘನಾ ಮೆಂಡನ್ 591 ಅಂಕದೊಂದಿಗೆ 6ನೇ ಸ್ಥಾನ, ಹಿರಲ್ ಸುಂದರ್ 590 ಅಂಕದೊಂದಿಗೆ 7ನೇ ಸ್ಥಾನ, ದರ್ಶನ್ ಆರ್. ಶೆಟ್ಟಿ ಮತ್ತು ಲರಿಸ್ಸಾ ಹೆಜಲ್ ನಜರೆತ್ 589 ಅಂಕದೊಂದಿಗೆ 8ನೇ ಸ್ಥಾನ ಮತ್ತು ವಿಥಿಕಾ ವಿ. ಶೆಟ್ಟಿ 587 ಅಂಕದೊಂದಿಗೆ 10ನೇ ರ್ಯಾಂಕ್ ಪಡೆದಿರುತ್ತಾರೆ ಎಂದು ಕಾಲೇಜು ಪ್ರಾಂಶುಪಾಲ ಸಂದೀಪ್ ಕುಮಾರ್ ತಿಳಿಸಿದ್ದಾರೆ.

ಟ್ರಸ್ಟ್ ಆಡಳಿತ ಮಂಡಳಿ ಮತ್ತು ಕಾಲೇಜು ಉಪನ್ಯಾಸಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!