Wednesday, July 6, 2022
Home ಸಮಾಚಾರ ರಾಜ್ಯ ವಾರ್ತೆ ಕೋಟಿ ಗೀತಾ ಲೇಖನ ಯಜ್ಞ ಪುಸ್ತಕ ಬಿಡುಗಡೆ

ಕೋಟಿ ಗೀತಾ ಲೇಖನ ಯಜ್ಞ ಪುಸ್ತಕ ಬಿಡುಗಡೆ

ಸುದ್ದಿಕಿರಣ ವರದಿ
ಶುಕ್ರವಾರ, ಮಾರ್ಚ್ 4

ಕೋಟಿ ಗೀತಾ ಲೇಖನ ಯಜ್ಞ ಪುಸ್ತಕ ಬಿಡುಗಡೆ
ಉಡುಪಿ: ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಮ್ಮ ಚತುರ್ಥ ಪರ್ಯಾಯ ಅಂಗವಾಗಿ ಸಂಕಲ್ಪಿಸಿರುವ ಕೋಟಿ ಗೀತಾ ಲೇಖನ ಯಜ್ಞದ ಕೋಟಿ ಲೇಖನ ಪುಸ್ತಕಗಳ ಪ್ರಥಮ ಬಿಡುಗಡೆ ಶುಕ್ರವಾರ ರಥಬೀದಿಯ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಇಂಗ್ಲಿಷ್ ಆವೃತ್ತಿಯನ್ನು ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು. ಅರ್ಜುನನಿಗೆ ಶ್ರೀಕೃಷ್ಣ ಯುದ್ಧ ಕಾಲದಲ್ಲಿ ಗೀತೋಪದೇಶ ಮಾಡಿದಂತೆ, ಪ್ರಸಕ್ತ ಯುದ್ಧ ಸಂಭವಿಸುತ್ತಿರುವ ಸಂದರ್ಭದಲ್ಲಿ ಗೀತಾ ಲೇಖನ ಯಜ್ಞ ಆರಂಭಿಸಿರುವುದು ಯೋಗಾಯೋಗ.

ಒಂದೆಡೆ ಪಾಕಿಸ್ಥಾನ, ಮತ್ತೊಂದೆಡೆ ಬಾಂಗ್ಲಾದೇಶಗಳು ಭಾರತದ ಗಡಿಗಾಗಿ ಹೋರಾಟ ನಡೆಸುತ್ತಿರುವ ದಿನಗಳಲ್ಲಿ ಗಡಿಯನ್ನು ಬಿಡಿ ಎಂಬ ಆಶಯದೊಂದಿಗೆ ಗೀತಾ ಸಂಕಲ್ಪ ನಡೆಸಿದಲ್ಲಿ ಗಡಿ ಕಾಯುವ ಯೋಧರ ಆತ್ಮಶಕ್ತಿ ವರ್ಧನೆಗೆ ಪೂರಕವಾಗಲಿದೆ ಎಂದರು.

ಕನ್ನಡ ಆವೃತ್ತಿಯನ್ನು ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬಿಡುಗಡೆ ಮಾಡಿ, ಪುತ್ತಿಗೆ ಶ್ರೀಗಳ ಯೋಜನೆ ಫಲಪ್ರದವಾಗಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಭಾವೀ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಭಗವದ್ಗೀತೆ ಯಾವುದೇ ದೇಶಕ್ಕೆ ಸೀಮಿತವಾಗಿರದೇ ವಿಶ್ವಕ್ಕೇ ಸಂಬಂಧಿಸಿದುದು. ಜಾತಿ ಧರ್ಮ ಎಲ್ಲೆ ಮೀರಿದ ಗೀತೆಯನ್ನು ವಿಶ್ವವ್ಯಾಪಿಯಾಗಿಸುವ ಕಾರ್ಯಕ್ಕೆ ಉದ್ಯುಕ್ತವಾಗಿರುವುದಾಗಿ ತಿಳಿಸಿದರು. ಸರ್ಕಾರ ಗೀತೆ ಪ್ರಚಾರ ಬಗ್ಗೆ ಸಹಕಾರ ನೀಡಬೇಕು ಎಂದರು.

ಗೀತಾ ಲೇಖನ ಪುಸ್ತಕ ಬಿಡುಗಡೆಗೆ ಮೊದಲು ಲೇಖನ ಪುಸ್ತಕಗಳ ವೈಭವದ ಮೆರವಣಿಗೆ ನಡೆಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!