Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾರ್ಮಿಕ ಕಲ್ಯಾಣಕ್ಕಾಗಿ ಎಸ್.ಡಿ.ಟಿ.ಯು.

ಕಾರ್ಮಿಕ ಕಲ್ಯಾಣಕ್ಕಾಗಿ ಎಸ್.ಡಿ.ಟಿ.ಯು.

ಸುದ್ದಿಕಿರಣ ವರದಿ
ಗುರುವಾರ, ಜೂನ್ 16

ಕಾರ್ಮಿಕ ಕಲ್ಯಾಣಕ್ಕಾಗಿ ಎಸ್.ಡಿ.ಟಿ.ಯು.
ಉಡುಪಿ: ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳ ಸಂರಕ್ಷಣೆ ಮತ್ತು ಕಲ್ಯಾಣಕ್ಕಾಗಿ ರಾಷ್ಟ ಮಟ್ಟದಲ್ಲಿ ಕಾರ್ಯಾಚರಿಸುವ ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು.) ಉಡುಪಿ ಜಿಲ್ಲಾ ಘಟಕ ಅಸ್ಥಿತ್ವಕ್ಕೆ ಬಂದಿದೆ.

ಸಂಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಸಮೀರ್ ಮಜೂರು ಆಯ್ಕೆಯಾಗಿದ್ದಾರೆ. ಜಿಲ್ಲಾದ್ಯಂತ ಅಸಂಘಟಿತ ಕಾರ್ಮಿಕರನ್ನು ಸಂಘಟಿಸಿ ಅವರ ಹಕ್ಕುಗಳ ಸಂರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗಾಗಿ ಎಸ್.ಡಿ.ಟಿ.ಯು. ಕಾರ್ಯಹಿಸಲಿದೆ ಎಂದರು.

ಉಪಾಧ್ಯಕ್ಷರಾಗಿ ನೂರುದ್ದೀನ್ ಫಕೀರನಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಜಲಾಲ್ ಕೊಂಬಗುಡ್ಡೆ, ಕಾರ್ಯದರ್ಶಿಯಾಗಿ ರೆಹಮಾನ್ ನಿಟ್ಟೂರು, ಕೋಶಧಿಕಾರಿಯಾಗಿ ಅಶ್ರಫ್ ಸಂತೋಷ್ ನಗರ ಹಾಗೂ ಸದಸ್ಯರಾಗಿ ಸಮೀರ್ ಅತ್ರಾಡಿ, ಸಲಾಂ ನಿಟ್ಟೂರು, ಅಬೂಬಕ್ಕರ್ ಕಾಪು, ಸತ್ತಾರ್ ಉಡುಪಿ ಆಯ್ಕೆಯಾದರು.

ಜಿಲ್ಲಾ ಉಸ್ತುವಾರಿ ಖಾದರ್ ಫರಂಗಿಪೇಟೆ, ಎಸ್.ಡಿ.ಟಿ.ಯು. ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ಸದಸ್ಯ ಸಿದ್ದೀಕ್ ಕಣ್ಣಂಗಾರ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!