ರೈತರ ಸಂಕಷ್ಟಕ್ಕೆ ಸ್ಪಂದನೆ; ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸಮಾಜ ಸೇವಕ ವಿ. ಮೋಹನ್ ಕೃಷ್ಣ

ರೈತರ ಸಂಕಷ್ಟಕ್ಕೆ ಸ್ಪಂದನೆ; ಆರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಸಮಾಜ ಸೇವಕ ವಿ. ಮೋಹನ್ ಕೃಷ್ಣ

          ಕೆಜಿಎಫ್: ಇಲ್ಲಿಗೆ ಸಮೀಪದ ಶ್ರೀನಿವಾಸಸಂದ್ರ , ಜಕ್ಕರಸನಕುಪ್ಪ, ಕಂಗಾಂಡ್ಲಹಳ್ಳಿ ಗ್ರಾಪಂ ವ್ಯಾಪ್ತಿಯ ಕರಡಗೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಳೆ ಅಭಾವದಿಂದ ಮಾವು ಮತ್ತು ಬಾಳೆ ತೋಟಗಳು ತೀವ್ರ ಹಾನಿಗೊಳಗಾಗಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಸಮಾಜ ಸೇವಕ ವಿ. ಮೋಹನ್ ಕೃಷ್ಣ ಅವರು ಕೊಟ್ಟ ಮಾತಿನಂತೆ ಆರ್ಥಿಕ ನೆರವು ನೀಡಿದರು.


 ಕಳೆದ 30 ದಿನಗಳ ಹಿಂದೆ ಅಲಿಕಲ್ಲು ಮಳೆಗೆ ತೋಟಗಾರಿಕಾ ಬೆಳೆಗಳು ನಷ್ಟಗೊಂಡಿರುವುದನ್ನು ಗಮನಿಸಿದ್ದ ವಿ. ಮೋಹನ್ ಕೃಷ್ಣ ಅವರು ರೈತರನ್ನು ಭೇಟಿ ಮಾಡಿ  ಸ್ಥಳ ಪರಿಶೀಲಿಸಿ ಆರ್ಥಿಕವಾಗಿ ಸಹಾಯ ಮಾಡುವುದಾಗಿ  ಭರವಸೆ ನೀಡಿದ್ದರು, ಈ ದಿನ ಕೊಟ್ಟ ಮಾತಿನಂತೆ ಹಾನಿಗೊಳಗಾದ ಒಬ್ಬ ರೈತನಿಗೆ 1ಲಕ್ಷ  ಹಾಗೂ ಉಳಿದ ರೈತರಿಗೆ 20 ಸಾವಿರ ರೂ ಆರ್ಥಿಕ ಸಹಾಯಧನ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.

ರೈತರಿಗೆ ಸಹಾಯದನ ವಿತರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು, ರೈತರು ಪ್ರಕೃತಿ ವಿಕೋಪಗಳಿಂದ ಸಂಕಷ್ಟಕ್ಕೆ ಸಿಲುಕಿದಾಗ ಸಮಾಜದ ಎಲ್ಲ ವರ್ಗದವರು ಅವರ ನೆರವಿಗೆ ಬರಬೇಕು ಆದರೆ ಕೆಜಿಎಫ್ ಸ್ಥಳೀಯ ಶಾಸಕರು ಬರೀ ಚಿತ್ರೀಕರಣಕ್ಕೆ ಮಾತ್ರ ಸೀಮಿತವಾಗಿದ್ದಾರೆ,  ಶಾಸಕಿ ರೂಪಕಲಾ ಅವರು ವಿಡಿಯೋ ಫೋಟೋಸ್ ಗೆ ಪೋಸ್ ಕೊಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು. 

30 ದಿನಗಳ ಹಿಂದೆ ಕ್ಷೇತ್ರದ ಶಾಸಕಿ ರೂಪಕಲಾ ಅವರು ಅಧಿಕಾರಿಗಳೊಂದಿಗೆ  ರೈತರ ತೋಟಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಿ ಸರ್ಕಾರದಿಂದ ಸೂಕ್ತ ನಷ್ಟ ಪರಿಹಾರ ದೊರಕುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಆದರೆ ಭೇಟಿ ನೀಡಿ ಸುಮಾರು 30 ದಿನಗಳು ಕಳೆದರೂ ಸರ್ಕಾರದ ವತಿಯಿಂದ ಯಾವುದೇ ರೀತಿಯ ನಷ್ಟ ಪರಿಹಾರ ದೊರೆತಿಲ್ಲ ಎಂದು ಶಾಸಕಿ ರೂಪಕಲಾ ವಿರುದ್ಧ ಆರೋಪಿಸಿದರು.

ರೈತರ ಮಾತು: ಕ್ಷೇತ್ರದಲ್ಲಿ ಜನಪ್ರತಿನಿಧಿಗಳು ಹಾಗೂ ಮಾಜಿ ಶಾಸಕರು ಇದ್ದರೂ ತಮ್ಮ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಆದರೆ ಸಂಕಷ್ಟದ ಸಮಯದಲ್ಲಿ ತಮ್ಮ ಕಷ್ಟವನ್ನು ಅರಿತು ಆರ್ಥಿಕ ನೆರವು ನೀಡಿದ ಸಮಾಜ ಸೇವಕ ವಿ. ಮೋಹನ್ ಕೃಷ್ಣ ಅವರ ಕಾರ್ಯ ಶ್ಲಾಘನೀಯವಾಗಿದೆ  ಅಲ್ಲದೆ, ಮುಂದಿನ ದಿನಗಳಲ್ಲಿ ಬರುವ ಚುನಾವಣೆಯಲ್ಲಿ ರೈತ ಸಮುದಾಯದ ಪರವಾಗಿ ಅವರ ಕೈ ಬಲಪಡಿಸುವುದಾಗಿ ರೈತರು ತಿಳಿಸಿದರು.

ಹೋರಾಟದ ಎಚ್ಚರಿಕೆ: ಕಳೆದ 30 ದಿನಗಳ ಹಿಂದೆ ಬಿದ್ದ ಅಲಿಕಲ್ಲು ಮಳೆ ಅಭಾವಕ್ಕೆ ಹಾನಿಗೊಳಗಾದ ಮಾವು & ಬಾಳೆ ತೋಟದ ರೈತರಿಗೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು 15 ದಿನಗಳಲ್ಲಿ ಸರ್ಕಾರದ ವತಿಯಿಂದ ಸೂಕ ನಷ್ಟ ಪರಿಹಾರವನ್ನು ರೈತರಿಗೆ ದೊರಕಿಸಿಕೊಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಾವಿರಾರು ರೈತರೊಂದಿಗೆ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. 

ಡಿಸಿಸಿ ಬ್ಯಾಂಕ್ ಹಣ ಎಲ್ಲಿ: ಚುನಾವಣೆ ಸಂದರ್ಭದಲ್ಲಿ ಮಾತ್ರ ಅಧಿಕಾರ ಗಿಟ್ಟಿಸಿಕೊಳ್ಳಲು ಡಿಸಿಸಿ ಬ್ಯಾಂಕ್ ವತಿಯಿಂದ ಸಾಲ ಸೌಲಭ್ಯ ನೀಡುವುದಾಗಿ ಭರವಸೆ ನೀಡಲಾಗಿತ್ತು ಚುನಾವಣೆ ಮುಗಿದ ನಂತರ  ಅದರ ಬಗ್ಗೆ ಪ್ರಸ್ತಾಪವೇ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಮಾವು ಬೆಳೆ ಗಾರರ ಸಂಘದ ತಾಲ್ಲೂಕು ಅಧ್ಯಕ್ಷ ಅಭಿಲಾಷ್ ರೆಡ್ಡಿ, ರೈತರಾದ  ತಿಮ್ಮ ರೆಡ್ಡಿ ಬಲರಾಮ್ ರೆಡ್ಡಿ,  ಜಯರಾಮ್ ರೆಡ್ಡಿ ರಘುರಾಮ್ ರೆಡ್ಡಿ, ಶಂಕರ್ ರೆಡ್ಡಿ ಶಂಕರಪ್ಪ, ಮಂಜುನಾಥ್ ರೆಡ್ಡಿ, ರಾಮಪ್ಪ ಅಂಜಪ್ಪ, ಸೇರಿದಂತೆ ಅನೇಕ ರೈತರಿದ್ದರು.