ಕನ್ನಡ ಮಾತನಾಡಿ ಇಲ್ಲದಿದ್ದರೆ ಇಲ್ಲಿಂದ ತೋಲಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಖಡಕ್ ಎಚ್ಚರಿಕೆ

ಕನ್ನಡ ಮಾತನಾಡಿ ಇಲ್ಲದಿದ್ದರೆ ಇಲ್ಲಿಂದ ತೋಲಗಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ಖಡಕ್ ಎಚ್ಚರಿಕೆ

       ಕೆಜಿಎಫ್:ಜು:೮: ನೀವು ಕರ್ನಾಟಕದ ಮಣ್ಣಲ್ಲಿ ಇದ್ದಿರಿ ಇಲ್ಲಿನ ಗಾಳಿ ಕುಡಿಯುತ್ತಿದ್ದಿರಿ ಅನ್ನ ತಿನ್ನುತ್ತಿದ್ದಿರಿ ಆದ್ದರಿಂದ ನಿಮ್ಮ ಬಳಿ ಸಮಸ್ಯೆಗಳನ್ನು ಹೇಳಿಕೊಂಡು ಬರುವ  ಬಿಜಿಎಂಎಲ್ ಕಾರ್ಮಿಕ ಕುಟುಂಬಗಳಿಗೆ ಹಿಂದಿ ಭಾಷೆಯಲ್ಲಿ ಮಾತನಾಡಿ ಇಲ್ಲದಿದ್ದರೆ ನೀವು ಇಲ್ಲಿಂದ ಹೊರಡಿ ಎಂದು ಧಮಿಕಿ ಹಾಕುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸಹಿಸಿಕೊಳ್ಳುವುದಿಲ್ಲ  ನೀವು ಕನ್ನಡ ಮಾತನಾಡಿ ಇಲ್ಲದ್ದರೆ ಇಲ್ಲಿಂದ ತೋಲಗಿ ಎಂದು ನಿಮ್ಮ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕೋಲಾರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುನಿರಾಜ್ ಹಾಗೂ ಬಿಜಿಎಂಎಲ್ ನಿವೃತ್ತ ಕಾರ್ಮಿಕ ಸಂಘದ ಅಧ್ಯಕ್ಷ ಮೂರ್ತಿ ಎಚ್ಚರಿಕೆ ನೀಡಿದರು.
ಬಿಜಿಎಂಎಲ್ ಸ್ವರ್ಣಭವನದಲ್ಲಿರುವ ಬಿಜಿಎಂಎಲ್ ವಿಶೇಷ ಕರ್ತವ್ಯ ಅಧಿಕಾರಿ ಹಾಗೂ ಭದ್ರತಾಧಿಕಾರಿ ಸೇರಿದಂತೆ ಇತರೆ ಅಧಿಕಾರಿಗಳು ಗಣಿಯಲ್ಲಿ ತಮ್ಮ ಜೀವನವಾಧಿಯನ್ನೇ ಸರ್ಮಪಿಸಿರುವ ಬಿಜಿಎಂಎಲ್ ಕಾರ್ಮಿಕರು ಸಮಸ್ಯೆಗಳನ್ನು  ಹೇಳಲು ಸ್ವರ್ಣಭವನ ಕಚೇರಿಗೆ ಹೋದರೆ ಸಮಸ್ಯೆ ಅಲಿಸದೆ ಹಿಂದಿ ಭಾಷೆಯಲ್ಲಿ ಮಾತನಾಡಿ ಎಂದು ಹಿಂದಿ ಹೆರಿಕೆ ಮಾಡಲು ಹೋರಟಿದ್ದಾರೆ  ಎಂದು ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಬಿಜಿಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಮೂರ್ತಿ ಹಾಗೂ ಪದಾಧಿಕಾರಿಗಳೊಂದಿಗೆ ಸ್ವರ್ಣಭವನ ಕಚೇರಿ ಮುಂಭಾಗದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೋಲಾರ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಮುನಿರಾಜ್ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಕರ್ತವ್ಯ ಅಧಿಕಾರಿ ಸೇರಿದಂತೆ ಎಲ್ಲಾ ಅಧಿಕಾರಿಗಳು ಉತ್ತರ ಭಾರತದಿಂದ ಬಂದವರು ಆದರೆ ಉತ್ತರ ಭಾತರದಿಂದ ಇಲ್ಲಿಗೆ ವರ್ಗಾವಣೆಗೊಂಡು ೩ ವರ್ಷ ಕಳೆದಿದ್ದರು ಇದುವರೆಗೂ ಕನ್ನಡ ಭಾಷೆಯನ್ನು ಕಲಿತು ಸ್ಥಳಿಯರೊಂದಿಗೆ ಕನ್ನಡ ಭಾಷೆಯಲ್ಲಿ ವ್ಯವಹಾರ ಮಾಡದಿರುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸುತ್ತದೆ ಎಂದು ಹೇಳಿ ಇತಿಹಾಸ ಪ್ರಸಿದ್ಧವಾದ ಬಿಜಿಎಂಎಲ್ ಕಾರ್ಖಾನೆಯನ್ನು ವಿಶ್ವಕ್ಕೆ ಪರಿಚಿಯ ಮಾಡಿಕೊಟ್ಟಿದ್ದು ಇಲ್ಲಿನ ಸ್ಥಳೀಯರು ಅವರ ಆದ್ದರಿಂದ ಕನ್ನಡ ಭಾಷೆಗೆ ಪ್ರಮುಖ್ಯತೆಯನ್ನು ನೀಡದಿದ್ದರೆ ಹೇಗೆ ಎಂದು ಪ್ರಶ್ನೆ ಮಾಡಿ ಸ್ಥಳೀಯರು ನಿಮ್ಮ ಬಳಿ ತಮ್ಮ ಮನೆ ಮಳೆಗೆ ಸೋರುತ್ತಿದೆ ದುರಸ್ಥಿಗೊಳಿಸಲು ಅನುಮತಿ ನೀಡಿ ಅಥಾವ ಇನ್ನೀತರ ಸಣ್ಣ ಪುಟ್ಟ ಸಮಸ್ಯೆಗಳನ್ನು ಹೊತ್ತು ಬರುತ್ತಾರೆ ಅವರ ಸಮಸ್ಯೆಗಳನ್ನು ಅಲಿಸಿ ಪರಿಹಾರ ನೀಡಬೇಕಾದ ಅಧಿಕಾರಿಗಳು ಕಾರ್ಮಿಕರ ಸಮಸ್ಯೆಗಳನ್ನು ಕೇರ್ ಮಾಡದೆ ನಿರ್ಲಕ್ಷ ಮಾಡುವುದು ಸರಿಯಾದ ಕ್ರಮವಲ್ಲ ತಮ್ಮ ವರ್ತನೆಯನ್ನು  ಬದಲಾವಣೆ ಮಾಡಿಕೊಳ್ಳದಿದ್ದಾರೆ ಉತ್ತರ ಭಾರತದ ಅಧಿಕಾರಿಗಳೇ ತೋಲಗಿ ಎಂದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಬಿಜಿಎಂಎಲ್ ಕಾರ್ಮಿಕ ಸಂಘದ ಅಧ್ಯಕ್ಷ  ಮೂರ್ತಿ ಮಾತನಾಡಿ ಇಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಅಧಿಕಾರಿಯು ಸೇರಿದಂತೆ ಎಲ್ಲಾ ಅಧಿಕಾರಿಗಳು ಉತ್ತರ ಭಾರತದಿಂದ ಅಥಾವ ಕೇರಳ ರಾಜ್ಯದಿಂದ ಬಂದವರು ಅವರಿಗೆ ಕನ್ನಡ ಭಾಷೆ ಮೇಲೆ ಗೌರವವಿಲ್ಲ ಮಾತನಾಡಿದರೆ ಹಿಂದೆ ಭಾಷೆಯಲ್ಲಿ ಮಾತನಾಡಿ ಅಥಾವ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡಿ ಇಲ್ಲದಿದ್ದಾರೆ ಇಲ್ಲಿಂದ ಹೋಗಿ ಎಂದು ಧಮಿಕಿ ಹಾಕುತ್ತಾರೆ ನಮ್ಮ ತಾತಾ ನಮ್ಮ ತಂದೆ ನಾವುಗಳು ಕಷ್ಟಪಟ್ಟು ದುಡಿದ ಕಾರ್ಖಾನೆ ಬಿಜಿಎಂಎಲ್ ಕಾರ್ಖಾನೆ ನಾವು ದುಡಿದ ದುಡಿಮೆಯಲ್ಲಿ ಬದುಕುತ್ತಿರುವ ಅಧಿಕಾರಿಗಳು ದೌರ್ಜನ್ಯವೆಸಗುವುದನ್ನು ನಾವು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ ತಕ್ಷಣ ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಇಲ್ಲದಿದ್ದಾರೆ ಕಾರ್ಮಿಕರು ನಿಮಗೆ ದೊಡ್ಡ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮುಂದಿನ ದಿನಗಳಲ್ಲಿ ನ್ಯಾಯಾಲಯದ ವಿಚಾರವಾಗಿ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅಲ್ಲಿ ಸಹ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಖಡಕ್ ಆಗಿ ಹೇಳಿದರು.
ಈ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ನಂಜುಂಡಪ್ಪ, ತಾಲೂಕು ಸಾಮಾಜಿಕ ಜಾಲತಾಣದ ಸಹ ಸಂಚಾಲಕರು. ವಿ. ಮಂಜುನಾಥ್ ಗೌಡ ( ಫ್ರೂಟ್ಸ್.) ಪ್ರದೀಪ್ ಹಾಗು ನಿವೃತ್ತ ಬಿಜಿಎಂಎಲ್ ಕಾರ್ಮಿಕರು ಹಾಜರಿದ್ದರು.