ಕಾಪು ಚಿನ್ನೇ ಪಲ್ಲಿ ಗ್ರಾಮದ ದೇವತೆ ಗಂಗಮ್ಮ ದೇವಿ ದೇವಾಲಯದ ಪ್ರಾಣ ಪ್ರತಿಷ್ಠಾಪನೆ
ಭಾಗ್ಯನಗರ: ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಣೆ ಮಾಡುತ್ತದೆ. ಈ ನಿಟ್ಟಿನಲ್ಲಿ ಹಳ್ಳಿಗಳಲ್ಲಿ ನಿರ್ಮಾಣವಾಗುತ್ತಿರುವ ದೇವಾಲಯಗಳು ಸಾಮರಸ್ಯದ ಪ್ರತೀಕವಾಗಿವೆ ಎಂದು ಕಾಪು ಚಿನ್ನೇಪಲ್ಲಿ ಗ್ರಾಮದ ಪ್ರಮುಖರು ತಿಳಿಸಿದ್ದಾರೆ.
ತಾಲೂಕಿನ ನಲ್ಲಪರೆಡ್ಡಿಪಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಪು ಚಿನ್ನೇಪಲ್ಲಿ ಗ್ರಾಮದಲ್ಲಿ, ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ದೇವತೆ ಗಂಗಮ್ಮ ದೇವಿ ದೇವಾಲಯದ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ದೇವಾಲ ಯಗಳ ನಿರ್ಮಾಣ ಕಾರ್ಯವೆಂಬುದು ಸಾಮಾನ್ಯವಾದ ಕೆಲಸವಲ್ಲ, ಶ್ರದ್ಧೆ, ಭಕ್ತಿಯಿಂದ ಮಾಡಿದಾಗ ಮಾತ್ರ, ಈ ಕಾರ್ಯಗಳನ್ನು ಪೂರೈಸಬಹುದಾಗಿದೆ ಮುಖ್ಯವಾಗಿ ದೇಗುಲಗಳ ನಿರ್ಮಾಣ ಪವಿತ್ರ ಕೆಲಸ ಎಂದರು.
ಇದೇ ಸಂದರ್ಭದಲ್ಲಿ ಶ್ರೀ ಗಂಗಮ್ಮ ದೇವಿ ವಿಗ್ರಹ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಅಮ್ಮನವರಿಗೆ ಲಲಿತಾ ಸಹಸ್ರನಾಮ ಹೋಮ ಹಾಗೂ ಮಹಾಮಂಗಳಹಾರತಿ ಹಾಗೂ ಗ್ರಾಮಸ್ಥರಿಂದ ಕಳಸ ಕುಂಬಾಭಿಷೇಕ, ಮಹಾಮಂಗಳ ಹಾರತಿ, ತೀರ್ಥ ಪ್ರಸಾದ ವಿನಿಯೋಗ ನೆರವೇರಿಸಲಾಗಿತ್ತು.
ಈ ಸಂಧರ್ಭದಲ್ಲಿ ಕಾಪು ಚಿನ್ನೇಪಲ್ಲಿ ಮತ್ತು ಮಾಲಚಿನ್ನೇಪಲ್ಲಿ ಗ್ರಾಮದವರು ಮತ್ತು ನೂರಾರು ಭಕ್ತರು ಇದ್ದರು.