ನಾಡಪ್ರಭು ಕೆಂಪೇಗೌಡರವರ 517 ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು

ನಾಡಪ್ರಭು ಕೆಂಪೇಗೌಡರವರ 517 ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು

      ಕೃಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿ ಪಟ್ಟಣದ ಕೆಂಪೇಗೌಡರ ವೃತ್ತದಲ್ಲಿ 517 ನೇ ಕೆಂಪೇಗೌಡರ ಜಯಂತಿಯನ್ನು  ನಾಡ ಪ್ರಭು ಕೆಂಪೇಗೌಡರ ಒಕ್ಕಲಿಗರ ಸಂಘದ ವತಿಯಿಂದ ಗ್ರಾಮದ ಮುಖಂಡರ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. 

ಕೆ ಪಿ ಸಿ ಸಿ ಸದಸ್ಯ ಕಿಕ್ಕೇರಿ ಸುರೇಶ್ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಉಪಾದ್ಯಕ್ಷ  ಕೆ ಎಸ್ ಪ್ರಭಾಕರ್ ಮತ್ತು ನೂರಾರು ಮುಖಂಡರು  ನಾಡ ಪ್ರಭು ಕೆಂಪೇಗೌಡ ರವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ  ಪುಷ್ಪಾರ್ಚನೆ ನೇರವೇರಿಸಿದ್ರು 

ನಂತರ ವಿಶ್ರಾಂತ ಪ್ರಾಶುಂಪಾಲರಾದ ಚಂದ್ರಮೋಹನ್, ಉಪನ್ಯಾಸಕ ಬಸವರಾಜು  ಮಾತನಾಡಿದ ಅವರು ದೇಶದ ಭವಿಷ್ಯದ ಪ್ರಜೆಗಳಾಗಿರುವ ಯುವಕರು ಕೆಂಪೇಗೌಡರ ಆದರ್ಶ ಗುಣಗಳನ್ನು ಮೈಗೂಡಿಸಿಕೊಂಡು ದೇಶ ಸೇವೆಗೆ ಶ್ರಮಿಸುವಂತೆ ಕರೆ ನೀಡಿದರು. ಬೆಂದಕಾಳೂರು ಎಂಬ ಊರನ್ನು ಪ್ರಪಂಚದಲ್ಲಿರುವ ದೊಡ್ಡ ನಗರಗಳಲ್ಲಿ ಬೆಂಗಳೂರು ಬೃಹತ್ ಪ್ರಮಾಣದಲ್ಲಿ ಬೆಳೆದಿರುವುದು ಅದಕ್ಕೆ ಕೆಂಪೇಗೌಡರ ದೂರದೃಷ್ಟಿಯ ಫಲವಾಗಿದೆ ಕೆಂಪೇಗೌಡರು ಒಂದು‌ ಜಾತಿಯ ಅಥವಾ ಧರ್ಮಕ್ಕೆ ಸೀಮಿತವಾಗಿಲ್ಲ ಪ್ರತಿಯೊಂದು ಸಮುದಾಯದ ಪರವಾಗಿ ಕೆಲಸ ಮಾಡಿದ ರಾಜರಾಗಿದ್ದಾರೆ ಅಂದೇ ಬೆಂಗಳೂರಿನಲ್ಲಿ ಪ್ರತಿಯೊಂದು ಸಮುದಾಯಕ್ಕೆ ಒಂದೊಂದು ಪೇಟೆಗಳನ್ನು ನಿರ್ಮಾಣ ಮಾಡಿದ್ದರು ಇಂದು‌ ಹಳ್ಳಿಗಳಿಂದ ಬೆಂಗಳೂರಿಗೆ ಯುವಕರು ಉದ್ಯೋಗವನ್ನು ಅರಸಿಕೊಂಡು ವಲಸೆ ಹೋಗುತ್ತಿದ್ದಾರೆ ಎಂದರೆ ಬೆಂಗಳೂರು ನಗರ  ಆಕರ್ಷಣೆ ಯಾಗಿದೆ ಎಂದರೆ ಅದಕ್ಕೆ ಕೆಂಪೇಗೌಡರ ಕಾಲದಲ್ಲಿ ನಗರ ನಿರ್ಮಾಣ ಕಾರ್ಯದಲ್ಲಿ ಕೈಗೊಂಡಿರುವ ಯೋಜನೆಗಳೇ ಸಾಕ್ಷಿಯಾಗಿವೆ‌ ಎಂದು ತಿಳಿಸಿದರು.

ಜೊತೆಗೆ ಕಾರ್ಯಕ್ರಮಕ್ಕೆ  ಆಗಮಿಸಿದ ಸಾರ್ವಜನಿಕರಿಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು

ಈ ಸಂಧರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಉಪಾದ್ಯಕ್ಷ ಕೆ ಎಸ್ ಪ್ರಭಾಕರ್,  ಕೆ.ಪಿ.ಸಿ.ಸಿ ಸದಸ್ಯ ಕಿಕ್ಕೇರಿ ಸುರೇಶ್, ಜೆ.ಡಿ.ಎಸ್ ಹೋಬಳಿ ಘಟಕದ ಅಧ್ಯಕ್ಷ ಕಾಯಿ ಮಂಜೇಗೌಡ, ಎ.ಪಿ.ಎಂ.ಸಿ ಮಾಜಿ ಅದ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಲ್ಲೂಕು ಪಂಚಾಯಿತಿ ಮಾಜಿ ಉಪಾದ್ಯಕ್ಷ ವಡ್ಡರಹಳ್ಳಿ ರವಿ, ಐಕನಹಳ್ಳಿ ಕೃಷ್ಣೇಗೌಡ್ರು, ತಾಲ್ಲೂಕು ಒಕ್ಕಲಿಗರ ಸಂಘದ ಅದ್ಯಕ್ಷ ಕುಮಾರ್, ಗೌರವದ್ಯಕ್ಷ ಟಿ ವೈ ಆನಂದ್, ಟಿ.ಎ.ಪಿ‌.ಎಂ.ಎಸ್ ನಿರ್ದೇಶಕ ಮಧು,  ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಕೆ ವೈ ಹರೀಶ್, ಸದಸ್ಯ ಕೆ.ಬಿ ಶೇಖರ್, ಕಾರ್ಯದರ್ಶಿ ಪುಟ್ಟರಾಜು, ಗ್ರಾಮ ಪಂಚಾಯತಿ ಮಾಜಿ ಅದ್ಯಕ್ಷ ಸೊಳ್ಳೇಪುರ ಕೇಶವಮೂರ್ತಿ, ಗಂಗೇನಹಳ್ಳಿ ರಘು, ಲಕ್ಷ್ಮೀಪುರ ಚಂದ್ರೇಗೌಡ್ರು, ಕಿಕ್ಕೇರಮ್ಮ ಎಳನೀರು ವರ್ತಕರ ಸಂಘದ ಅಧ್ಯಕ್ಷ ದಬ್ಬೇಘಟ್ಟ ಸುಂದರ್,  ನಿವೃತ್ತ  ಪ್ರಾಶುಂಪಾಲರಾದ  ಜಾನೇಗೌಡ್ರು, ನಿವೃತ್ತ ಯೋಧ ಲೋಕೇಶ್,  ಮುಖಂಡರಾದ ಪುಟ್ಟರಾಜು,  ಚಿನ್ನೇನಹಳ್ಳಿ ಕಾಂತರಾಜು, ಮಣೇಶ್, ಗಾಣದಹಳ್ಳಿ ಆಶೋಕ್, ಮಡಿಕಲ್  ಸತ್ಯ, ಕಿಕ್ಕೇರಿ ಸುರೇಶ್, ಮಧು, ಭಜರಂಗದಳ ಅದ್ಯಕ್ಷ ಅಕ್ಷಯ್, ಮೊಬೈಲ್ ಅಂಗಡಿ ಪುನೀತ್, ಸ್ಟೂಡಿಯೋ ಕುಮಾರ್,    ಸೇರಿದಂತೆ ಸ್ಥಳಿಯ ಮುಖಂಡರುಗಳು ಸುತ್ತಮುತ್ತಲಿನ ಗ್ರಾಮಸ್ಥರುಗಳಿದ್ದರು