ಸಮಾಜ ಸೇವಕ ವಿ.ಪ್ರಕಾಶ್ ರವರಿಂದ ಆರೋಗ್ಯ ತಪಾಸಣೆ ಶಿಬಿರ

ಸಮಾಜ ಸೇವಕ ವಿ.ಪ್ರಕಾಶ್ ರವರಿಂದ ಆರೋಗ್ಯ ತಪಾಸಣೆ ಶಿಬಿರ
ಸುದ್ದಿ ಕಿರಣ ನ್ಯೂಸ್ ಡೆಸ್ಕ್

ಕೆಜಿಎಫ್: ನಗರದ ಎಸ್ . ಟಿ. ಬ್ಲಾಕ್ ನಲ್ಲಿ ಸಮಾಜ ಸೇವಕರು. ಜೆಡಿಎಸ್ ಪಕ್ಷದ ಯುವ ಮುಖಂಡ. ವಿ.ಪ್ರಕಾಶ್ ರವರಿಂದ ವಾರ್ಡಿನ ನಿವಾಸಿಗಳ ಆರೋಗ್ಯದ ದೃಷ್ಟಿಯಿಂದ. ಉಚಿತ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ. ಮಾಡಲಾಯಿತು. 

ನಂತರ ಅವರು ಮಾತನಾಡಿ. ಮಳೆಗಾಲ ಪ್ರಾರಂಭವಾಗುತ್ತಿದೆ ಈ ಸಂದರ್ಭದಲ್ಲಿ ವೃದ್ಧರಿಗೆ ಹಾಗೂ ಮಕ್ಕಳಿಗೆ ಹಲವು ಬಗೆಯ ಆರೋಗ್ಯ ಸಮಸ್ಯೆಗಳು ಕಾಡುತ್ತದೆ. ಈ ದೃಷ್ಟಿಯಿಂದ ಮಳೆಗಾಲದ ಮೊದಲೇ ವಾರ್ಡಿನ ನಿವಾಸಿಗಳ ಅನುಕೂಲಕ್ಕೆ ನಗರದಲ್ಲಿರುವ ಪ್ರತಿಷ್ಠಿತ ಆಸ್ಪತ್ರೆ ಚೆಚ್ಚಿ ನಾಡು ಅವರ ಸಹಯೋಗದಲ್ಲಿ ನುರಿತ ತಜ್ಞವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರವನ್ನು ಉಚಿತವಾಗಿ ಏರ್ಪಡಿಸಲಾಗಿದೆ. 

ವಾರ್ಡಿನಲ್ಲಿ ಯಾರೇ ಆಗಲಿ ಆರೋಗ್ಯದಲ್ಲಿ ಸಮಸ್ಯೆ ಉಂಟಾದಾಗ ನನ್ನನ್ನು ಸಂಪರ್ಕಿಸಿದರೆ. ನಾನು ನಿಮ್ಮ ಮನೆ ಬಾಗಿಲಿಗೆ ಬಂದು ತಮ್ಮನ್ನು ಕರೆದುಕೊಂಡು ಹೋಗಿ ಆರೋಗ್ಯದ ಚಿಕಿತ್ಸೆಗಳನ್ನು ನೀಡಿ ಕರೆದುಕೊಂಡು ಬರುತ್ತೇನೆ. ನನ್ನ ಉದ್ದೇಶ ನನ್ನ ವಾರ್ಡಿನ ಜನತೆ ಆರೋಗ್ಯವನ್ನು ಕಾಪಾಡುವುದು. ವಾರ್ಡಿನಲ್ಲಿ ಯಾವುದೇ ಸಮಸ್ಯೆ ಇದ್ದರೂ ನಾನು ಮುಂದೆ ಬಂದು ನನ್ನ ಕೈಯಲ್ಲಿ ಆಗುವ ಸಹಾಯವನ್ನು ಮಾಡುತ್ತೇನೆ ಎಂದು ತಿಳಿಸಿದರು. ಆರೋಗ್ಯ ಶಿಬಿರದಲ್ಲಿ ಸುಮಾರು. 300 ಹೆಚ್ಚು ರೋಗಿಗಳು ಉಚಿತ ತಪಾಸಣೆಯನ್ನು ಮಾಡಿಕೊಂಡರು. ರೋಗಿಗಳಿಗೆ ಉಚಿತವಾಗಿ ಔಷಧಿಗಳು ಪೌಷ್ಟಿಕ ಆಹಾರ ಕಿಟ್ಟು ನೀಡಲಾಯಿತು. ಈ ಸಂದರ್ಭದಲ್ಲಿ ಚೆಟ್ಟಿನಾಡು ಆಸ್ಪತ್ರೆಯ ಹಿರಿಯ ವೈದ್ಯರು.