ಹಿರೇಅಣಜಿ ಗ್ರಾಮದ ಪ್ತಗತಿಪರ ಕೃಷಿಕರಾದ ಲಿಂಗನಗೌಡ್ರ ಸಹೋದರರ ಹುಲೂಸಾಗಿ ಬೆಳೆದ ಅಡಕೆ ಹಾಗೂ ಬಾಳೆ ಬೆಳೆ
ಹಾವೇರಿ :-ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಮದ ಪ್ರಗತಿಪರ ಕೃಷಿಕರಾದ ಹುಚ್ಚನಗೌಡ್ರ ಲಿಂಗನಗೌಡ್ರ ಹಾಗೂ ಚಂದ್ರಗೌಡ ಲಿಂಗನಗೌಡ್ರ ಅವರು ಅಡಕೆ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಮಿಟ್ಲಿ ಬಾಳೆ ಬೆಳೆದು ಉತ್ತಮ ಪಸಲು ಪಡೆದು ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಹುಲೂಸಾಗಿ ಬೆಳೆದ ಅಡಕೆ ಹಾಗೂ ಬಾಳೆ ಬೆಳೆ ವೀಕ್ಷಣೆ ಮಾಡಿ ಮಾತನಾಡಿದ ಕೃಷಿ ಸಲಹೆಗಾರ ಡಾ. ಜಿ. ಎಸ್ ಕುಲಕರ್ಣಿ ಹವಾಮಾನದ ವೈಪರಿತ್ಯದಿಂದ ಸಾಮಾನ್ಯವಾಗಿ ಒಬ್ಬ ರೈತ ಒಂದು ಸಮಯಕ್ಕೆ ಒಂದೆ ಬೆಳೆ ಬೆಳೆದು ಯಶಸ್ವಿಯಾಗುವುದು ಕಷ್ಟವಾಗಿದೆ ಇಂತಹ ಕಠಿಣ ಸಮಯದಲ್ಲಿ ಲಿಂಗನಗೌಡ್ರ ಸಹೋದರರು ಅಡಕೆ ಬೆಳೆಯಲ್ಲಿ ಮಿಶ್ರ ಬೆಳೆಯಾಗಿ ಮಿಟ್ಲಿ ಬಾಳೆ ಬೆಳೆದು ಅದಕ್ಕೆ ಕೊಟ್ಟಿಗೆ ಗೊಬ್ಬರ, ಕುರಿ -ಕೋಳಿ ಗೊಬ್ಬರ ಹಾಗೂ ಭಾರತದ ಪ್ರಪ್ರಥಮ ಸಿಲಿಕಾನ್ ಉತ್ಪಾದಕ ವೇದಾಂತ ಕಂಪನಿಯ ಉತ್ಪನ್ನಗಳನ್ನು ಉಪಯೋಗಿಸಿ ಅಧಿಕ ತಾಪಮಾನದಲ್ಲಿಯೂ ಗುಣಮಟ್ಟದ ಇಳುವರಿ ಪಡೆದು ರೈತ ಸಮುದಾಯಕ್ಕೆ ಮಾದರಿಯಾಗಿದ್ದಾರೆ ಎಂದರು.
ಪ್ರಗತಿಪರ ಕೃಷಿಕರಾದ ಹುಚ್ಚನಗೌಡ ಲಿಂಗನಗೌಡ್ರ ಮಾತನಾಡಿ ನಮ್ಮ ಅಡಕೆ ಮತ್ತು ಬಾಳೆ ಬೆಳೆಗೆ ಕೃಷಿ ಸಲಹೆಗಾರರಾದ ಡಾ. ಗಂಗಯ್ಯ ಕುಲಕರ್ಣಿ ಅವರ ನಿರಂತರ ಸಲಹೆ ಹಾಗೂ ಮಣ್ಣು ಮತ್ತು ನೀರನ್ನು ಸುದ್ದಿಕರಿಸಿ ಉತ್ತಮ್ಮ ಗುಣಮಟ್ಟದ ಅಧಿಕ ಇಳುವರಿ ಕೊಡುವ ಸಿಲಿಕಾನ ಅಂಶವಿರುವ ಆಗ್ರೋಶೀಲ -75,ಕಾರ್ಬನ ಇಂಗಾಲ ಇರುವ ಕಾರ್ಬೋಸಿಲ್,ನೀಮಉರ್ಜಾ ಹಾಗೂ ನುಟ್ರಾಸಿಲ್ ಉತ್ಪನ್ನಗಳನ್ನು ಉಪಯೋಗಿಸಿ ಒಂದೂವರೆ ಎಕರೆಯಲ್ಲಿ ಒಟ್ಟು 6 ಟನ್ನಗೂ ಅಧಿಕ ಇಳುವರಿ ಬಂದಿದ್ದು ಸರಾಸರಿ ದರ ಕೆಜಿಗೆ 40 ರೂ ಸಿಕ್ಕಿದ್ದು ಒಟ್ಟು ಆದಾಯ 3 ಲಕ್ಷ ಬಂದಿದ್ದು ಅದರಲ್ಲಿ ಅಡಕೆ ಕೂಡಾ ಸುಂದರವಾಗಿ ಬೆಳೆದು ಹಿಂಗಾರಿ ಉತ್ತಮ ತಾಜಾತನದಿಂದ ಕೂಡಿದ್ದು ಹಚ್ಚ ಹಸಿರಾಗಿ ಎದ್ದು ಕುಣಿಯುವಂತಿದೆ ಎಂದರು.
ಇನ್ನೊರ್ವ ರೈತ ಚಂದ್ರಗೌಡ ಲಿಂಗನಗೌಡ್ರ ಮಾತನಾಡಿ ಈ ವರ್ಷ ಅಡಕೆ ಬೆಳೆಗೆ ಹಿಂಗಾರಿಗೆ ಕೀಟ ಹಾಗೂ ರೋಗ ಬಾದೆಯಿಂದ ಹಲವಾರು ಟೋಟಗಳು ನಾಶವಾಗಿವೆ. ಆದರೆ ನಾವು ಡಾ. ಗಂಗಯ್ಯ ಕುಲಕರ್ಣಿ ಅವರ ತೆಗೆದುಕೊಂಡ ಬೆಳೆದ ಕಾರಣ ರೋಗ ಹಾಗೂ ಕೀಟ ಮುಕ್ತವಾಗಿ ಉತ್ತಮ ಪಸಲು ಪಡೆಯಲು ಸಾಧ್ಯವಾಗಿದೆ ಎಂದರು.
ಯುವ ಕೃಷಿಕರಾದ ರಾಮನಗೌಡ ಲೋಕನಗೌಡ ಲಿಂಗನಗೌಡ್ರ,ನಾಗಯ್ಯ ಹಿರೇಮಠ ಮುಂತಾದವರು ತೋಟ ವೀಕ್ಷಣೆ ಮಾಡಿ ಸಂತಷಪಟ್ಟರು.
What's Your Reaction?