ಗುರುಗಳಿಗಿದೋ ನಮನ
ಅರಿವಿನ ಮನೆಯೊಳಗೆ
ಅಕ್ಷರದೀಪವ ಬೆಳಗಿಸಿ
ಆರಾಧಿಸುತ ಶಾರದೆಯ
ಅಕ್ಕರೆಯಿಂದ ಕಲಿಸುವ
ಗುರುಗಳ ಚರಣಕೆ ನಮನ
ವಿದ್ಯೆ ಬುದ್ಧಿ ಬೋಧಿಸುತ
ವಿವೇಕವನು ಮೂಡಿಸುತ
ವಿಧೇಯರನಾಗಿ ಬೆಳೆಸುತ
ವಿಜೇತರನಾಗಿಸುತ ಬೀಗುವ
ಗುರುಗಳ ಅಡಿಗಳಿಗೆ ನಮನ
ಮತಭೇದಗಳ ಮರೆಸುತ
ಮಾನವೀಯತೆ ಬೋಧಿಸಿ
ಮೌಲ್ಯಯುತ ಬದುಕಿನೆಡೆ
ಮುಖವ ತೋರಿಸಿ ಮೆರೆವ
ಗುರುಗಳ ಕಾಲುಗಳಿಗೆ ನಮನ
ನೋಟದಲಿ ಭರವಸೆ ತುಂಬಿ
ನಡೆನುಡಿಗಳಲಿ ಶಿಸ್ತು ತೋರಿ
ನೀತಿಮಾರ್ಗ ಭರದಿ ಸಾಗುತ
ನಾಳೆಗಳತ್ತ ದೃಷ್ಟಿ ಹರಿಸುವ
ಗುರುಗಳ ಪಾದಗಳಿಗೆ ನಮನ
+ಗಣೇಶ ಪ್ರಸಾದ ಪಾಂಡೇಲು+