Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ನಿಡ್ಡೋಡಿ ಪ್ರಸ್ತಾವಿತ ಸೀ ಫುಡ್ ಪಾರ್ಕಿನಿಂದ ಪರಿಸರ ಮಾಲಿನ್ಯ

ನಿಡ್ಡೋಡಿ ಪ್ರಸ್ತಾವಿತ ಸೀ ಫುಡ್ ಪಾರ್ಕಿನಿಂದ ಪರಿಸರ ಮಾಲಿನ್ಯ

ಮೂಡುಬಿದಿರೆ: ನಿಡ್ಡೋಡಿಯ ಪ್ರಸ್ತಾವಿತ ಸೀ ಫುಡ್ ಪಾರ್ಕಿನಿಂದ ಪರಿಸರ ಮಾಲಿನ್ಯ ವ್ಯಾಪಕವಾಗಿ ಹರಡಲಿದೆ. ಜಲ ಸಂಪನ್ಮೂಲ ಕಲುಷಿತವಾಗಿ ಕೃಷಿ ಚಟುವಟಿಕೆಗಳಿಗೆ ಮಾರಕವಾಗಲಿದೆ. ಇಂಥ ಯೋಜನೆ ನಿಡ್ಡೋಡಿಗೆ ಸೂಕ್ತವಲ್ಲ ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, `ನಿಡ್ಡೋಡಿಗೆ ಸೀ ಫುಡ್ ಪಾರ್ಕ್ ಬೇಕು ಎನ್ನುವವರು ಕಾರವಾರದಲ್ಲಿ ಅನೇಕ ವರ್ಷಗಳ ಹಿಂದೆ ಸ್ಥಾಪನೆಯಾಗಿ, ಬಳಿಕ ನಡೆಸಲಾಗದೆ, ಗುತ್ತಿಗೆಗೆ ಕೊಟ್ಟು, ಅದೂ ನಡೆಯದೆ ಇದೀಗ ಕಳೆದ ಏಳೆಂಟು ವರ್ಷದಿಂದ ಬಾಗಿಲು ಹಾಕಿಕೊಂಡಿರುವ ಘಟಕವನ್ನು ನೋಡಿಬರಲಿ. ಇನ್ನೂ ತೆರವುಗೊಳ್ಳದ ಆ ಘಟಕ ಇದೀಗ ಭೂತ ಬಂಗಲೆಯಂತಾಗಿದೆ. ಮಾಜಿ ಮೀನುಗಾರಿಕೆ ಸಚಿವನಾಗಿ ಇಂಥ ಪಾರ್ಕ್ ಗಳು ಎಷ್ಟು ಬೋಗಸ್ ಚಟುವಟಿಕೆಗಳಿಗೆ ಆಸ್ಪದ ಕೊಡುವಂಥದು ಎಂಬುದು ನನಗೆ ತಿಳಿದಿದೆ’ ಎಂದರು.

ನಿಡ್ಡೋಡಿಯಲ್ಲಿ ಜನರಿಗೆ ಸತ್ಯ ಸಂಗತಿ ತಿಳಿಸದೆ, ಜನರ ಆಕ್ಷೇಪಕ್ಕೆ ಬೆಲೆ ಕೊಡದೆ, ಈ ಯೋಜನೆ ಬರುವುದಾದಲ್ಲಿ ನನ್ನ ತೀವ್ರ ವಿರೋಧವಿದೆ. ಈ ಹಿಂದೆ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆ ವಿರುದ್ಧ, ಬಾಕ್ಸೈಟ್ ಗಣಿಗಾರಿಕೆ ಪ್ರಸ್ತಾವನೆಯ ವಿರುದ್ಧ ಹೋರಾಡಿದ್ದೆ. ವಿಧಾನ ಪರಿಷತ್ ಸದಸ್ಯನಾಗಿದ್ದಾಗ ಕಡಂದಲೆ ಏಂಜೆಲ್ ಹಾರ್ಡ್ ಬಣ್ಣದ ಕಾರ್ಖಾನೆ ವಿರುದ್ಧ ನಡೆದಿದ್ದ ಹೋರಾಟದಲ್ಲಿ ಈಗ ಸಂಸದರಾಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡಾ ಪಾಲ್ಗೊಂಡಿದ್ದನ್ನು ಗಮನಿಸಬೇಕು.

ಪುತ್ತೂರಿನಿಂದ ಎತ್ತಂಗಡಿ ಮಾಡಲ್ಪಟ್ಟಿರುವ ಈ ಸೀಫುಡ್ ಪಾರ್ಕ್ ನಿಡ್ಡೋಡಿಗೆ ಬರಲು ಹವಣಿಸುತ್ತಿರುವುದು ಖಂಡನೀಯ. ನಿಡ್ಡೋಡಿಯಲ್ಲಿ ಸ್ವಂತ ಹಾಗೂ ಅಕ್ರಮ ಸಕ್ರಮ ಮೂಲಕ ಭೂಮಿ ಪಡೆದುಕೊಂಡವರು ಕಷ್ಟದಿಂದ ತೋಟ, ಕೃಷಿ ಮಾಡಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ಬದುಕು ನಡೆಸುತ್ತಿದ್ದಾರೆ. ಅವರನ್ನೆಲ್ಲ ಒಕ್ಕಲೆಬ್ಬಿಸುವ ಬೆದರಿಕೆಯ ಮಾತು ನಾಯಕರಿಂದ ಕೇಳಿಬರುತ್ತಿದೆ. ಹಾ

ಗೊಂದು ವೇಳೆ ಭೂಮಿ ಸೆಳೆದುಕೊಂಡರೆ ಸಂತ್ರಸ್ತರು, ಹೋರಾಟಗಾರರು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತದೆ. ನಾನು ಆಗ ಅವರ ಪರ ನಿಲ್ಲಲೇಬೇಕಾಗುತ್ತದೆ’ ಎಂದು ಭರವಸೆ ನೀಡಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!