ಕಟೀಲು: ಪ್ರಸಿದ್ಧ ಕ್ಷೇತ್ರವಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಬಗ್ಗೆ ಕೆಲವು ದಿನಗಳ ಹಿಂದೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ್ದ ಮೂಲತಃ ಬಜ್ಪೆಯವರಾದ, ಪ್ರಸ್ತುತ ಮುಂಬೈಯಲ್ಲಿ ನೆಲೆಸಿರುವ ಆಲ್ಬರ್ಟ್ ಫೆರ್ನಾಂಡಿಸ್ ಕ್ಷೇತ್ರಕ್ಕೇ ಆಗಮಿಸಿ ಕ್ಷಮೆ ಯಾಚಿಸಿದ ಘಟನೆ ನಡೆದಿದೆ.
ಆತನ ಹೇಳಿಕೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದ್ದು, ಆ ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಇದೀಗ ಆಲ್ಪರ್ಟ್ ಗೆ ತನ್ನ ತಪ್ಪಿನ ಅರಿವಾಗಿ ಕಟೀಲಮ್ಮನ ಕ್ಷೇತ್ರಕ್ಕೇ ಬಂದು, ಓ ಅಪ್ಪೆ ಉಳ್ಳಾಲ್ದಿ ಎನ್ನ ತಪ್ಪಾಂಡ್. ಮಾಪು ಮಲ್ಪುಲೆ ಎಂದು ಕಣ್ಣೀರಿಟ್ಟು ಕ್ಷಮೆ ಯಾಚಿಸಿದ್ದಾರೆ.
ಈ ಸಂದರ್ಭದಲ್ಲಿ ಹಿಂದೂ ಸಂಘಟನೆ ಪ್ರಮುಖರು, ಕಾರ್ಯಕರ್ತರು ಹಾಗೂ ಬಿಜೆಪಿ ನಾಯಕರು ಇದ್ದರು.
ಬಳಿಕ ಬಜ್ಪೆ ಠಾಣೆಗೆ ತೆರಳಿ ಪರಸ್ಪರ ರಾಜೀ ಪಂಚಾಯತಿಕೆಯಲ್ಲಿ ಪ್ರಕರಣ ಇತ್ಯರ್ಥಗೊಳಿಸಲಾಯಿತು.