Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಜ್ಞಾನದೀವಿಗೆ ಯೋಜನೆಯಡಿ ಟ್ಯಾಬ್ ವಿತರಣೆ

ಜ್ಞಾನದೀವಿಗೆ ಯೋಜನೆಯಡಿ ಟ್ಯಾಬ್ ವಿತರಣೆ

ಉಡುಪಿ: ಪಬ್ಲಿಕ್ ಟಿವಿ ಮತ್ತು ರೋಟರಿ ಇಂಟರ್ ನ್ಯಾಷನಲ್ ಸಹಯೋಗದ ಜ್ಞಾನ ದೀವಿಗೆ ಉಚಿತ ಟ್ಯಾಬ್ ವಿತರಣೆ ಅಭಿಯಾನಕ್ಕೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆ ಕೈಜೋಡಿಸಿದ್ದು, ಜಿಲ್ಲೆಯ ಎರಡು ಸರ್ಕಾರಿ ಶಾಲೆಗಳಿಗೆ ತಲಾ 100 ಟ್ಯಾಬ್ ಗಳನ್ನು ಗುರುವಾರ ವಿತರಿಸಲಾಯಿತು.

ಸಿದ್ಧಾಪುರ ಸರ್ಕಾರಿ ಪ್ರೌಢಶಾಲೆ ಮತ್ತು ಹೆಬ್ರಿ ಸರ್ಕಾರಿ ಪ್ರೌಢಶಾಲೆಯ ತಲಾ 100 ಮಂದಿ ವಿದ್ಯಾರ್ಥಿಗಳಿಗೆ ಒಟ್ಟು ಸುಮಾರು 3.45 ಲಕ್ಷ ರೂ. ಮೊತ್ತದ ಟ್ಯಾಬ್ ಗಳನ್ನು ಮಲಬಾರ್ ಗೋಲ್ಡ್ ಸಂಸ್ಥೆ ಪ್ರಾಯೋಜಿಸಿದ್ದು, ಜಿಲ್ಲಾಧಿಕಾರಿ ಜಿ. ಜಗದೀಶ್ ಹಸ್ತಾಂತರಿಸಿದರು.

ಸಂಸ್ಥೆಯ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದ ಡಿಸಿ ಜಗದೀಶ, ಮಕ್ಕಳ ಶಿಕ್ಷಣಕ್ಕೆ ದೊಡ್ಡ ಮಟ್ಟದ ದೇಣಿಗೆ ನೀಡಿದ್ದು, ಇದು ತಂತ್ರಜ್ಞಾನ ಕೈಗೆಟುಕದ ಮಕ್ಕಳಿಗೆ ಬಹಳ ಉಪಯೋಗವಾಗಲಿದೆ. ಹಳ್ಳಿಯ ಮಕ್ಕಳ ಮುಂದಿನ ವಿದ್ಯಾಭ್ಯಾಸ, ಮಕ್ಕಳ ಏಳಿಗೆಗಾಗಿ ಕೈಗೊಂಡ ಕಾರ್ಯಕ್ರಮ ಯಶಸ್ವಿಯಾಗಬೇಕಾದಲ್ಲಿ ವಿದ್ಯಾರ್ಥಿಗಳು ಅದರ ಸದುಪಯೋಗ ಪಡಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಟ್ಯಾಬ್ ಗಳು ಪೂರಕವಾಗಲಿ ಎಂದವರು ಹಾರೈಸಿದರು.

ತಮ್ಮ ಸಂಸ್ಥೆಯ ಲಾಭಾಂಶದ 5 ಶೇ. ಹಣವನ್ನು ಸಾಮಾಜಿಕ ಚಟುವಟಿಕೆಗಳಿಗೆ ನೀಡುತ್ತಾ ಬರಲಾಗಿದೆ. ಶೈಕ್ಷಣಿಕ, ವೈದ್ಯಕೀಯ, ಪರಿಸರ, ಹೆಣ್ಣುಮಕ್ಕಳಿಗೆ ಚಿನ್ನ ಕೊಟ್ಟು ಮದುವೆ ಮಾಡಿಸುವ ಕೆಲಸದಲ್ಲಿ ಮಲಬಾರ್ ಗೋಲ್ಡ್ ತೊಡಗಿಕೊಂಡಿದೆ. ಈವರೆಗೆ ಮಲಬಾರ್ ಗೋಲ್ಡ್ ಸಂಸ್ಥೆ ಭಾರತದಲ್ಲಿ 130 ಕೋ. ರೂ. ಸಹಾಯ ಮಾಡಿದೆ ಎಂದು ಸಂಸ್ಥೆಯ ಉಡುಪಿ ಹೆಡ್ ಹಫೀಝ್ ರೆಹಮಾನ್ ಹೇಳಿದರು.

ಡಿಡಿಪಿಐ ಎನ್. ಎಚ್. ನಾಗೂರ, ರೋಟರಿ ಉಡುಪಿ ಅಧ್ಯಕ್ಷೆ ರಾಧಿಕಾ ಲಕ್ಷ್ಮೀನಾರಾಯಣ, ರಾಘವೇಂದ್ರ ನಾಯಕ್, ಪುರಂದರ ತಿಂಗಳಾಯ, ತಂಝೀಮ್ ಇದ್ದರು.

ಪಬ್ಲಿಕ್ ಟಿವಿ ಜಿಲ್ಲಾ ವರದಿಗಾರ ದೀಪಕ್ ಜೈನ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!