ಕವಿ ಉದಂತ ಶಿವಕುಮಾರ್ ಅವರ "ಮೌನದೊಳಗಿನ ಪ್ರಣತಿ" ಕವನ ಸಂಕಲನಕ್ಕೆ "ವಿಶ್ವಚೇತನ ಸಾಹಿತ್ಯ ಪ್ರಶಸ್ತಿ"
ಬೆಂಗಳೂರಿನ ಮಲ್ಲತ್ತಳ್ಳಿಯಲ್ಲಿರುವ ಗಾನಪಲ್ಲವಿ ಆಡಿಟೋರಿಯಂ ನಲ್ಲಿ ವಿಶ್ವಚೇತನ ಬಳಗ ಮತ್ತು ವಾಸುದೇವ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಕವಿ ಉದಂತ ಶಿವಕುಮಾರ್ ಅವರ "ಮೌನದೊಳಗಿನ ಪ್ರಣತಿ" ಕವನ ಸಂಕಲನಕ್ಕೆ "ವಿಶ್ವಚೇತನ ಸಾಹಿತ್ಯ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜರಾಜೇಶ್ವರಿನಗರ ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷರಾದ ಡಾ. ಎಚ್ ತುಕಾರಾಂ, ಕನ್ನಡ ಸಂಘರ್ಷ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ತಾ.ಸಿ. ತಿಮ್ಮಯ್ಯ ವಿಶ್ವಚೇತನ ಬಳಗದ ಅಧ್ಯಕ್ಷರಾದ ಎಂ. ಶಿವಸ್ವಾಮಿ, ಸಾಹಿತಿಗಳಾದ ಡಾ. ಅಂಬುಜಾಪ್ರಕಾಶ್, ಬಿ. ಶೃಂಗೇಶ್ವರ್, ದಮ್ಮಪ್ರಿಯ ಎಂ ಗಿರಿಯಪ್ಪ ಹಾಗೂ ಕವಿ ಉದಂತ ಶಿವಕುಮಾರ್ ಉಪಸ್ಥಿತರಿದ್ದರು.
What's Your Reaction?