ಮಕ್ಕಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಗುರುತಿಸಿ 

ಮಕ್ಕಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಗುರುತಿಸಿ 

Feb 5, 2024 - 15:13
Feb 5, 2024 - 15:14
 0  2
ಮಕ್ಕಳಲ್ಲಿ ಇರುವ ವಿಶೇಷ ಪ್ರತಿಭೆಯನ್ನು ಗುರುತಿಸಿ 
ಕೆಜಿಎಫ್: ಮಕ್ಕಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡೆಸಿಕೊಂಡಿದ್ದಾರೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿ ವೆಂಕಟ ರಾಮಾಚಾರಿ ಹೇಳಿದರು. ನಗರದ ಕಿಂಗ್ ಜಾರ್ಜ್ ಹಾಲ್ ನಲ್ಲಿ ಗ್ರಾಂಡ್ ರಯಾನ್ ರೈನ್ಸ್ ಶಾಲೆ ವತಿಯಿಂದ ಇತ್ತೀಚಿಗೆ ಆಯೋಜಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಮಕ್ಕಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದರು. ಮಕ್ಕಳು ಮನೆಗಿಂತಲೂ ಹೆಚ್ಚಿನ ಸಮಯ ಶಾಲೆಯಲ್ಲಿಯೇ ಕಳೆಯುವುದರಿಂದ ಪಾಲಕರಿಗೆ ಇದ್ದಷ್ಟೇ ಕಾಳಜಿ ಶಿಕ್ಷಕರಿಗೂ ಇರುತ್ತದೆ ಎಂದರು. ಮಕ್ಕಳ ಮೇಲೆ ಶಿಕ್ಷಕರು ಹೆಚ್ಚಿನ ಪ್ರಭಾವ ಬೀರುವುದರಿಂದ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಶಿಕ್ಷಕರಿಗೆ ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಸುರೇಶ್ ನಾರಾಯಣ ಕುಟ್ಟಿ ಮಾತನಾಡಿ ಕೆಲವು ಮಕ್ಕಳಂತೂ ಹಲವು ಪ್ರತಿಭೆಗಳಲ್ಲಿ ಅರ್ಹರಾಗಿರುತ್ತಾರೆ. ಅಂತಹ ಮಕ್ಕಳ ಪ್ರತಿಭೆಗಳನ್ನು ಶಿಕ್ಷಕರು ಗುರುತಿಸಿ ಅವುಗಳನ್ನು ಸಾರ್ವಜನಿಕ ವೇದಿಕೆಗಳಲ್ಲಿ ಪ್ರದರ್ಶಿಸುವ ಕೆಲಸ ವಾರ್ಷಿಕೋತ್ಸವದ ಅಂತಹ ಕಾರ್ಯಕ್ರಮಗಳ ಮೂಲಕ ಮಾಡಬೇಕು ಎಂದರು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಉತ್ತಮವಾಗಿ ನೃತ್ಯ ಪ್ರದರ್ಶನ ನೀಡಿದ ಮಕ್ಕಳಿಗೆ ಶಾಲೆಯ ಮುಖ್ಯಸ್ಥರು ಬಹುಮಾನ ವಿತರಿಸಿದರು. ಪ್ರಾಂಶುಪಾಲೆ ಶ್ರುತಿ ಪ್ರೀತಿ ಸಹ ಶಿಕ್ಷಕಿಯರು ಪ್ರೀತಿ.ಶಾರದಾ .ಸಂಗೀತ .ಕೀರ್ತನ.  ನಯನಾ ಇದ್ದರು.

What's Your Reaction?

like

dislike

love

funny

angry

sad

wow