ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 18
ನಿರಂತರ ಜ್ಞಾನಯಜ್ಞಕ್ಕೆ ಚಾಲನೆ
ಉಡುಪಿ: ಪರ್ಯಾಯ ಕೃಷ್ಣಾಪುರ ಶ್ರೀಕೃಷ್ಣಮಠ ಆಶ್ರಯದಲ್ಲಿ ರಾಜಾಂಗಣದ ಜನಾರ್ದನತೀರ್ಥ ವೇದಿಕೆಯಲ್ಲಿ ಪರ್ಯಾಯದುದ್ದಕ್ಕೂ ನಡೆಸಲುದ್ದೇಶಿಸಿರುವ ನಿರಂತರ ಜ್ಞಾನಯಜ್ಞವನ್ನು ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಮಂಗಳವಾರ ಉದ್ಘಾಟಿಸಿದರು.
ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ವಿದ್ವಾಂಸ ಬನ್ನಂಜೆ ಗೋಪಾಲಕೃಷ್ಣ ಉಪಾಧ್ಯಾಯ ಇದ್ದರು.
ಬಳಿಕ ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಪರ್ಯಾಯದ ಪ್ರಥಮ ಪ್ರವಚನ ನಡೆಸಿದರು