Wednesday, July 6, 2022
Home ಸಮಾಚಾರ ಪ್ರಶಿಕ್ಷಣದಿಂದ ಪಕ್ಷದ ಪರಿಪೂರ್ಣ ಅರಿವು

ಪ್ರಶಿಕ್ಷಣದಿಂದ ಪಕ್ಷದ ಪರಿಪೂರ್ಣ ಅರಿವು

ಉಡುಪಿ: ಪಕ್ಷದ ಶಿಬಿರಗಳು, ಪ್ರಶಿಕ್ಷಣ ವರ್ಗಗಳು ಪಕ್ಷ ಕಾರ್ಯಕರ್ತರಿಗೆ ಪಕ್ಷದ ಸಂಪೂರ್ಣ ಅರಿವು, ಶಿಕ್ಷಣ ಹಾಗೂ ಆತನ ವ್ಯಕ್ತಿತ್ವ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆ ಮೂಲಕ ಸುಶಿಕ್ಷಿತ ಸಮಾಜ ನಿರ್ಮಾಣದೊಂದಿಗೆ ನವ ರಾಷ್ಟ್ರ ನಿರ್ಮಾಣದಲ್ಲಿ ಸಹಕಾರಿಯಾಗಲಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.
ಬಿಜೆಪಿ ನಗರ ಆಶ್ರಯದಲ್ಲಿ ಈಚೆಗೆ ಮಣಿಪಾಲದಲ್ಲಿ ನಡೆದ ಉಡುಪಿ ನಗರ ಮಂಡಲದ ಎರಡು ದಿನಗಳ ಪ್ರಶಿಕ್ಷಣ ವರ್ಗ ಉದ್ಘಾಟಿಸಿ ಮಾತನಾಡಿದರು.
ಪ್ರಧಾನಿ ಮೋದಿ ಕೂಡಾ ಪಕ್ಷದ ಪ್ರಶಿಕ್ಷಣ ವರ್ಗಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ. ಅದರಿಂದ ಪಕ್ಷದ ಪ್ರಶಿಕ್ಷಣ ವರ್ಗ ಎಷ್ಟು ಮಹತ್ವಪೂರ್ಣ ಎಂದು ತಿಳಿದುಕೊಳ್ಳಬಹುದು. ಪಕ್ಷ ಕಾರ್ಯಕರ್ತರೆಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದವರು ಕರೆ ನೀಡಿದರು.
ಅಭ್ಯಾಗತರಾಗಿದ್ದ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ 370ನೇ ವಿಧಿಯ ರದ್ದತಿ, ಪೌರತ್ವ ತಿದ್ದುಪಡಿ ಕಾಯ್ದೆ ಮುಂತಾದ ರಾಷ್ಟ್ರೀಯ ಹಿತಾಸಕ್ತಿಯ ಪ್ರಮುಖ ವಿಷಯಗಳು ಬಿಜೆಪಿ ಸಂಸ್ಥಾಪನೆ ಸಮಯದ ಕನಸಾಗಿತ್ತು. ಪಕ್ಷ ಕಾರ್ಯಕರ್ತರನ್ನು ಸುಶಿಕ್ಷಿತಗೊಳಿಸುವ ಪ್ರಶಿಕ್ಷಣ ಪದ್ಧತಿಯಿಂದ ಸಂಘಟಿತಗೊಂಡು ಅಧಿಕಾರಕ್ಕೇರುವಲ್ಲಿ ಸಫಲವಾಗಿ ಇಂದು ಯಶಸ್ವಿಯಾಗಿ ಸಾಕಾರಗೊಳಿಸಿದೆ ಎಂದರು.
ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ ಶೆಟ್ಟಿ, ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ ರಘುವೀರ ಶೆಣೈ, ಸಹ ಸಂಚಾಲಕ ಟಿ. ಸುಬ್ರಹ್ಮಣ್ಯ ಪೈ, ನಗರ ಸಂಚಾಲಕ ಲೋಕಯ್ಯ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ ಕೊಳ ಇದ್ದರು.
ನಗರ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ ಮಣಿಪಾಲ ನಿರೂಪಿಸಿ, ದಿನೇಶ್ ಅಮೀನ್ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!