Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಎರಡನೇ ಹಂತದ ಗ್ರಾ.ಪಂ. ಚುನಾವಣೆ: 2,708 ಅಭ್ಯರ್ಥಿಗಳು ಕಣದಲ್ಲಿ

ಎರಡನೇ ಹಂತದ ಗ್ರಾ.ಪಂ. ಚುನಾವಣೆ: 2,708 ಅಭ್ಯರ್ಥಿಗಳು ಕಣದಲ್ಲಿ

ಉಡುಪಿ: ಕಳೆದ ಡಿ. 22ರಂದು ಮೊದಲ ಹಂತದ ಗ್ರಾಮ ಪಂಚಾಯತ್ ಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ನಾಳೆ (ಡಿ. 27) ಎರಡನೇ ಹಂತದ ಚುನಾವಣೆ ನಡೆಯಲಿದೆ. ಮತದಾನಕ್ಕೆ ಸರ್ವಸಿದ್ಧತೆ ಪೂರ್ಣಗೊಂಡಿದ್ದು, ಕ್ಷಣಗಣನೆ ಆರಂಭವಾಗಿದೆ.

ಎರಡನೇ ಹಂತದಲ್ಲಿ ಕುಂದಾಪುರ, ಕಾರ್ಕಳ ಹಾಗೂ ಕಾಪು ತಾಲೂಕುಗಳ 86 ಗ್ರಾ. ಪಂ.ಗಳ 1,178 ಸ್ಥಾನಗಳಿಗೆ ಮತದಾನ ನಡೆಯಲಿದೆ. 544 ಮತಗಟ್ಟೆ ಸ್ಥಾಪಿಸಲಾಗಿದ್ದು, 4,15,243 ಮತದಾರರು ಹಕ್ಕು ಚಲಾಯಿಸಲು ಅರ್ಹತೆ ಹೊಂದಿದ್ದಾರೆ.

ಭಾನುವಾರ ಬೆಳಿಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದ್ದು, ಸಂಜೆ 4ರಿಂದ 5ರ ವರೆಗೆ ಕೊರೊನಾ ಸೋಂಕಿತರಿಗೆ ಮತದಾನಕ್ಕೆ ಅನುಮತಿ ಕಲ್ಪಿಸಲಾಗಿದೆ.

ಮೂರೂ ತಾಲೂಕುಗಳ ಒಟ್ಟು 445 ಕ್ಷೇತ್ರಗಳ 1,243 ಸ್ಥಾನಗಳ ಪೈಕಿ ಈಗಾಗಲೇ 65 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 1,178 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 2,708 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕುಂದಾಪುರದಲ್ಲಿ 210 ಮತಗಟ್ಟೆ
ಕುಂದಾಪುರ ತಾಲೂಕಿನ 43 ಗ್ರಾ. ಪಂ.ಗಳ 200 ಕ್ಷೇತ್ರಗಳ 530 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 1,262 ಅಭ್ಯಥರ್ಿಗಳು ಕಣದಲ್ಲಿದ್ದಾರೆ. 210 ಮತಗಟ್ಟೆ ಸ್ಥಾಪಿಸಲಾಗಿದೆ. 90,339 ಪುರುಷರು ಮತ್ತು 96,343 ಮಹಿಳೆಯರು ಹಾಗೂ ಇತರ 3 ಮಂದಿ ಸೇರಿದಂತೆ 1,86,685 ಮತದಾರರಿದ್ದಾರೆ. ಈಗಾಗಲೇ ತಾಲೂಕಿನಲ್ಲಿ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಾರ್ಕಳದಲ್ಲಿ 193 ಮತಗಟ್ಟೆ
ಕಾರ್ಕಳ ತಾಲೂಕಿನ 27 ಗ್ರಾ. ಪಂ.ಗಳ 139 ಕ್ಷೇತ್ರಗಳ 399 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 31 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 796 ಮಂದಿ ಕಣದಲ್ಲಿದ್ದು, 193 ಮತಗಟ್ಟೆ ಸ್ಥಾಪಿಸಲಾಗಿದೆ. ತಾಲೂಕಿನಲ್ಲಿ 63,372 ಪುರುಷರು ಮತ್ತು 63,419 ಮಹಿಳೆಯರು ಸೇರಿದಂತೆ ಒಟ್ಟು 1,32,791 ಮತದಾರರಿದ್ದಾರೆ.

ಕಾಪುನಲ್ಲಿ 141 ಮತಗಟ್ಟೆ
ಕಾಪು ತಾಲೂಕಿನ 16 ಗ್ರಾ. ಪಂ.ಗಳ 99 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಈಗಾಗಲೇ 10 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು 280 ಸ್ಥಾನಗಳಿಗೆ ಆಯ್ಕೆ ನಡೆಯಬೇಕಿದೆ. 650 ಮಂದಿ ಕಣದಲ್ಲಿದ್ದು, 141 ಮತಗಟ್ಟೆ ಸ್ಥಾಪಿಸಲಾಗಿದೆ. 50,302 ಪುರುಷರು ಮತ್ತು 45,463 ಮಹಿಳೆಯರು ಹಾಗೂ ಇಬ್ಬರು ಇತರರು ಸೇರಿ 95,767 ಮತದಾರರು ಇದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!