Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಕಡ್ಡಾಯ ಫಾಸ್ಟ್ ಟ್ಯಾಗ್ ಗೆ ವಿರೋಧ

ಕಡ್ಡಾಯ ಫಾಸ್ಟ್ ಟ್ಯಾಗ್ ಗೆ ವಿರೋಧ

ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳದೇ ಜಿಲ್ಲೆಯಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯ ಮಾಡಬಾರದು ಎಂದು ಶಾಸಕ ರಘುಪತಿ ಭಟ್ ಕೇಂದ್ರ ಸರಕಾರದ ಆದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಸದರು, ಶಾಸಕರು, ಜನಪ್ರತಿನಿಧಿಗಳು ಇದ್ದಾರೆ. ಆದರೆ, ಯಾರ ಅಭಿಪ್ರಾಯವನ್ನೂ ಪಡೆಯದೆ ಜಿಲ್ಲಾಧಿಕಾರಿ ಜ. 1ರಿಂದ ಕಡ್ಡಾಯ ಫಾಸ್ಟ್ ಟ್ಯಾಗ್ ಗೆ ಆದೇಶ ಹೊರಡಿಸಿದ್ದಾರೆ.

ಪಡುಬಿದ್ರಿ, ಕುಂದಾಪುರದ ಶಾಸ್ತ್ರಿ ಸರ್ಕಲ್ ಕಾಮಗಾರಿ ಇನ್ನೂ ಹಾಗೇ ಇದೆ. ಈ ಹಿಂದೆ ಪ್ರತಿಭಟನೆ, ಸಂಧಾನದ ಬಳಿಕ ಟೋಲ್ ಗೇಟಿನ 5 ಕಿ. ಮೀ. ವ್ಯಾಪ್ತಿಯ ಸ್ಥಳೀಯರಿಗೆ ಟೋಲ್ ವಿನಾಯಿತಿ ಸಿಕ್ಕಿತ್ತು. ಜ. 1ರಿಂದ ಟೋಲ್ ಸಂಗ್ರಹಕ್ಕೆ ತನ್ನ ಆಕ್ಷೇಪವಿದೆ. ಜಿಲ್ಲಾಧಿಕಾರಿ ಯಾವ ದೃಷ್ಟಿಕೋನದಿಂದ ಈ ಕಡ್ಡಾಯ ಆದೇಶ ಹೊರಡಿಸಿದರೋ ಗೊತ್ತಿಲ್ಲ ಎಂದರು.

ಟೋಲ್ ಸಂಗ್ರಹ ಮಾಡುವಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಕೊಡಬೇಕು. ಸಂಪೂರ್ಣ ರಸ್ತೆ ಕಾಮಗಾರಿ ಆಗುವ ವರೆಗೆ ಟೋಲ್ ಸಂಗ್ರಹವನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದು ಶಾಸಕ ಭಟ್ ಆಗ್ರಹಿಸಿದರು.

ಜ. 9ರಂದು ನಡೆಯುವ ದಿಶಾ ಸಭೆಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಜೊತೆ ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದೂ ಭಟ್ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!