ವಾಷಿಂಗ್ಟನ್: ಪ್ರಬಲ ಸೌರ ಚಂಡಮಾರುತವೊಂದು ಭೂಮಿಯತ್ತ ಹೊರಟಿದ್ದು, ಸುಮಾರು 1.6 ದಶಲಕ್ಷ ಕಿ.ಮೀ. ವೇಗದಲ್ಲಿ ಭೂಮಿಯ ಆಯಸ್ಕಾಂತೀಯ ಕಕ್ಷೆಯತ್ತ ಸಮೀಪಿಸಲಿದೆ ಎಂದು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.
ಇದೇ ರೀತಿ ಆದಲ್ಲಿ ಮೊಬೈಲ್ ನೆಟ್ವರ್ಕ್ ಮತ್ತು ಜಿಪಿಎಸ್ ವ್ಯವಸ್ಥೆ ಕೆಲಕಾಲ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸೌರ ಚಂಡಮಾರುತದ ಪ್ರಭಾವದಿಂದ ಜಿಜಿಎಸ್ ನೇವಿಗೇಶನ್, ಮೊಬೈಲ್ ಫೋನ್ ಸಿಗ್ನಲ್ಸ್, ಸ್ಯಾಟ್ ಲೈಟ್ ಟಿವಿಗಳಿಗೆ ತೊಂದರೆಯಾಗಬಹುದು.
ಈ ಸೌರ ಜ್ವಾಲೆಗಳ ಕಾರಣದಿಂದ ವಿದ್ಯುತ್ ವ್ಯವಸ್ಥೆಯಲ್ಲೂ ವ್ಯತ್ಯಯಗಳಾಗಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ