Saturday, July 2, 2022
Home ಲೋಕಾಭಿರಾಮ ದೋಣಿಯಲ್ಲಿ ಪರೀಕ್ಷಾರ್ಥಿಗಳನ್ನು ಕರೆತಂದರು!

ದೋಣಿಯಲ್ಲಿ ಪರೀಕ್ಷಾರ್ಥಿಗಳನ್ನು ಕರೆತಂದರು!

ಉಡುಪಿ: ಮಳೆಯಿಂದಾಗಿ ತುಂಬಿ ಹರಿಯುತ್ತಿರುವ ನದಿ ದಾಟದಾಟಲಾಗದೇ ಪರಿತಪಿಸುತ್ತಿದ್ದ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆಯುವ ಈರ್ವರು ವಿದ್ಯಾರ್ಥಿನಿಯರನ್ನು ಸ್ವತಃ ಡಿಡಿಪಿಐ ಕಾಳಜಿ ವಹಿಸಿ ಕರೆತಂದ ಘಟನೆ ಬೈಂದೂರಿನಲ್ಲಿ ಗುರುವಾರ ನಡೆದಿದೆ.

ಮರವಂತೆ ಸಮೀಪದ ಕುರು ದ್ವೀಪದ ನಿವಾಸಿಗಳಾದ ಮರವಂತೆ ಸರಕಾರಿ ಪ್ರೌಢಶಾಲೆಯ ಶಿಲ್ಪಾ ಹಾಗೂ ಸಂಜನಾ ಪರೀಕ್ಷೆಗೆ ಹಾಜರಾಗುವ ಬಗ್ಗೆ ಆತಂಕವನ್ನು ಪರೀಕ್ಷೆ ನೋಡಲ್ ಅಧಿಕಾರಿ ಕರುಣಾಕರ ಶೆಟ್ಟಿ ಗಮನಕ್ಕೆ ತಂದಾಗ ಅವರನ್ನು ಕರೆತರಲು ವ್ಯವಸ್ಥೆ ಮಾಡಲಾಯಿತು.

ಖುದ್ದು ಡಿಡಿಪಿಐ ಎಚ್.ಎನ್. ನಾಗೂರ ಹಾಗೂ ಬೈಂದೂರು ತಹಸೀಲ್ದಾರ್ ಶೋಭಾಲಕ್ಷ್ಮೀ ಸ್ವತಃ ದೋಣಿ ಹತ್ತಿಕೊಂಡು ಮಕ್ಕಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದರು.

ಶಿಕ್ಷಣ ಇಲಾಖೆಯ ಈ ಕಾಳಜಿಗೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಶೇ. 100 ಹಾಜರಾತಿ
ಇಂದು ನಡೆದ ಕೊನೇ ದಿನದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಎಲ್ಲ ವಿದ್ಯಾರ್ಥಿಗಳೂ ಪರೀಕ್ಷೆಗೆ ಹಾಜರಾಗಿದ್ದು, ಶೇ. 100 ಹಾಜರಾತಿ ದಾಖಲಾಗಿದೆ. ಜಿಲ್ಲೆಯ 77 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು ಎಂದು ಡಿಡಿಪಿಐ ಎನ್. ಎಚ್. ನಾಗೂರ ತಿಳಿಸಿದ್ದಾರೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!