ತುಮಕೂರು: ಇಲ್ಲಿನ ನಾಗಶ್ರೀ ಪ್ರತಿಷ್ಠಾನ ನೀಡುವ 2021ನೇ ಸಾಲಿನ ನಾಗಶ್ರೀ ಕಾವ್ಯ ಪ್ರಶಸ್ತಿಗೆ ಉಡುಪಿ ಸಾಹಿತಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಅವರ ಅವನು ಹೆಣ್ಣಾಗಬೇಕು ಎಂಬ ಕವನ ಸಂಕಲನ ಆಯ್ಕೆಯಾಗಿದೆ.
ಪ್ರಶಸ್ತಿ 5 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ ಎಂದು ಪ್ರಶಸ್ತಿ ಸಮಿತಿ ಸಂಚಾಲಕಿ ತೇಜಾವತಿ ಎಚ್. ಡಿ. ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭ ತುಮಕೂರು ಕಸಾಪ ಸಹಯೋಗದೊಂದಿಗೆ ನಡೆಯಲಿದೆ ಎಂದವರು ಮಾಹಿತಿ ನೀಡಿದ್ದಾರೆ.
ಡಾ| ಕಾತ್ಯಾಯಿನಿ ಪ್ರಸ್ತುತ ಉಡುಪಿ ಎಂಜಿಎಂ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.