ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಆಚರಣೆ
ನಿಜ ಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಆಚರಣೆ
ಮುದ್ದೇಬಿಹಾಳ: ತಾಲೂಕಿನ ರೂಡಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಅಂಬಿಗರ ಚೌಡಯ್ಯ ನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದುರ ಮುಖಾಂತರ 904ನೇ ಜಯಂತೋತ್ಸವ ಆಚರಣೆ ಮಾಡಿದರು.ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸಂಗಮೇಶ ಹಾರಿವಾಳ ಮಾತನಾಡಿ ನಿಜ ಶರಣ ಅಂಬಿಗರ ಚೌಡಯ್ಯ ನವರು ವೃತ್ತಿಯಿಂದ ಅಂಬಿಗ,ಪ್ರವೃತ್ತಿಯಲ್ಲಿ ಅನುಭಾವಿ, ಅಷ್ಟೇ ಅಲ್ಲದೆ ನೇರ ನಿರ್ಭಿತ ನುಡಿಗಳಿಂದ ವಚನಗಳನ್ನು ಬರೆದಿದ್ದಾರೆ ಎಂದು ಹೇಳಿದರು.ಇದೇ ವೇಳೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಿ ಎಚ್ ನಾಯಕರ, ಎಸ್ ಪಿ ಮುತ್ತಗಿ, ಅನಿಲ ಚವ್ಹಾಣ, ಸಾಬಣ್ಣ ಮಾದರ, ಎಮ್ ವಾಯ್ ಕಳ್ಳಿಮನಿ, ಪಿ ಪಿ ಕೋಟಿ, ಹಾಗೂ ನಿಂಗು ಕೋಲಕಾರ, ಆನಂದ ರಾಠೋಡ ಇದ್ದರು.