ಶ್ರೀಕ್ಷೇತ್ರದಿಂದ 10 ಜೊತೆ ಬೆಂಚು ಡೆಸ್ಕ್ ವಿತರಣೆ

ಶ್ರೀಕ್ಷೇತ್ರದಿಂದ 10 ಜೊತೆ ಬೆಂಚು ಡೆಸ್ಕ್ ವಿತರಣೆ

Feb 8, 2024 - 11:49
 0  1
ಶ್ರೀಕ್ಷೇತ್ರದಿಂದ 10 ಜೊತೆ ಬೆಂಚು ಡೆಸ್ಕ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ) ಮಂಡ್ಯ ಜಿಲ್ಲೆಯ ಭಾರತಿನಗರ ತಾಲೋಕಿನ ಹುಸ್ಕೂರು ವಲಯದ ಮಾರಗೌಡನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಜ್ಞಾನದೀಪ ಕಾರ್ಯಕ್ರಮ ದಡಿಯಲ್ಲಿ ಮಂಜೂರು ಗೊಂಡ 10 ಜೊತೆ ಬೆಂಚು ಡೆಸ್ಕ್ ವಿತರಣಾ ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಯಿತು. ಶಾಲೆಯ ವತಿಯಿಂದ ಪೂಜ್ಯರಿಗೆ ಎಲ್ಲರೂ ಗೌರವದ ಅಭಿನಂದನೆಗಳನ್ನು ಸಲ್ಲಿಸಿ  ಕೊಡುಗೆಗೆ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಯರಾದ ಶ್ರೀ ಶಿವ ಮಲ್ಲಯ್ಯ ಸಹ ಶಿಕ್ಷಕರಾದ ಸುರೇಶ್ ಶಾಲೆಯ ಶಿಕ್ಷಕ ವೃಂದ ಅಧ್ಯಕ್ಷರಾದ ಚಿಕ್ಕ ಸ್ವಾಮಿ ಸದಸ್ಯರಾದ ಶ್ರೀ ಶಿವಣ್ಣ ಶ್ರೀ ರಾಜೇಗೌಡ ಶ್ರೀ ಉಮೇಶ್ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸ್ವಾಮಿ ಗೌಡ, ವಲಯದ ಮೇಲ್ವಿಚಾರಕರಾದ ಶ್ರೀ ಗುಣಕರ, ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು. ಸೇವಾಪ್ರತಿನಿಧಿಗಳಾದ ಶ್ರೀಮತಿ ನಂದಾದೇವಿ ಶ್ರೀಮತಿ ಮಹಾಲಕ್ಷ್ಮಿ ಶಾಲೆಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow