ಎಸ್ ಡಿಎಂಸಿ ಅಧ್ಯಕ್ಷರಾಗಿ ಸಿದ್ದು ಹಾವಳಗಿ ಉಪಾಧ್ಯಕ್ಷರಾಗಿ ಶ್ರೀಮತಿ.ವೀಣಾ ರಾಂಪೂರಮಠ ಆಯ್ಕೆ

ಎಸ್ ಡಿಎಂಸಿ ಅಧ್ಯಕ್ಷರಾಗಿ ಸಿದ್ದು ಹಾವಳಗಿ ಉಪಾಧ್ಯಕ್ಷರಾಗಿ ಶ್ರೀಮತಿ.ವೀಣಾ ರಾಂಪೂರಮಠ ಆಯ್ಕೆ

ಎಸ್ ಡಿಎಂಸಿ ಅಧ್ಯಕ್ಷರಾಗಿ ಸಿದ್ದು ಹಾವಳಗಿ ಉಪಾಧ್ಯಕ್ಷರಾಗಿ ಶ್ರೀಮತಿ.ವೀಣಾ ರಾಂಪೂರಮಠ ಆಯ್ಕೆ

ಆಲಮೇಲ: ಪಟ್ಟಣದ ಸರಕಾರಿ ಹೆಣ್ಣು ಮಕ್ಕಳ ಪ್ರೌಢಶಾಲೆ (ಆರ್ ಎಂಎಸ್ ಎ) ಆಲಮೇಲ ಶಾಲೆಯಲ್ಲಿ ಶಿಕ್ಷಣ ಇಲಾಖಾ ನಿಯಮ ಮತ್ತು ಮಾರ್ಗಸೂಚಿ ಅನ್ವಯ ಮೊದಲ ಬಾರಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು (ಎಸ್ ಡಿಎಂಸಿ) ಅವಿರೋಧವಾಗಿ ರಚಿಸಲಾಯಿತು. ಈ ಸಮಿತಿ ರಚನೆಯ ಯಶಸ್ವಿಗೆ ಕಾರಣೀಭೂತರಾದ ಎಲ್ಲಾ ಆತ್ಮೀಯ ಪಾಲಕ ಬಂಧುಗಳು ಮತ್ತು ಪಟ್ಟಣ ಪಂಚಾಯತಿ ಗೌರವಾನ್ವಿತ ಸದಸ್ಯರು ಮತ್ತು ಇಸಿಓ ಎಮ್.ಪಿ.ಬಿಸೆ. ಆಲಮೇಲ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರಾದ  ಕುಮಾರ, ಹಾಡಕರ ಮತ್ತು ಸಿಬ್ಬಂದಿ ವರ್ಗ. ಶಾಲಾ ಸಿಬ್ಬಂದಿ ವರ್ಗ,ಆರೋಗ್ಯ ಇಲಾಖೆ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದರು. ಆಯ್ಕೆಯಾದ ಸದಸ್ಯರಲ್ಲಿ ಸೂಚಕರು, ಅನುಮೋದಕರ ಸೂಚನೆಯಂತೆ, ಅಧ್ಯಕ್ಷರಾಗಿ  ಸಿದ್ದು. ಹಾವಳಗಿ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ. ವೀಣಾ.ರಾಂಪೂರಮಠ ರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರನ್ನು ಗೌರವಾನ್ವಿತ ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯರಾದ ಬಿ,ಆರ್,ಯಂಟಮಾನ ರವರು. ಪತ್ರಿಕೆಯ ವರದಿಗಾರರಾದ ಸೈಯದ, ದೇವರಮನಿ, ಮಲಕಣ್ಣ ಕೊಳಾರಿ ಮತ್ತು ಶಿಕ್ಷಕ ಎಂ.ಎಸ್.ಚೌಧರಿ ಸರ್ ರವರು ಇದ್ದರು. ಮುಖ್ಯಗುರು ರವಿ ಹೊಸಮನಿ ಹಾಗೂ ಸರ್ವ ಸಿಬ್ಬಂದಿ ವರ್ಗ ಅಭಿನಂದಿಸಿದರು.