ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯನ್ನು ಕಚ್ಚಿ ಸಾಯಿಸಿದ ಚಿರತೆ

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯನ್ನು ಕಚ್ಚಿ ಸಾಯಿಸಿದ ಚಿರತೆ

ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯನ್ನು ಕಚ್ಚಿ ಸಾಯಿಸಿದ ಚಿರತೆ

ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿ ಹಾಕಿದ್ದ ಮೇಕೆಯನ್ನು ಕಚ್ಚಿ ಸಾಯಿಸಿರುವ ಘಟನೆ ಹಲಗೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದಲ್ಲಿ ಮಂಗಳವಾರ ರಾತ್ರಿ 8:30 ಗಂಟೆಗೆ ನಡೆದಿದೆ. ಗೊಲ್ಲರಹಳ್ಳಿ ಗ್ರಾಮದ ಸುನೀತಾ ಹೈನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅವರು ಎಂದಿನಂತೆ ತಮ್ಮ ಕೊಟ್ಟಿಗೆಯಲ್ಲಿ ಮೇಕೆ ಕಟ್ಟಿ ಹಾಕಿದ್ದರು. ತಡರಾತ್ರಿ ಆಗಮಿಸಿದ ಚಿರತೆಯು ಮನೆಯ ಅವರಣದಲ್ಲಿ ಕಟ್ಟಿದ್ದ ಮೇಕೆಯ ಮೇಲೆ ದಾಳಿ ಮಾಡಿ ಸಾಯಿಸಿದೆ. ಗಸ್ತು ಅರಣ್ಯ ಪಾಲಕ ಎಂ.ಜೆ.ಉಮೇಶ್, ಪಶುಪಾಲನೆ ಇಲಾಖೆ ಮುಖ್ಯ ಪಶು ವೈದ್ಯಾಧಿಕಾರಿ ಡಾ.ನವೀನ್ ಸ್ಥಳಕ್ಕೆ ಆಗಮಿಸಿ ಮೇಕೆಯ ಮರಣೋತ್ತರ ಪರೀಕ್ಷೆ ನಡೆಸಿದರು. ಹಲವಾರು ದಿನಗಳಿಂದ ನಮ್ಮ ಸುತ್ತಮುತ್ತಲಿನ ಗ್ರಾಮಗಳಲ್ಲಿ ಚಿರತೆಯ ಹಾವಳಿಯಿಂದ ಕುರಿ, ಮೇಕೆಗಳು ಸಾವೀಗೀಡಾಗಿವೆ. ಚಿರತೆ ದಾಳಿಯಿಂದಾಗಿ ನನ್ನ ಕುಟುಂಬದ ಜೀವನ ನಿರ್ವಹಣೆಗಾಗಿ ಸಾಕಿದ್ದ ಮೇಕೆಯು ಇಲ್ಲವಾಗಿದೆ. ಸಮಾರು ₹15 ಸಾವಿರ ನಷ್ಟ ಉಂಟಾಗಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸೂಕ್ತ ಪರಿಹಾರ ನೀಡಬೇಕೆಂದು ರೈತ ಮಹಿಳೆ ಸುನೀತಾ ಆಗ್ರಹಿಸಿದರು.