ಕೆಜಿಎಫ್ ಕಚೇರಿಯಲ್ಲಿ ಕೆಂಪೇಗೌಡ ಜಯಂತಿ

ಕೆಜಿಎಫ್ ಕಚೇರಿಯಲ್ಲಿ ಕೆಂಪೇಗೌಡ ಜಯಂತಿ

      ತಾಲೂಕು ಆಡಳಿತ ಹಾಗೂ ಸಮುದಾಯದ ಸಂಯುಕ್ತಾಶ್ರಯದಲ್ಲಿ ತಾಲೂಕು ಕಚೇರಿ ಸಭಾಂಗಣದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡರ 517ನೇ ಜಯಂತಿಯನ್ನು ಆಚರಿಸಲಾಯಿತು.
ಪ್ರಮುಖಾಂಶಗಳು:
ಅಧ್ಯಕ್ಷತೆ ಮತ್ತು ಶ್ಲಾಘನೆ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕಿ ರೂಪಕಲಾ ಎಂ.ಶಶಿಧರ್ ಅವರು ಮಾತನಾಡಿ, "ಕೆಂಪೇಗೌಡರ ಆಡಳಿತ ವೈಖರಿ ಎಲ್ಲರಿಗೂ ಆದರ್ಶನೀಯ. ಭವಿಷ್ಯದಲ್ಲಿ ನಗರಕ್ಕೆ ನೀರಿನ ಕೊರತೆಯಾಗದಂತೆ ಕೆರೆ-ಕಟ್ಟೆಗಳನ್ನು ನಿರ್ಮಿಸಿದ ಅವರ ದೂರದೃಷ್ಟಿ ಅದ್ಭುತವಾದದ್ದು. ಬೆಂಗಳೂರು ಇಂದು ಜಾಗತಿಕ ವಾಣಿಜ್ಯ ಕೇಂದ್ರವಾಗಿ ಬೆಳೆಯಲು ಅವರ ಭದ್ರ ಬುನಾದಿಯೇ ಕಾರಣ" ಎಂದು ಶ್ಲಾಘಿಸಿದರು.

ನಾವು ಸಹ ಕೆಂಪೇಗೌಡರ ಮಾರ್ಗದರ್ಶನವನ್ನು ಮೈಗೂಡಿಸಿಕೊಂಡು ನಮ್ಮ ತಾಲೂಕನ್ನು ಮುಂದಿನ ದೂರ ದೃಷ್ಟಿ ಇಟ್ಟುಕೊಂಡು ನನ್ನ ಕೈಲಾಗುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನಮ್ಮ ಕೆಜಿಎಫ್ ನಗರ ಬೆಂಗಳೂರಿನ ಅಷ್ಟೇ ಪ್ರಮುಖವಾದ ಕೇಂದ್ರ ಬಿಂದುವಾಗುತ್ತದೆ ಎಂದು ತಿಳಿಸಿದರು.

ಕೆಜಿಎಫ್ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರು. ಎಸ್ .ಎನ್. ರಾಜಗೋಪಾಲಗೌಡ ಮಾತನಾಡಿ. ನಾಡ ಪ್ರಭು ಕೆಂಪೇಗೌಡರ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ. ಅವರು ಒಂದು ಸಮುದಾಯದ ನಾಯಕರು ಅಲ್ಲ. ಎಲ್ಲಾ ಸಮುದಾಯಗಳಿಗೆ ಪೇಟೆಗಳನ್ನು ನಿರ್ಮಿಸಿ ಅವರ ಆರ್ಥಿಕ ಬದುಕನ್ನು ಕಟ್ಟಿಕೊಳ್ಳಲು ಬುನಾದಿ ಹಾಕಿದ ಮಹಾ ನಾಯಕ ಅವರ ಮಾರ್ಗದರ್ಶನವನ್ನು ನಾವೆಲ್ಲರೂ ಬೆಳೆಸಿಕೊಂಡು ಮುನ್ನಡೆದರೆ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ತಿಳಿಸಿದರು.


ಸನ್ಮಾನ: ಇದೇ ಸಂದರ್ಭದಲ್ಲಿ ಸಮುದಾಯದ ಪ್ರಗತಿಪರ ರೈತರನ್ನು, ಆದಾಯಕ್ಕೆ ದುಡಿದ ಯುವ ಮುಖಂಡರನ್ನು ಗಣ್ಯರಿಂದ ಸನ್ಮಾನಿಸಿ ಗೌರವಿಸಲಾಯಿತು.

ಇದೆ ಸಂದರ್ಭದಲ್ಲಿ ಕೆಂಪೇಗೌಡರ ಪುಷ್ಪ ಪಲ್ಲಕ್ಕಿ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ನಡೆಯಿತು. ಗಾಂಧಿ ವೃತದಲ್ಲಿ ಒಕ್ಕಲಿಗ ಸಮುದಾಯ ಮುಖಂಡರಿಂದ ಕೆಂಪೇಗೌಡರ ಪ್ರತಿಭೆಯನ್ನು ಇಟ್ಟು ಪೂಜೆ ಸಲ್ಲಿಸಿ ಸಿಹಿ ಹಂಚಿದರು 

ಉಪಸ್ಥಿತರಿದ್ದ ಗಣ್ಯರು:
ಕಾರ್ಯಕ್ರಮದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಗೋಪಾಲ್ ಗೌಡ, ತಹಶೀಲ್ದಾರ್ ಭರತ್, ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ರಾಜೇಶ್, BEO.ಬಿ.ಜಿ. ನಾರಾಯಣಸ್ವಾಮಿ E.O • ವೆಂಕಟೇಶಪ್ಪ,, ಸರ್ಕಾರಿ ನೌಕರ ಸಂಘದ ಅಧ್ಯಕ್ಷರು. ಎಲ್.ಎನ್. ನರಸಿಂಹಮೂರ್ತಿ,  ಕೃಷ್ಣಮೂರ್ತಿ,ವೆಂಕಟರಾಮಯ್ಯ ವಕೀಲರು,, ಪ್ರದೀಪ್ ವಿಜಯಶಂಕರ್. ನಾರಾಯಣಪ್ಪ, ಸೀನಪ್ಪ, ಪ್ರದೀಪ್ ರೆಡ್ಡಿಹಳ್ಳಿ, ಸುರೇಶ್,ಕಂಬಾರ್ಸನಹಳ್ಳಿ ವೇಣುಗೋಪಾಲ್, ಮಂಜುನಾಥ್. ಫ್ರೂಟ್ಸ್. , ತಾರಾನಾಥ್.  ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.