ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೆ 3 ವರ್ಷದ ಕಂಪ್ಲಿ ತನವ್ ನ ದಾಖಲೆಯ 600ಮೀ ಓಟ
ಬೆಂಗಳೂರು:ಆ14, ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ಮೋಹನ್ ಕುಮಾರ್ ದಾನಪ್ಪ, ಶ್ರೀಮತಿ ಸೌಮ್ಯಶ್ರೀ ಮೋಹನ್ ಕುಮಾರ್ ದಂಪತಿಯ ಪುತ್ರ ತನವ್ ಮೋಹನ್ ಕುಮಾರ್ ನು ತನ್ನ 3 ವರ್ಷ 10 ತಿಂಗಳ ವಯಸ್ಸಿನಲ್ಲಿ 600 ಮೀಟರ್ ಓಟವನ್ನು 5 ನಿಮಿಷ 44 ಸೆಕೆಂಡ್ ನಲ್ಲಿ ಪೂರ್ಣಗೊಳಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾನೆ,
ಪ್ರಸ್ತುತ ಬೆಂಗಳೂರಿನ ನ್ಯಾಯಾಂಗ ಬಡಾವಣೆಯ ಜ್ಞಾನ ದೀಪಿಕಾ ಭಾರ್ಗವಿ ಎಜುಕೇಶನ್ ಟ್ರಸ್ಟ್ ಶಾಲೆಯಲ್ಲಿ ಪ್ರಿ ಕೆಜಿ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತನವ್ ಮೋಹನ್ ಕುಮಾರ್, ಜೂಲೈ 5 ರಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಓಟ ನಡೆಸಿರುವುದನ್ನು ಪರಿಗಣಿಸಿ ಐಬಿಆರ್ ಸಂಸ್ಥೆಯ ಮಂಡಳಿಯು ಜುಲೈ 31 ರಂದು ಪರಿಶೀಲಿಸಿ ಧೃಢೀಕರಿಸಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಅಧಿಕೃತ ದಾಖಲೆಯಾಗಿ ಸೇರಿಸಿ ಪ್ರಮಾಣ ಪತ್ರ, ಪದಕ, ದಾಖಲೆ ಪುಸ್ತಕವನ್ನು ನೀಡಿ ಐಬಿಆರ್ ಸಂಸ್ಥೆಯು ಅಭಿನಂದಿಸಿರುತ್ತದೆ!
ಈ ಚಿಕ್ಕ ವಯಸ್ಸಿನಲ್ಲಿ ತನವ್ ಮೋಹನ್ ಕುಮಾರ್ ನು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದನ್ನು ಕಂಡು ತಂದೆ ಮೋಹನ್ ಕುಮಾರ್ ದಾನಪ್ಪ, ತಾಯಿ ಸೌಮ್ಯಶ್ರೀ ಮೋಹನ್ ಕುಮಾರ್, ಅಜ್ಜ ರಾಜ್ಯ ದಿಶಾ ಸಮಿತಿ ಸದಸ್ಯ ಎ.ಸಿ.ದಾನಪ್ಪ, ಅಜ್ಜಿ ಕೃಷಿ ಪಂಡಿತೆ ಪ್ರಶಸ್ತಿ ಪುರಸ್ಕೃತೆ ಅಂಡಿ ಹುಲಿಗೆಮ್ಮ, ಸೇರಿದಂತೆ ಕುಟುಂಬ ವರ್ಗ, ಜೆಡಿಬಿಇ ಶಾಲೆಯ ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದ್ದಾರೆ