ಬ್ಲಾಸಂಸ್ ಕಲೋತ್ಸವದಲ್ಲಿ ಸೌಂದರ್ಯ ಗೀತಾ ಲೋಕಾರ್ಪಣೆಯಾಯಿತು

Feb 11, 2024 - 14:42
 0  1
ಬ್ಲಾಸಂಸ್ ಕಲೋತ್ಸವದಲ್ಲಿ ಸೌಂದರ್ಯ ಗೀತಾ ಲೋಕಾರ್ಪಣೆಯಾಯಿತು

ಬ್ಲಾಸಂಸ್ ಕಲೋತ್ಸವ 2024ರ ಸಾಂಸ್ಕೃತಿಕ ಸಂಜೆ 'ಬ್ರೈನ್ ಸೆಂಟರ್'(ಶಿಕ್ಷಣ ಸಂಶೋಧನಾ ಕೇಂದ್ರ) ಮತ್ತು ಬ್ಲಾಸಂಸ್ ಶಾಲೆ(ವಿನೂತನ  ವಿಭಿನ್ನ ಮಾದರಿ ಶಾಲೆ) ಬ್ಲಾಸಂಸ್ ಕಲೋತ್ಸವ 2024 ಎನ್ನುವ ಶೀರ್ಷಿಕೆಯೊಂದಿಗೆ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶನಿವಾರ ಬಾಗಲಗುಂಟೆ, ಎಂಇ ಐ ಕ್ರೀಡಾಂಗಣ ಬೆಂಗಳೂರು 73 ಇಲ್ಲಿ ಆಯೋಜಿಸಲಾಗಿತ್ತು.

ಶ್ರೀ ರಿಷಿಕೇಶ್ ಬಿ ಎಸ್ ಸಂಶೋಧಕರು ಕಾನೂನು ಮತ್ತು ನೀತಿ ಸಲಹೆಗಾರರು ಹಜೀಮ್ ಪ್ರೇಮ್ ಜೀ ವಿಶ್ವವಿದ್ಯಾನಿಲಯ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ  ಆಗಮಿಸಿದ್ದರು ಇವರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳನ್ನು ಗುರುತಿಸಿ ಬಿ. ಎಸ್ ರಿಷಿಕೇಶ್ ರವರಿಗೆ ಸೇವಾ ಪುರುಷೋತ್ತಮ ಎನ್ನುವ ವಿಶೇಷ ಬಿರುದುಗಳೊಂದಿಗೆ ಸನ್ಮಾನ ಪತ್ರ ಹಾಗೂ ಪ್ರಶಸ್ತಿ ಫಲಕಗಳನ್ನು ನೀಡಿ ಈ ಸಾಂಸ್ಕೃತಿಕ ಸಂಜೆಯ ಅದ್ದೂರಿ ವೇದಿಕೆಯಲ್ಲಿ ತುಂಬು ಹೃದಯದ ಅಭಿನಂದನೆಗಳೊಂದಿಗೆ  ಸನ್ಮಾನಿಸಲಾಯಿತು ಇದೇ ಸಮಾರಂಭದಲ್ಲಿ ಶ್ರೀ ಬಸವರಾಜ್ ಉಮ್ರಾಣಿ, ನಡೆದಾಡುವ ಕಂಪ್ಯೂಟರ್ ಎಂದೇ ಪ್ರಸಿದ್ಧಿಯಾಗಿರುವ ಇವರಿಗೆ ವೇದಿಕೆಯಲ್ಲಿ ಗಣಕ ರತ್ನ ಪ್ರಶಸ್ತಿ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಈ ಸಾಂಸ್ಕೃತಿಕ ಸಂಜೆಯಲ್ಲಿ ಸ್ಟಾರ್ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟಿ ಎಚ್ ಎಂ ಮೀನಾಕ್ಷಿ ಅವರು ಉಪಸ್ಥಿತರಿದ್ದು ಅವರಿಗೂ ಈ ಸುಂದರ ಸಂಜೆಯಲ್ಲಿ ಕಲಾ ರತ್ನ ಎಂಬ ವಿಶೇಷ ಬಿರುದನು ನೀಡಿ ಗೌರವಿಸಲಾಯಿತು.ಕಿರುತೆರೆ ಹಾಗೂ ಹಿರಿತೆರೆ ಇತರೆ ಪೋಷಕ ನಟಿಯಾಗಿ ಅತ್ಯುತ್ತಮವಾಗಿ  ನಟಿಸುತ್ತಿರುವ ಹಾಗೂ ನಿರ್ಮಾಪಕರಾಗಿರುವ ಸುನಂದ ಕಲ್ಬುರ್ಗಿ ಇವರು ಸ್ಟಾರ್ ಅತಿಥಿಯಾಗಿ ಉಪಸ್ಥಿತರಿದ್ದು,

ಇದಲ್ಲದೆ ವಿಶೇಷ ಆಹ್ವಾನಿತರಾಗಿ ಶ್ರೀನರಸಿಂಹಾಚಾರ್ ಬಿಎಲ್ ಉಪಸ್ಥಿತರಿದ್ದು ಹಾಗೂ ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಸಂಘಟನೆ (ಕ್ಯಾಮ್ಸ್) ಎಲ್ಲಾ ಸದಸ್ಯರು ಅತಿಥಿಗಳಾಗಿ ಉಪಸ್ಥಿತರಿದ್ದು 

ಕಾರ್ಯಕ್ರಮದ ಸುಂದರ ನಿರೂಪಣೆ ಶ್ರೀ ಧನಂಜಯ ಕಿರುತೆರೆ ಹಾಗೂ ಚಲನಚಿತ್ರ ಕಲಾವಿದರು ಪ್ರತಿಭಾವಂತ ನಿರೂಪಕರು ಇವರಿಂದ ಅದ್ಭುತವಾಗಿ ಮೂಡಿ ಬಂದಿತು ಗೀತಾ ವಿ ಆರ್ ಶಿಕ್ಷಕಿ ಬ್ಲಾಸಂಸ್‌ಶಾಲೆ ಇವರ ಕವನ ಸಂಕಲನ ಸೌಂದರ್ಯ ಗೀತಾ ಸಂಕಲನವನ್ನು ಕರ್ನಾಟಕ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿಗಳು ಹಾಗೂ ಬ್ಲಾಸಂಸ್‌ಶಾಲೆ ಕಾರ್ಯದರ್ಶಿಗಳು ಆದಂತಹ ಡಿ.ಶಶಿಕುಮಾರ್ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಯಾಯಿತು ಎಲ್ಲಾ ಪಾಲಕ ಪೋಷಕರು ಸಾರ್ವಜನಿಕರು ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

What's Your Reaction?

like

dislike

love

funny

angry

sad

wow