ವನಸಿರಿ ಪೌಂಡೇಷನ್ ನಿಂದ ವೃಕ್ಷ ಬಂಧನ ಆಚರಣೆ
ಸಿಂಧನೂರು ತಾಲೂಕಿನ ಮಲ್ಕಾಪುರ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಪೌಂಡೇಷನ್ ವತಿಯಿಂದ ಗಿಡ ನೆಟ್ಟು ರಾಖಿ ಕಟ್ಟುವ ಮೂಲಕ ವೃಕ್ಷ ಬಂಧನ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳು ಗಿಡಗಳಿಗೆ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿ ಗಿಡಗಳನ್ನು ನಮ್ಮಅಣ್ಣತಮ್ಮಂದಿರಂತೆ ನೋಡಿಕೊಳ್ಳಬೇಕು ಎಂದು ರಾಖಿ ಕಟ್ಟುವ ಮೂಲಕ ಪರಿಸರ ಪ್ರೇಮ ಮೆರೆದರು.
ಈ ಸಂಧರ್ಭದಲ್ಲಿ ಮುಖ್ಯ ಗುರು ಸಂಗಮೇಶ ಮಾತನಾಡಿ ಪರಿಸರ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ. ಗಿಡಮರಗಳನ್ನು ಪಾಲನೆ ಪೋಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪುರ ಅವರ ಪರಿಸರ ಪ್ರೇಮ ಅಗಾಧವಾದದು.ಇಂದು ಗಿಡಗಳಿಗೆ ವಿಶೇಷ ಪೂಜೆ ಸಲ್ಲಿಸಿ ಅಲಂಕಾರ ಮಾಡಿ,ರಾಖಿ ಕಟ್ಟಿ ಗಿಡಗಳು ಕೂಡಾ ನಮ್ಮ ಅಣ್ಣತಮ್ಮಂದಿರಂತೆ ಇದ್ದ ಹಾಗೆ ಎಂದು ರಕ್ಷಾ ಬಂಧನ ಜೊತೆಗೆ ವೃಕ್ಷ ಬಂಧನವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ.ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಕಾರ್ಯಕ್ಕೆ ವನಸಿರಿ ಪೌಂಡೇಷನ್ ಜೊತೆಗೆ ಸದಾಕಾಲ ಕೈಜೋಡಿಸೋಣ ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ವನಸಿರಿ ಪೌಂಡೇಷನ್ ಅಧ್ಯಕ್ಷ ಅಮರೇಗೌಡ ಮಲ್ಲಾಪುರ,ಪಂಪಯ್ಯ ಸ್ವಾಮಿ ಪುನೀತಶ್ರಮ,ಶಿಕ್ಷಕರಾದ ವೆಂಕೋಬ ಮಲ್ಲಯ್ಯ,ನಾಗರಾಜ,ರಘು,ಶ್ರೀಮತಿ ಗೀತಾ ಶಿಕ್ಷಕಿ,ಶ್ರೀಮತಿ ರಾಜೇಶ್ವರಿ, ಸುನೀತಾ ಹಾಗೂ ವಿದ್ಯಾರ್ಥಿಗಳು ಇದ್ದರು.