ವೈದ್ಯರಿಗೆ ಸನ್ಮಾನಿಸಿದ ಸುರೇಶ್ ವಿಶ್ವಕರ್ಮ
ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ಇಂದು ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ಅಧ್ಯಕ್ಷರಾದ ಜಾಬಗೆರೆ ಸುರೇಶ್ ವಿಶ್ವಕರ್ಮ ಅವರು ಜಾಬಗೆರೆ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಗೆ ತೆರಳಿ ವೈದ್ಯಾಧಿಕಾರಿಗಳಿಗೆ ಸನ್ಮಾನಿಸಿದರು
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ವಿಶ್ವಕರ್ಮ ಅವರು ವೈದ್ಯರ ನಿಸ್ವಾರ್ಥ ಸೇವೆಯನ್ನು ಶ್ಲಾಘಿಸಿದರು ಆಸ್ಪತ್ರೆಯ ಅಭಿವೃದ್ಧಿಗೆ ಸಹಕರಿಸುವುದಾಗಿ ಸುರೇಶ್ ವಿಶ್ವಕರ್ಮ ತಿಳಿಸಿದರು