ಶ್ರೀರಾಮ ಭಕ್ತರ ವಿಶ್ವಾಸ ನಂಬಿಕೆಗೆ ದ್ರೋಹ, ವಂಚನೆ ಮಾಡಿದ ಬಿಜೆಪಿ ಸರ್ಕಾರ

ಶ್ರೀರಾಮ ಭಕ್ತರ ವಿಶ್ವಾಸ ನಂಬಿಕೆಗೆ ದ್ರೋಹ, ವಂಚನೆ ಮಾಡಿದ ಬಿಜೆಪಿ ಸರ್ಕಾರ

        ಬೆಂಗಳೂರು, ಕಾಂಗ್ರೆಸ್ ಭವನ: ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಭಕ್ತರು ನೀಡಿದ ದೇಣಿಗೆ ಮತ್ತು ಹುಂಡಿ ಹಣ ಲೂಟಿ ಮಾಡಿದ ಭಕ್ತರ ಭಾವನೆಗಳಿಗೆ ನಂಬಿಕೆ, ವಿಶ್ವಾಸಕ್ಕೆ ದ್ರೋಹ ಬಗೆದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಶ್ರೀರಾಮಮಂದಿರ ಟ್ರಸ್ಟ್ ಮಂಡಳಿ ಮತ್ತು ಸಿಬ್ಬಂದಿಗಳ ವಂಚನೆ ವಿರುದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ರವರು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ.

ಇದೇ ಸಂದರ್ಭದಲ್ಲಿ ಎಸ್.ಮನೋಹರ್ ರವರು ಮಾತನಾಡಿ ಅಯೋಧ್ಯೆ ಶ್ರೀರಾಮನಾ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಪಕ್ಷ ಇಂದು ಶ್ರೀರಾಮನ ಹೆಸರಿನಲ್ಲಿ ಕೊಟ್ಯಂತರ ರೂಪಾಯಿ ಭಕ್ತರ ನೀಡಿದ ಹಣವನ್ನು ಲೂಟಿ ಮಾಡುತ್ತಿದೆ.

ಕಳೆದ ಐದು ವರ್ಷಗಳಿಂದ ಶ್ರೀರಾಮ ಮಂದಿರದ ಹುಂಡಿ ಹಣ, ಚಿನ್ನ, ಬೆಳ್ಳಿ ಬೆಲೆ ಬಾಳುವ ವಸ್ತುಗಳು ಕಳ್ಳತನವಾಗಿದೆ. ಇದೆಕ್ಕಲ್ಲ ಕಾರಣ ಆರ್.ಎಸ್.ಎಸ್. ಮತ್ತು ಬಿಜೆಪಿ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರವರು .

ದೇಶದ ಕೊಟ್ಯಂತರ ಭಕ್ತರು ನಂಬಿಕೆ, ವಿಶ್ವಾಸ , ಭಕ್ತಿ ಭಾವನೆಯಿಂದ ಕೊಟ್ಟ ಹಣ ಕಳ್ಳರ ಪಾಲಾಗುತ್ತಿದೆ. ನೆಪ ಮಾತ್ರಕ್ಕೆ ಕೆಲವರನ್ನ ಬಂಧಿಸಿ ದೊಡ್ಡ ವ್ಯಕ್ತಿಗಳನ್ನು ಈ ಪ್ರಕರಣದಿಂದ ಬಚಾವ್ ಮಾಡಲು ಬಿಜೆಪಿ ಪ್ರಮುಖ ರಾಜಕಾರಣಿಗಳು ಕೈಜೋಡಿಸಿದ್ದಾರೆ.

ಈ ಹಗರಣದಲ್ಲಿ ಭಾಗಿಯಾದ ಎಲ್ಲರನ್ನು ಕೊಡಲೇ ಬಂಧಿಸಬೇಕು ಮತ್ತು ಅವರ ಆಸ್ತಿಗಳನ್ನು ಜಪ್ತಿ ಮಾಡಬೇಕು ಸುಪ್ರಿಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಂದ ತನಿಖೆಯಾಗಬೇಕು ಎಂಬ ಒತ್ತಾಯ ನಮ್ಮದು ಎಂದು ಹೇಳಿದರು.

ಕಾಂಗ್ರೆಸ್ ಉಪಯುಕ್ತರಾದ ಅನಂತ್ ಕುಮಾರ್ ಎಂ. ಎಸ್ ಬೆಂಗಳೂರು ಗ್ಯಾರಂಟಿ ಪ್ರಾಧಿಕಾರ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾದ ಜಿ.ಜನಾರ್ದನ್, ಆದಿತ್ಯ, ಆನಂದ್‌,ಚಿನ್ನಿ ಪ್ರಕಾಶ್ ಬೆಂಗಳೂರು ಪಶ್ಚಿಮ ಡಿಸಿಸಿ ಉಪಾಧ್ಯಕ್ಷರಾದ ಕುಶಲ ಅರವೇ ಗೌಡ, ಪುಟ್ಟರಾಜು,ರಂಜಿತ್,ಪವನ್,ಪ್ರವೀಣ್ ರಾವ್, ಚಂದ್ರು,ನವೀನ್, ಸುರೇಶ್ ರವರು ಭಾಗವಹಿಸಿದ್ದರು