ಸಂವಿಧಾನದ ಜನಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿ

ಸಂವಿಧಾನದ ಜನಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿ

ಸಂವಿಧಾನದ ಜನಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿ

ಬಾಗೇಪಲ್ಲಿ: ನಮ್ಮ ದೇಶದ ಸಂವಿಧಾನದ ಆಶಯದಂತೆ ಪ್ರತಿಯೊಬ್ಬ ನಾಗರಿಕರು ನಡೆಯುವುದರೊಂದಿಗೆ ಅದರ ಶ್ರೇಷ್ಠತೆ ಯನ್ನು ಎತ್ತಿ ಹಿಡಿದು ಸದೃಢ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದು  ಸಮಾಜ ಕಲ್ಯಾಣ ಇಲಾಖೆಯ ಮುಖ್ಯಸ್ಥ ನಾಗರಾಜು ಅಭಿಪ್ರಾಯ ಪಟ್ಟರು ಬಾಗೇಪಲ್ಲಿ ಪಟ್ಟಣದ  ಸಮಾಜ ಕಲ್ಯಾಣ ಇಲಾಖೆ ಹಾಗೂ ಸರ್ಕಾರಿ ನೌಕರರ  ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಆಯೋಜಿಸಿದ ಬೈಕ್ ರ‍್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂವಿಧಾನ ರಚನೆಗೊಂಡು 75 ವರ್ಷ ತುಂಬಿದ ಹಿನ್ನೆಲೆ ಇಡೀ ರಾಜ್ಯದ್ಯಂತ ಹೆಮ್ಮೆಯಿಂದ ನಮ್ಮ ಸಂವಿಧಾನದ ಮಹತ್ವ ಸಾರಲು ಸಂಭ್ರಮ ಸಡಗರದೊಂದಿಗೆ ಆಂದೋಲದ ರೀತಿಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜಾಗೃತಿ ಅಂಗವಾಗಿ ಗುಮ್ಮನಾಯಕನ ಪಾಳ್ಯ ಕೋಟೆಗೆ ಜನಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಹಾಸ್ಟೆಲ್ ವಾರ್ಡನ್ ರಾದ ಅರವಿಂದ, ಎಂ.ಕೆ.ನಾಗರಾಜು, ಲಕ್ಷ್ಮೀ ರೆಡ್ಡಿ, ಮೀನಾಕ್ಷಿ, ಸಂತೋಷ ಕುಮಾರ್, ಸುದರ್ಶನ ಬಾಬು, ಉಷಾರಾಣಿ, ಕಲ್ಲಪ್ಪ, ಅಮರೇಶ್ ಇನ್ನೂ ಮುಂತಾದವರು ಪ್ರಮುಖರು ಹಾಜರಿದ್ದರು.