ಸರ್ಕಾರಿ ಕಾಲೇಜುಗಳ ಸೌಲಭ್ಯ ಪಡೆದುಕೊಳ್ಳಿ ಪ್ರಾಂಶುಪಾಲ ಮುನಿರತ್ನಂ

Feb 4, 2024 - 16:43
 0  239
ಸರ್ಕಾರಿ ಕಾಲೇಜುಗಳ ಸೌಲಭ್ಯ ಪಡೆದುಕೊಳ್ಳಿ ಪ್ರಾಂಶುಪಾಲ ಮುನಿರತ್ನಂ

:ನಗರದ ಬಾಲಕಿಯರ  ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2023-24ನೇ ಸಾಲಿನ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಾಂಶುಪಾಲರಾದ ಮುನಿರತ್ನಂ ಖಾಸಗಿ ಕಾಲೇಜುಗಳಿಗಿಂತ ಹೆಚ್ಚು ಸೌಲಭ್ಯಗಳು ಸರ್ಕಾರಿ ಶಾಲೆಗಳು ಮತ್ತು ಕಾಲೇಜುಗಳಲ್ಲಿ ದೊರೆಯುತ್ತದೆ. ವಿದ್ಯಾರ್ಥಿಗಳು ಈ ಸೌಲಭ್ಯಗಳನ್ನು ಪಡೆದುಕೊಂಡು, ಒಳ್ಳೆಯ ವಿದ್ಯಾರ್ಥಿಯಾಗಿ ಒಳ್ಳೆಯ ಪ್ರಜೆಯಾಗಿ ಹೊರಹೊಮ್ಮಬೇಕು ಎಂದು ಕರೆ ನೀಡಿದರು. ವಿದ್ಯಾರ್ಥಿಗಳಿಗೆ ಅವರದೇ ಆದ ಪ್ರತಿಭೆ ಇರುತ್ತದೆ. ಅದನ್ನು ನಾವು ಬೆಳೆಸುವ ಪ್ರಯತ್ನವನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಶಿಕ್ಷಕರು ಬೋಧಿಸಿದ್ದನ್ನು ಶ್ರದ್ಧೆಯಿಂದ  ಅಭ್ಯಾಸ ‌ ಮಾಡಿದಲ್ಲಿ  ಜೀವನದಲ್ಲಿ ಯಶಸ್ಸು  ಕಾಣಲು ಸಾಧ್ಯ. ಶಿಸ್ತನ್ನು ರೂಢಿಸಿಕೊಂಡಲ್ಲಿ ಮುಂದಿನ ಭವಿಷ್ಯ ಉಜ್ವಲವಾಗಿ ಇರುತ್ತದೆ ಎಂದರು. ಧನಾತ್ಮಕವಾದ ಆಸಕ್ತಿಯನ್ನು ಗುರುತಿಸಿಕೊಂಡು ಅದಕ್ಕೆ ಪೂರಕವಾದ ಸಿದ್ಧತೆ ತರಬೇತಿ ಮತ್ತು ಮಾರ್ಗದರ್ಶನವನ್ನು ತೆಗೆದುಕೊಂಡಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದರು. ಕಾಲೇಜಿನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಪ್ರೋತ್ಸಾಹಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿಕ್ಷಕರಿಗೆ ಉಪನ್ಯಾಸಕರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಉಪಪ್ರಾಂಶುಪಾಲರಾದ ದಿನೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಲ್. ನರಸಿಂಹಮೂರ್ತಿ, ನಾಗರಾಜನ್, ಸುರೇಶಪ್ಪ, ವೀ‌ಣಾ, ಅಶ್ವಥ್, ಶ್ರೀನಿವಾಸ್, ಸುರೇಶ್, ರತ್ನಪ್ಪ, ಟಾರ್ಜನ್, ಶ್ರೀವಲ್ಲಿ, ಕವಿತ ಹಾಗೂ ಇತರೆ ಉಪನ್ಯಾಸಕರು, ಶಿಕ್ಷಕರು ಉಪಸ್ಥಿತರಿದ್ದರು.

What's Your Reaction?

like

dislike

love

funny

angry

sad

wow