"ಸಿರಿಗನ್ನಡ ಐಸಿರಿ" ಪ್ರಶಸ್ತಿಗೆ ಕಚುಸಾಪ ಆಯ್ಕೆ

"ಸಿರಿಗನ್ನಡ ಐಸಿರಿ" ಪ್ರಶಸ್ತಿಗೆ ಕಚುಸಾಪ ಆಯ್ಕೆ

"ಸಿರಿಗನ್ನಡ ಐಸಿರಿ" ಪ್ರಶಸ್ತಿಗೆ ಕಚುಸಾಪ ಆಯ್ಕೆ

ಹುಬ್ಬಳ್ಳಿ- ಕೇರಳ ಪಲಕ್ಕಾಡ್ ಅಗ್ರಹಾರದ ವೇದ ರಕ್ಷಣಾ ಸಮಿತಿ, ನುಡಿಸೇವೆ ಹಿನ್ನೆಲೆಯಲ್ಲಿ ನೀಡುವ ರಾಷ್ಟ್ರೀಯ "ಸಿರಿಗನ್ನಡ ಐಸಿರಿ "ಪುರಸ್ಕಾರಕ್ಕೆ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು _ಕೇಂದ್ರ ಸಮಿತಿ ಆಯ್ಕೆಯಾಗಿದೆ ಎಂದು ವೇದ ರಕ್ಷಣಾ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ. ಕರ್ನಾಟಕ ಸಾಹಿತಿ ಸ್ವಾಮಿಗಳನ್ನು ಗುರುತಿಸಿ ಗೌರವಿಸಿದ ಕಚುಸಾಪ ಸರ್ಕಾರದ ಯಾವುದೇ ಅನುದಾನ ಪಡೆಯದೇ ಸಾಹಿತ್ಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಜೊತೆಗೆ ಐದು ಸಾವಿರ ರೂ.ನಗದು, ಆಕರ್ಷಕ ಫಲಕ ನೀಡಿ, ವಿವಾದಾತ್ಮಕ ಕಾದಂಬರಿ ಬರೆದ ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಅವರನ್ನು ಅಭೂತಪೂರ್ವ ಗೌರವಿಸುವುದಾಗಿ ಸಮಿತಿ ಅಧ್ಯಕ್ಷ ರಾಮನಾಥನ್ ಕೆ.ವೈ. ಸಂಚಾಲಕರಾದ ಕು.ರಾಜಲಕ್ಷ್ಮಿ ಅಮಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹುಬ್ಬಳ್ಳಿಯ ಕಚುಸಾಪ ಕಚೇರಿಯಲ್ಲಿ ರಾಜ್ಯ ಸಂಚಾಲಕರಾದ ಶ್ರೀ ಕೃಷ್ಣ ಮೂರ್ತಿ ಕುಲಕರ್ಣಿ ಅವರನ್ನು ಹಾವೇರಿ ಜಿಲ್ಲಾ ಘಟಕದಿಂದ ಸನ್ಮಾನಿಸಿ ಸಿಹಿ ಹಂಚಿ ಸಂಭ್ರಮಿಸಲಾಯಿತು. ಸಾವಿರ ವಚನಗಳ ಸರದಾರರಾದ ಶ್ರೀ ಶೇಖರಗೌಡ ಪಾಟೀಲ, ಡಾ. ಗಂಗಯ್ಯ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.