80% ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ
ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ (ರಿ) ರಾಜ್ಯ ಸಮಿತಿವತಿಯಿಂದ ಇದೆ ತಿಂಗಳ 26/07/2026 ಭಾನುವಾರ ಬೆಳಗ್ಗೆ 10-30 ಕ್ಕೆ ಎ ಕೃಷ್ಣಪ್ಪ ಸಭಾಂಗಣ (ಹಳೆ ಕಡ್ಲೆ ಕಾಯಿ ಮಂಡಿ ನೆಹರು ಮೈದಾನ ಹಿರಿಯೂರು ) ನಲ್ಲಿ ವಿಶ್ವಜ್ಞಾನಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 135 ನೇ ಜಯಂತಿ. ಹಾಗೂ ಪ್ರೊ. ಬಿ ಕೃಷ್ಣಪ್ಪ ರವರ 88 ನೇ ಜಯಂತಿ ಮತ್ತು ಅಂಬೇಡ್ಕರ್ ಸಂವಿಧಾನ ಸಂರಕ್ಷಣಾ ಸಮಿತಿ (ರಿ) ಮೊದಲನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸರ್ವ ಜನಾಂಗದ ವಿದ್ಯಾರ್ಥಿಗಳಿಗೆ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿ ಯು ಸಿ ಯಲ್ಲಿ ಪಾಸಾದ ಶೇಕಡ 80%ಕಿಂತ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಕರ ಪತ್ರವನ್ನು ಇಂದು ಹಿರಿಯೂರಿನ ಪ್ರವಾಸಿ ಮಂದಿರದಲ್ಲಿ ಬಿಡುಗಡೆ ಗೊಳಿಸಲಾಹಯಿತು. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ವಿದ್ಯಾರ್ಥಿಗಳ 2 ಪಾಸ್ ಪೋರ್ಟ್ ಭಾವ ಚಿತ್ರ ಎಸ್ ಎಸ್ ಎಲ್ ಸಿ ಅಥವಾ ದ್ವಿತೀಯ ಪಿ ಯು ಸಿ ಮಾಸ್ ಕಾರ್ಡ್ ವಾಸ ಸ್ಥಳ ದೃಡೀಕರಣ ಪತ್ರ ಇಷ್ಟು ದಾಖಲಾತಿಗಳನ್ನು ದಿನಾಂಕ 20/7/2026 ಒಳಗಾಗಿ ಸಲ್ಲಿಸ ಬೇಕು. ಈ ಸಂದರ್ಭದಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಾಮಚಂದ್ರ ಕೆ, ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ರಾಘವೇಂದ್ರ ಆರ್, ರಾಜ್ಯ ಸಂಘಟನಾ ಕಾರ್ಯದರ್ಶಿಯಾದ ಮಾರುತಿ ಎನ್, ಜಿಲ್ಲಾ ಕಾರ್ಯಧ್ಯಕ್ಷರಾದ ರಂಗನಾಥ್ (ಬಗ್ಗನಾಡು) ಅಲ್ಪ ಸಂಖ್ಯಾತರ ಘಟಕ ಜಿಲ್ಲಾಧ್ಯಕ್ಷರಾದ ಸಾಧಿಕ್ (ಸೀಮೆ ಎಣ್ಣೆ) ಜಿಲ್ಲಾ ಉಪಾಧ್ಯಕ್ಷರುಗಳಾದ ಲಕ್ಷ್ಮಣ್ ರಾವ್, ಕೆಂಚಪ್ಪ ಆಟೋ, ಹಿರಿಯೂರು ತಾಲ್ಲೂಕು ಅಧ್ಯಕ್ಷರಾದ ಓಂಕಾರ್ ಕೆ ಮೂರ್ತಿ (ದೊಡ್ಡಘಟ್ಟ) ತಾಲ್ಲೂಕು ಕಾರ್ಯಧ್ಯಕ್ಷರಾದ ರಂಗಸ್ವಾಮಿ (ಆಟೋ) ಗೌರವಧ್ಯಕ್ಷರಾದ ದೇವರಾಜ್, ನಗರ ಅಧ್ಯಕ್ಷರಾದ ದಿಲೀಪ್, ಆಟೋ ಘಟಕ ಅಧ್ಯಕ್ಷರಾದ ರಮೇಶ್, ತಾಲ್ಲೂಕು ಸಂಘಟನಾ ಕಾರ್ಯದರ್ಶಿಗಳಾದ ರಾಘವೇಂದ್ರ ಸೀಗೆಹಟ್ಟಿ,ಅಜಯ್, ತಾಲ್ಲೂಕು ಕಾರ್ಯದರ್ಶಿಯಾದ ಗಿರೀಶ್ ಹಾಗೂ ಇನ್ನೂ ಉಪಸ್ಥಿತರಿದ್ದರು.