ಸುದ್ದಿಕಿರಣ ವರದಿ
ಶನಿವಾರ, ಜನವರಿ 15
ನಾಗದೇವರಿಗೆ ಕದಳೀಫಲ ಸಮರ್ಪಣೆ
ಉಡುಪಿ: ಹೋಟೆಲ್ ಕಿದಿಯೂರು ನಾಗದೇವರ ಸನ್ನಿಧಿಯಲ್ಲಿ ಮಕರಸಂಕ್ರಾಂತಿ ಅಂಗವಾಗಿ ಹೋಟೆಲ್ ನೌಕರರ ವೃಂದದವರಿಂದ ಕದಳೀಫಲ (ಬಾಳೆಹಣ್ಣು) ಸಮರ್ಪಿಸಲಾಯಿತು.
ನಾಗದೇವರ ಮಹಾಪೂಜೆ ಬಳಿಕ ಸೇರಿದ ನೂರಾರು ಭಕ್ತರಿಗೆ ಪ್ರಸಾದ ರೂಪದಲ್ಲಿ ಅದನ್ನು ವಿತರಿಸಲಾಯಿತು.
ಹೋಟೆಲ್ ಕಿದಿಯೂರು ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಹೀರಾ ಬಿ. ಕಿದಿಯೂರು, ನಿರ್ದೇಶಕ ಜಿತೇಶ ಕಿದಿಯೂರು, ನೌಕರ ವೃಂದದವರು ಇದ್ದರು