Wednesday, July 6, 2022
Home ಅಧ್ಯಾತ್ಮ ಚಂದ್ರಮೌಳೀಶ್ವರ ವರ್ಷಾವಧಿ ರಥೋತ್ಸವ ಸಂಪನ್ನ

ಚಂದ್ರಮೌಳೀಶ್ವರ ವರ್ಷಾವಧಿ ರಥೋತ್ಸವ ಸಂಪನ್ನ

ಚಂದ್ರಮೌಳೀಶ್ವರ ವರ್ಷಾವಧಿ ರಥೋತ್ಸವ ಸಂಪನ್ನ

ಉಡುಪಿ, ಡಿ. 6 (ಸುದ್ದಿಕಿರಣ ವರದಿ): ಇಲ್ಲಿನ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಮಠದ ಸುಪರ್ದಿಗೊಳಪಟ್ಟ ಇತಿಹಾಸ ಪ್ರಸಿದ್ಧ ಶ್ರೀ ಚಂದ್ರಮೌಳೀಶ್ವರ ದೇವರ ಕಾಲಾವಧಿ ರಥೋತ್ಸವ ಸೋಮವಾರ ವಿವಿಧ ಧಾರ್ಮಿಕ ವಿಧಿ-ವಿಧಾನದೊಂದಿಗೆ ಸಂಭ್ರಮದಿಂದ ಸಂಪನ್ನಗೊಂಡಿತು.

ರಥಾರೋಹಣ
ದೇವಾಲಯದ ಆಡಳಿತ ಮೊಕ್ತೇಸರ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಮಾರ್ಗದರ್ಶನ ಹಾಗೂ ದಿವ್ಯೋಪಸ್ಥಿತಿಯೊಂದಿಗೆ ಉತ್ಸವ, ಬಲಿ ನಡೆಯಿತು.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಅದಮಾರು ಮಠದ ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಕಾಣಿಯೂರು ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ರಥೋತ್ಸವದಲ್ಲಿ ಭಾಗವಹಿಸಿದ್ದರು.

ಮಧ್ಯಾಹ್ನ ರಥಾರೋಹಣ ನಡೆದು ಪೂಜೆ ನಡೆಸಲಾಯಿತು. ನಂತರ ರಥವನ್ನು ಸಾಂಕೇತಿಕವಾಗಿ ಸ್ವಲ್ಪ ಮುಂದಕ್ಕೆ ಎಳೆಯಲಾಯಿತು.

ಪಲ್ಲಪೂಜೆ
ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಮಧ್ಯಾಹ್ನದ ಮಹಾಪೂಜೆ, ಬಳಿಕ ಪಲ್ಲಪೂಜೆ ನಡೆಸಲಾಯಿತು.

ಸಾರ್ವಜನಿಕ ಅನ್ನಸಂತರ್ಪಣೆ ನಡೆಸಲಾಯಿತು.

ರಥೋತ್ಸವ
ಸಂಜೆ ಶ್ರೀಗಳ ಉಪಸ್ಥಿತಿಯಲ್ಲಿ ಚೆಂಡೆ- ವಾದ್ಯದೊಂದಿಗೆ ರಥೋತ್ಸವ ನಡೆಯಿತು. ವಿಶೇಷ ಸುಡುಮದ್ದು ಪ್ರದರ್ಶನವಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ, ರಥ ಎಳೆದರು.

ಪುತ್ತಿಗೆ ಮಠದ ಆಡಳಿತಾಧಿಕಾರಿ ಪ್ರಸನ್ನಾಚಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!